Online Desk
ಸಿಡ್ನಿ: ಆಶಸ್ ಸರಣಿಯಲ್ಲಿ 3-0 ಅಂತರದ ಮುನ್ನಡೆಯಲ್ಲಿರುವ ಆಸ್ಟ್ರೇಲಿಯಾ 4ನೇ ಪಂದ್ಯದ ಮೇಲೂ ಬಿಗಿಹಿಡಿತ ಸಾಧಿಸಿದೆ. ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಉಸ್ಮಾನ್ ಖ್ವಾಜಾ ಎರಡನೇ ಇನ್ನಿಂಗ್ಸ್ ನಲ್ಲೂ ಶತಕ ಸಿಡಿಸಿದ್ದಾರೆ.
ಈ ಸಾಧನೆ ಮಾಡಿದ ವಿಶ್ವದ 70ನೇ ಬ್ಯಾಟ್ಸ್‌ಮನ್ ಎಂಬ ಗರಿಯನ್ನು ಖ್ವಾಜಾ ಪಡೆದುಕೊಂಡಿರು. ಖ್ವಾಜಾ ಅವರ ಅಜೇಯ 101 ರನ್ ಗಳ ಶತಕದ ನೆರವಿನಿಂದ ಆಸ್ಟ್ರೇಲಿಯಾ ಇಂಗ್ಲೆಂಡ್‌ಗೆ 388 ರನ್‌ಗಳ ಗುರಿಯನ್ನು ನೀಡಿದೆ. ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್ ಅನ್ನು 6 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 8 ವಿಕೆಟ್‌ಗಳ ನಷ್ಟಕ್ಕೆ 416 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 294 ರನ್‌ಗಳಿಗೆ ಆಲೌಟ್ ಆಯಿತು. ಶನಿವಾರದ ಆಟದ ಅಂತ್ಯಕ್ಕೆ ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಯಾವುದೇ ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿದೆ. ಆಸ್ಟ್ರೇಲಿಯಾಕ್ಕಿಂತ ಇಂಗ್ಲೆಂಡ್ 358 ರನ್ ಹಿಂದಿದೆ. ಆಸ್ಟ್ರೇಲಿಯಾ ಪರ ಖ್ವಾಜಾ ಹೊರತಾಗಿ ಕ್ಯಾಮರೂನ್ ಗ್ರೀನ್ ಕೂಡ 74 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಖ್ವಾಜಾ ಮತ್ತು ಗ್ರೀನ್ ನಡುವೆ 179 ರನ್‌ಗಳ ಜೊತೆಯಾಟ ಆಸ್ಟ್ರೇಲಿಯಾ ಉತ್ತಮ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು..
ಪಂದ್ಯದ ನಾಲ್ಕನೇ ದಿನ
ಇಂಗ್ಲೆಂಡ್ ಏಳು ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿ ದಿನದಾಟ ಆರಂಭಿಸಿತು. ಒಟ್ಟು 289 ಸ್ಕೋರ್‌ನಲ್ಲಿ ಬೈರ್‌ಸ್ಟೋವ್ ವಿಕೆಟ್ ಪತನವಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 122 ರನ್‌ಗಳ ಮುನ್ನಡೆಯೊಂದಿಗೆ ಕ್ರೀಜ್ ಗೆ ಇಳಿಯಿತು. ಡೇವಿಡ್ ವಾರ್ನರ್ ರೂಪದಲ್ಲಿ ತಂಡದ ಮೊದಲ ವಿಕೆಟ್ ಪತನವಾಯಿತು. ಮಾರ್ನಸ್ ಲ್ಯಾಬುಸ್ಚಾಗ್ನೆ ಮತ್ತು ಮಾರ್ಕಸ್ ಹ್ಯಾರಿಸ್ ಸ್ವಲ್ಪ ಸಮಯದವರೆಗೆ ಇನ್ನಿಂಗ್ಸ್ ಅನ್ನು ನಿಭಾಯಿಸಿದರು. ಆದರೆ ಮಾರ್ಕ್ ವುಡ್ ಈ ಜೊತೆಯಾಟವನ್ನು ಮುರಿದರು. ಸ್ಟೀವ್ ಸ್ಮಿತ್ 23 ರನ್ ಗಳಿಸಿ ಲೀಚ್ ಬೌಲಿಂಗ್ ನಲ್ಲಿ ಔಟಾದರು. ಬಳಿಕ, ಖ್ವಾಜಾ ಮತ್ತು ಗ್ರೀನ್ ಅದ್ಭುತ ಶತಕದ ಜೊತೆಯಾಟ ನಡೆಸಿದರು.
ಗ್ರೀನ್ ಅವರನ್ನು ಔಟ್ ಮಾಡುವ ಮೂಲಕ ಜೊತೆಯಾಟವನ್ನು ಲೀಚ್ ಮುರಿದರು. ಮುಂದಿನ ಎಸೆತದಲ್ಲಿಯೇ ಅಲೆಕ್ಸ್ ಕ್ಯಾರಿಯನ್ನೂ ಲೀಚ್ ಔಟ್ ಮಾಡಿದರು. ಲೀಚ್ ಹ್ಯಾಟ್ರಿಕ್ ಸಾಧಿಸಬೇಕೆನ್ನುವಾಗಲೇ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.
Read more…
[wpas_products keywords=”deal of the day sports items”]