The New Indian Express
ನವದೆಹಲಿ: ಇತ್ತೀಚಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಪಂಜಾಬ್ ಶಾಸಕ ಫತ್ತೇಜಾಂಗ್ ಸಿಂಗ್ ಬಾಜ್ವಾ ಅವರಿಗೆ ಕೇಂದ್ರ ಸರ್ಕಾರ ವೈ+ ವರ್ಗದ ವಿಐಪಿ ಭದ್ರತೆಯನ್ನು ಒದಗಿಸಿದೆ. 63 ವರ್ಷದ ಖಾಡಿಯಾನ್ ವಿಧಾನಸಭಾ ಕ್ಷೇತ್ರದ ಶಾಸಕ ಫತೇಜಾಂಗ್ ಸಿಂಗ್ ಬಾಜ್ವಾ ಅವರು ಡಿಸೆಂಬರ್ 28 ರಂದು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಫತೇಜಾಂಗ್ ಸಿಂಗ್ ಬಾಜ್ವಾ ಅವರಿಗೆ ಪಂಜಾಬ್ ನಲ್ಲಿ ವೈ+ ಭದ್ರತೆ ಒದಗಿಸಲಾಗಿದೆ ಎಂದು ಭದ್ರತಾ ಸಂಸ್ಥೆಯ ಮೂಲಗಳು ತಿಳಿಸಿವೆ. ಭದ್ರತಾ ಕಾರ್ಯವನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (ಸಿಆರ್ ಪಿಎಫ್ ) ನೀಡಲಾಗಿದೆ. ಈ ಭದ್ರತಾ ವರ್ಗೀಕರಣದ ಭಾಗವಾಗಿ ಬಾಜ್ವಾ ಅವರು ರಾಜ್ಯದಲ್ಲಿ ಪ್ರಯಾಣಿಸುವಾಗಲೆಲ್ಲಾ 3-4 ಸಶಸ್ತ್ರ ಕಮಾಂಡೋಗಳ ತಂಡವನ್ನು ಹೊಂದಿರುತ್ತಾರೆ ಎಂದು ಹೇಳಲಾಗಿದೆ.
ಇತ್ತೀಚಿಗೆ ಬಿಜೆಪಿಗೆ ಸೇರ್ಪಡೆಗೊಂಡ ಪಂಜಾಬ್ ರಾಜಕಾರಣಿ ರಾಣಾ ಗುರ್ಮಿತ್ ಸಿಂಗ್ ಸೋಧಿಗೆ ಝಡ್ + ವರ್ಗದ ವಿಐಪಿ ಭದ್ರತೆ ನೀಡಲಾಗಿತ್ತು. ಮಾಜಿ ಶಿರೋಮಣಿ ಅಕಾಲಿ ದಳದ ನಾಯಕ ಮತ್ತು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಮುಖ್ಯಸ್ಥ ಮಂಜಿಂದರ್ ಸಿಂಗ್ ಸಿರ್ಸಾ ಅವರ ಭದ್ರತೆಯನ್ನು ಕೇಂದ್ರವು ವೈ ವರ್ಗದಿಂದ ಝಡ್ ಗೆ ಅಪ್ ಗ್ರೆಡ್ ಮಾಡಿದೆ.
Read more
[wpas_products keywords=”deal of the day”]