Karnataka news paper

ಜ. 10 ರಿಂದ ಲಸಿಕೆ ಪೂರ್ಣಗೊಂಡರಷ್ಟೇ ರೈಲು ಹತ್ತಲು ಅವಕಾಶ! ಮಾಸ್ಕ್ ಧರಿಸದವರಿಗೆ ₹500 ದಂಡ!


ಹೊಸದಿಲ್ಲಿ: ಭಾರತದಲ್ಲಿ ವೇಗವಾಗಿ ಹೆಚ್ಚುತ್ತಿರುವ ಕೊರೊನಾವೈರಸ್ ಸೋಂಕನ್ನು ಗಮನದಲ್ಲಿಟ್ಟುಕೊಂಡು, ದಕ್ಷಿಣ ರೈಲ್ವೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಶನಿವಾರ ನೂತನ ಕೊರೊನಾ ವೈರಸ್ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಜನವರಿ 10 ರಿಂದ, ಚೆನ್ನೈ ಪ್ರದೇಶದಲ್ಲಿ ಕೊರೊನಾ ಲಸಿಕೆಯ ಎರಡೂ ಡೋಸ್ ಪೂರ್ಣಗೊಂಡವರಿಗೆ ಮಾತ್ರವೇ ರೈಲು ಹತ್ತಲು ಅನುಮತಿಸಲಾಗುವುದು ಎಂದು ರೈಲ್ವೆ ಹೇಳಿದೆ. ಅಷ್ಟೇ ಅಲ್ಲದೆ, ರೈಲ್ವೆ ನಿಲ್ದಾಣದ ಆವರಣದಲ್ಲಿ ಮಾಸ್ಕ್ ಧರಿಸದ ಪ್ರಯಾಣಿಕರಿಗೆ 500 ರೂಪಾಯಿ ದಂಡ ವಿಧಿಸಲು ದಕ್ಷಿಣ ರೈಲ್ವೆ ನಿರ್ಧರಿಸಿದೆ.

ಜನವರಿ 6 ರಿಂದಲೇ ಹಲವು ನಿರ್ಬಂಧಗಳು ಜಾರಿ
ತಮಿಳುನಾಡಿನಲ್ಲಿ, ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಮತ್ತು ಓಮಿಕ್ರಾನ್ ಪ್ರಕರಣಗಳಿಣಂದಾಗಿ, ರಾಜ್ಯ ಸರ್ಕಾರವು ಜನವರಿ 6 ರಿಂದ ವಿವಿಧ ನಿರ್ಬಂಧ ವಿಧಿಸಿದೆ. ಶೇ.50 ರಷ್ಟು ಸಾಮರ್ಥ್ಯದೊಂದಿಗೆ ಉಪನಗರ ರೈಲು ಸೇವೆ ಮುಂದುವರಿಸುವುದಾಗಿ ರೈಲ್ವೆಗೆ ಮಾರ್ಗಸೂಚಿಗಳನ್ನು ನೀಡಲಾಗಿದೆ. ಅದೇ ಸಮಯದಲ್ಲಿ, ಪ್ರಯಾಣಿಕರು ಪ್ರಯಾಣದ ಟಿಕೆಟ್ ಅಥವಾ ಮಾಸಿಕ ಸೀಸನ್ ಟಿಕೆಟ್ (ಎಂಎಸ್‌ಟಿ) ನೀಡುವಾಗ ಲಸಿಕೆ ಪ್ರಮಾಣಪತ್ರ ತೋರಿಸಬೇಕು ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಕೋವಿಡ್‌ ನಡುವೆಯೂ ರೈಲ್ವೆಗೆ ಭರ್ಜರಿ ಆದಾಯ: ಪ್ರಿಮಿಯಂ ಟಿಕೆಟ್‌ನಿಂದ 6 ತಿಂಗಳಲ್ಲಿ ₹ 1033 ಕೋಟಿ ಕಲೆಕ್ಷನ್!

ಕೊರೊನಾ ಹರಡುವಿಕೆ ಹೆಚ್ಚಳ
ದೇಶದಲ್ಲಿ ಕೊರೊನಾ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಲೇ ಇವೆ. ಕಳೆದ 24 ಗಂಟೆಗಳಲ್ಲಿ 1 ಲಕ್ಷದ 59 ಸಾವಿರದ 632 ಹೊಸ ಕರೋನಾ ಪ್ರಕರಣಗಳು ವರದಿಯಾಗಿದ್ದು, ಇದು ಕಳೆದ 224 ದಿನಗಳಲ್ಲಿ ಅತಿ ಹೆಚ್ಚು. ಒಮಿಕ್ರಾನ್‌ನ 552 ಹೊಸ ಪ್ರಕರಣಗಳು ವರದಿಯಾಗಿವೆ. ಒಂದೇ ದಿನದಲ್ಲಿ 327 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ದೇಶದಲ್ಲಿ ಸಕ್ರಿಯ ರೋಗಿಗಳ ಸಂಖ್ಯೆ 5 ಲಕ್ಷ 90 ಸಾವಿರ 611 ಕ್ಕೆ ಏರಿದೆ, ಇದು ಸುಮಾರು 197 ದಿನಗಳಲ್ಲಿ ಗರಿಷ್ಠವಾಗಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 327 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 4 ಲಕ್ಷ 83 ಸಾವಿರ 790 ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 327 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 4 ಲಕ್ಷ 83 ಸಾವಿರ 790 ಕ್ಕೆ ಏರಿಕೆಯಾಗಿದೆ.

ರೈಲ್ವೆ ಸರಕು ಸಾಗಣೆ ಚುರುಕು: ಪ್ರತಿ ವರ್ಷ 102 ಕೋಟಿ ಟನ್ನಿಗೂ ಅಧಿಕ ಸರಕು ಸಾಗಣೆ!

ಪ್ರತಿ ಸೋಂಕಿತ ವ್ಯಕ್ತಿಯಿಂದ 4 ಜನರಿಗೆ ಹೊಸ ಸೋಂಕು
ಪ್ರಸ್ತುತ, ಭಾರತದಲ್ಲಿ ಪ್ರತಿ ಸೋಂಕಿತ ವ್ಯಕ್ತಿಯಿಂದ ಇತರೆ ನಾಲ್ಕು ಜನರಿಗೆ ಸೋಂಕು ತಗುಲುತ್ತಿದೆ. ಈ ಸ್ಪ್ರೆಡ್ ದರವನ್ನು RO ಮೌಲ್ಯ ಎಂದು ಕರೆಯಲಾಗುತ್ತದೆ. ಸೋಂಕಿನ ಹರಡುವಿಕೆಯ ಪ್ರಮಾಣವು ಹೆಚ್ಚಾಗಿರುವುದು ಐಐಟಿ ಮದ್ರಾಸ್ ವಿಶ್ಲೇಷಣಾ ವರದಿಯಲ್ಲಿ ಬೆಳಕಿಗೆ ಬಂದಿದೆ. ಅದರಂತೆ ಫೆಬ್ರವರಿ 1ರಿಂದ 15ರ ನಡುವೆ ಮೂರನೇ ಅಲೆ ಉತ್ತುಂಗಕ್ಕೇರುವ ಸಾಧ್ಯತೆ ಇದೆ. RO ಮೌಲ್ಯವು ಒಂದಕ್ಕಿಂತ ಕಡಿಮೆಯಾದರೆ, ಸೋಂಕಿತ ಜನರು ಹೆಚ್ಚು ಸೋಂಕಿಗೆ ಒಳಗಾಗಲು ಸಾಧ್ಯವಾಗುವುದಿಲ್ಲ ಮತ್ತು ಹೀಗಾಗಿ ಪ್ರಕರಣಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.



Read more…

[wpas_products keywords=”deal of the day”]