ಹೈಲೈಟ್ಸ್:
- ಜನವರಿ 10ರಂದು 9ನೇ ಸರಣಿಯ ‘ಸಾವರಿನ್ ಗೋಲ್ಡ್ ಬಾಂಡ್’ಗಳ ಬಿಡುಗಡೆ
- ಜ.14ರವರೆಗೆ ಗೋಲ್ಡ್ ಬಾಂಡ್ ನೋಂದಣಿಗೆ ಅವಕಾಶ
- ಈ ಬಾಂಡ್‌ಗಳನ್ನು ಪಡೆಯುವುದು ಹೇಗೆ? ಬಡ್ಡಿ ಎಷ್ಟು? ಯಾರು ವಿತರಿಸುತ್ತಾರೆ? ಎಂಬ ಸಮಗ್ರ ಮಾಹಿತಿ ಇಲ್ಲಿದೆ
ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ಹೊಸ ಸರಣಿಯ ಚಿನ್ನದ ಬಾಂಡ್‌ಗಳಿಗೆ ಪ್ರತಿ ಗ್ರಾಂಗೆ 4,786 ರೂಪಾಯಿಗಳ ವಿತರಣೆಯ ಬೆಲೆಯನ್ನು ನಿಗದಿಪಡಿಸಿದೆ. ಇದರಲ್ಲಿ ಜನವರಿ 14ರವರೆಗೆ ಹೂಡಿಕೆ ಮಾಡಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮತ್ತು ಡಿಜಿಟಲ್ ಮೋಡ್ ಮೂಲಕ ಪಾವತಿಸುವ ಹೂಡಿಕೆದಾರರಿಗೆ ಪ್ರತಿ ಗ್ರಾಂಗೆ 50 ರೂಪಾಯಿ ರಿಯಾಯಿತಿ ನೀಡಲಾಗುವುದು. ಅಂದರೆ ಅಂತಹ ಹೂಡಿಕೆದಾರರಿಗೆ ಪ್ರತಿ ಗ್ರಾಮ್‌ಗೆ 4,736 ರೂ. ದರದಲ್ಲಿ ಗೋಲ್ಡ್ ಬಾಂಡ್‌ನಲ್ಲಿ ಹೂಡಿಕೆ ಮಾಡಬಹುದು.
ಬಾಂಡ್‌ಗಳನ್ನು ಯಾರು ವಿತರಿಸುತ್ತಾರೆ?
ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವಿತರಿಸುತ್ತದೆ. ಇದರಲ್ಲಿ ಪ್ರತಿ ಬಾಂಡ್ ಒಂದು ಗ್ರಾಂ ಚಿನ್ನಕ್ಕೆ ಸಮಾನವಾದ ಮೌಲ್ಯವನ್ನು ಪ್ರತಿನಿಧಿಸುತ್ತದೆ. ಕೊರೊನಾ ವೈರಸ್‌ನಿಂದಾಗಿ ಎಲ್ಲ ಕ್ಷೇತ್ರಗಳೂ ನಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿವಾಗಿದೆ.
ಬಡ್ಡಿ ಎಷ್ಟು?
ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಡಿ ನಿಮ್ಮ ಹೂಡಿಕೆಯ ಮೊತ್ತಕ್ಕೆ ವಾರ್ಷಿಕ ಶೇ.2.5 ಬಡ್ಡಿ ನೀಡಲಾಗುತ್ತದೆ. ಬಡ್ಡಿಯನ್ನು 6 ತಿಂಗಳಿಗೆ ಒಮ್ಮೆ ಪಾವತಿಸಲಾಗುತ್ತದೆ.
ಯಾರು ಖರೀದಿಸಬಹುದು? ಎಷ್ಟು ಖರೀದಿಸಬಹುದು?
ವೈಯಕ್ತಿಕವಾಗಿ ಅಥವಾ ಹಿಂದು ಅವಿಭಕ್ತ ಕುಟುಂಬಗಳು ವಾರ್ಷಿಕ ಗರಿಷ್ಠ 4 ಕೆಜಿ ಮೌಲ್ಯದ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಬಹುದು. ಇನ್ನು ಟ್ರಸ್ಟ್ ಗಳು, ಇದಕ್ಕೆ ಸರಿಸಮಾನವಾದ ಸಂಸ್ಥೆಗಳು ಒಂದು ವಿತ್ತೀಯ ವರ್ಷದಲ್ಲಿ ಗರಿಷ್ಠ 20 ಕೆಜಿ ಮೌಲ್ಯದ ಎಸ್‌ಜಿಬಿ ಖರೀದಿಸಬಹುದು. ಒಬ್ಬ ವ್ಯಕ್ತಿ ಕನಿಷ್ಠ 1 ಬಾಂಡ್ ಕೊಳ್ಳಬೇಕು. ಇದು 8 ವರ್ಷದ ಅನಂತರ ಕೈಗೆ ಸಿಗುತ್ತದೆ. ಬಯಸಿದರೆ ಈ ಯೋಜನೆಯನ್ನು 5 ವರ್ಷಕ್ಕೇ ಮುಗಿಸಿಕೊಳ್ಳಬಹುದು.
ಎಲ್ಲಿ ಖರೀದಿಸಬಹುದು?
ವಾಣಿಜ್ಯ ಬ್ಯಾಂಕ್‌ಗಳು, ಅಂಚೆ ಕಚೇರಿ, ಬಿಎಸ್‌ಇ, ಎನ್‌ಎಸ್‌ಇ ಮತ್ತು ನ್ಯಾಷನಲ್ ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಷನ್‌ನಲ್ಲಿ ಎಸ್‌ಜಿಬಿಗಳನ್ನು ಕೊಳ್ಳಬಹುದು. ವ್ಯಕ್ತಿಗತವಾಗಿ, ಟ್ರಸ್ಟ್‌ಗಳು, ಸಾಮಾಜಿಕ ಸಂಘಟನೆಗಳು, ಅವಿಭಕ್ತ ಹಿಂದು ಕುಟುಂಬಗಳು, ವಿಶ್ವವಿದ್ಯಾಲಯಗಳಿಗೆ ಕೊಳ್ಳುವ ಅವಕಾಶವಿದೆ. ಬಾಂಡ್‌ಗಳನ್ನು ಕೊಳ್ಳಲು ಆರ್‌ಬಿಐ ನಿರ್ದೇಶನದ ಪ್ರಕಾರ, ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
ಚಿನ್ನದ ಮೌಲ್ಯ ನಿಗದಿ ಹೇಗೆ
ಭಾರತೀಯ ಷೇರುಪೇಟೆ ಹಾಗೂ ಶುದ್ಧ ಚಿನ್ನದ ಆಭರಣ ವರ್ತಕರು (ಜುವೆಲರ್ಸ್ ಅಸೋಸಿಯೇಶನ್ ಲಿಮಿಟೆಡ್) ನಿಗದಿಪಡಿಸಿದ ಬೆಲೆಯ ಪ್ರಕಾರ ಬಾಂಡ್‌ಗಳನ್ನು ವಿತರಿಸಲಾಗುವುದು. ಅಂದರೆ ಚಿನಿವಾರ ಪೇಟೆ ಕಾರ್ಯಾಚರಣೆ ಮಾಡುತ್ತಿರುವಾಗಿನ (ರಜಾದಿನಗಳನ್ನು ಬಿಟ್ಟು) ಕೊನೆಯ ಮೂರು ದಿನಗಳ ಸರಾಸರಿ ಬೆಲೆಯನ್ನು ನಿಗದಿ ಮಾಡಲಾಗುವುದು.
Read more…
[wpas_products keywords=”deal of the day”]