Source : The New Indian Express
ನವದೆಹಲಿ: ಬಿಜೆಪಿ ಸಂಸದ, ಬಹುಭಾಷಾ ನಟ ರವಿ ಕಿಶನ್ ಅವರು ಲೋಕಸಭೆಯಲ್ಲಿ ಸಿನಿಮಾ ಕಲಾವಿದರಿಗೆ ಗೌರವಧನ ನೀಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಇದನ್ನೂ ಓದಿ: ತಮಿಳು ಚಿತ್ರನಿರ್ದೇಶಕ ತ್ಯಾಗರಾಜನ್ ರಸ್ತೆ ಬದಿ ಶವವಾಗಿ ಪತ್ತೆ: ಕಾಡಿದ್ದ ಕಡುಬಡತನ ಮತ್ತು ಖಿನ್ನತೆ
ಸದನದಲ್ಲಿ ಈ ಹಿಂದೆ ಅರುಣ್ ಜೈಟ್ಲಿ ಮತ್ತು ಸುಷ್ಮಾ ಸ್ವರಾಜ್ ಅವರು ಗಾಯಕರು, ಗೀತರಚನಕಾರರ ಪರವಾಗಿ ದನಿಯೆತ್ತಿದ್ದನ್ನು ರವಿ ಕಿಶನ್ ಸ್ಮರಿಸಿದ್ದಾರೆ. ಇದೇ ವೇಳೆ ಗಾಯಕರು, ಗೀತರಚನಕಾರರಿಗೆ ಗೌರವ ಧನ ನೀಡಿದ ಬಿಜೆಪಿಗೆ ರವಿ ಕಿಶನ್ ಧನ್ಯವಾದ ಅರ್ಪಿಸಿದರು.
ಇದನ್ನೂ ಓದಿ: ಕಲಾವಿದರಿಗೆ ಸೋಷಿಯಲ್ ಮೀಡಿಯಾ ಪ್ರೆಸೆನ್ಸ್ ಅನಿವಾರ್ಯ, ಆದರೆ ಅದೇ ಎಲ್ಲವೂ ಅಲ್ಲ: ನಿಕ್ಕಿ ಗಲ್ರಾನಿ
ಸಿನಿಮಾರಂಗದಲ್ಲಿ ಕಲಾವಿದರು ಕಿರು ಅವಧಿಗೆ ಮಾತ್ರ ಚಾಲ್ತಿಯಲ್ಲಿರುತ್ತಾರೆ. ದೀರ್ಘ ಸಮಯ ಕೆಲಸ ಕಂಡುಕೊಳ್ಳುವುದು ಅವರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಸಿನಿಮಾರಂಗವನ್ನು ನೆಚ್ಚಿಕೊಂಡು ಬದುಕು ಸಾಗಿಸುವುದು ಕಷ್ಟ ಎಂದು ರವಿ ಕಿಶನ್ ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ತಮ್ಮ ಇಬ್ಬರು ಪುತ್ರಿಯರಿಗೆ ನೀಡಿದ ಅಮೂಲ್ಯ ಸಲಹೆ
ಇವೆಲ್ಲಾ ಕಾರಣಗಳಿಂದ ವಯಸ್ಸಾದ ಕಲಾವಿದರ ಆರೋಗ್ಯ ನಿರ್ವಹಣೆ ಚಿಕಿತ್ಸಾ ವೆಚ್ಚ ಎಲ್ಲದಕ್ಕೂ ಸಹಾಯವಾಗುವಂತೆ ಸರ್ಕಾರ ಅವರಿಗೆ ಗೌರವ ಧನ ನಿಗದಿ ಪಡಿಸಬೇಕು ಎಂದು ರವಿ ಕಿಶನ್ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ವಿಶ್ವದಾಖಲೆ: ಜಗತ್ತಿನಲ್ಲೇ 20 ಕೋಟಿ ಚಂದಾದಾರರನ್ನು ಪಡೆದ ಮೊದಲ ಯೂಟ್ಯೂಬ್ ಚಾನೆಲ್ ಭಾರತದ ಟಿ-ಸಿರೀಸ್