Karnataka news paper

ಎಸ್‌ಟಿ ಸೋಮಶೇಖರ್‌ ಪುತ್ರನಿಗೆ ಬ್ಲ್ಯಾಕ್‌ಮೇಲ್! ಓರ್ವ ಆರೋಪಿ ಬಂಧನ


ಹೈಲೈಟ್ಸ್‌:

  • ಫೋಟೋ ಮುಂದಿಟ್ಟು ಎಸ್‌ಟಿ ಸೋಮಶೇಖರ್‌ ಪುತ್ರನಿಗೆ ಬ್ಲ್ಯಾಕ್‌ಮೇಲ್!
  • ಎಸ್‌ಟಿ ಸೋಮಶೇಖರ್ ಪುತ್ರ ನಿಶಾಂತ್ ಸೋಮಶೇಖರ್‌ಗೆ ಬ್ಲಾಕ್‌ ಮೇಲ್
  • ಸಿಸಿಬಿ ಪೊಲೀಸರಿಂದ ಓರ್ವ ಆರೋಪಿ ಬಂಧನ

ಬೆಂಗಳೂರು: ಯುವತಿಯೊಬ್ಬರ ಜೊತೆ ಇದ್ದ ಎಡಿಟ್‌ ಮಾಡಿರುವ ಫೋಟೋಗಳನ್ನು ಮುಂದಿಟ್ಟುಕೊಂಡು ಸಹಕಾರಿ ಸಚಿವ ಎಸ್‌ಟಿ ಸೋಮಶೇಖರ್ ಪುತ್ರ ನಿಶಾಂತ್ ಸೋಮಶೇಖರ್‌ಗೆ ಬ್ಲಾಕ್‌ ಮೇಲ್ ಮಾಡಿದ ಆರೋಪದಲ್ಲಿ ಓರ್ವವನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನವೀನ್ ಭಟ್‌ ಎಂದು ಗುರುತಿಸಲಾಗಿದೆ. ಈತನ ಜೊತೆಗೆ ಗನ್ ಮ್ಯಾನ್ ಒಬ್ಬರನ್ನು ಕೂಡಾ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಸಚಿವ ಎಸ್‌ ಟಿ ಸೋಮಶೇಖರ್ ಪುತ್ರ ಯುವತಿಯೊಬ್ಬರ ಜೊತೆಗಿರುವ ಎಡಿಟೆಡ್‌ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ನಡೆಸಲಾಗಿದೆ ಎಂಬುವುದು ಕೇಳಿಬಂದಿರುವ ಆರೋಪವಾಗಿದೆ. ಈ ಪ್ರಕರಣದಲ್ಲಿ ಶಾಸಕಿಯೊಬ್ಬರ ಪುತ್ರಿಯೂ ಇದ್ದಾರೆಂಬ ಸಂಗತಿಯೂ ಬಯಲಾಗಿದೆ. ಆದರೆ ಈಕೆ ಯಾರು ಎಂಬುವುದು ಇನ್ನು ಸ್ಪಷ್ಟಗೊಂಡಿಲ್ಲ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ನಗರದಲ್ಲಿ ಮತ್ತೊಂದು ಸೆಕ್ಸ್ ಬ್ಲಾಕ್ ಮೇಲ್ ಪ್ರಕರಣ ಬಯಲಿಗೆ

ಎಸ್‌ಟಿ ಸೋಮಶೇಖರ್ ಪುತ್ರ ನಿಶಾಂತ್‌ಗೆ ಕೆಲವು ದಿನಗಳ ಹಿಂದೆ ವಾಟ್ಸಪ್‌ ಮೂಲಕ ವಿಡಿಯೋವನ್ನು ಕಳಿಸಿದ್ದ ಆರೋಪಿಗಳು ಒಂದು ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದೆ ಇದ್ದಲ್ಲಿ ವಿಡಿಯೋ ಬಹಿರಂಗ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಿಶಾಂತ್

ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ವಿಡಿಯೋವನ್ನು ಎಡಿಟ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಸಚಿವರ ಪುತ್ರನ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದರು. ಇದೀಗ ಓರ್ವ ಆರೋಪಿ ಸಿಸಿಬಿ ಪೊಲೀಸರ ವಶಕ್ಕೆ ಸಿಕ್ಕಿಬಿದ್ದಿದ್ದಾರೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ಶುರುವಾಗಿದೆ. ಈ ಬಗ್ಗೆ ಸ್ಪಷ್ಟೀಕರಣ ಕೇಳಲು ಸಚಿವ ಎಸ್‌.ಟಿ ಸೋಮಶೇಖರ್‌ ಅವರಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕಾರ ಮಾಡಲಿಲ್ಲ.



Read more

[wpas_products keywords=”deal of the day sale today offer all”]