ಹೈಲೈಟ್ಸ್:
- ಮುಂದಿನ ಜೂನ್ ತ್ರೈಮಾಸಿಕದವರೆಗೆ ದೇಶದಲ್ಲಿ ಸೆಮಿಕಂಡಕ್ಟರ್ ಚಿಪ್ ಕೊರತೆ
- ಅಲ್ಲಿಯವರೆಗೆ, ಕಾರು, ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಟೆಲಿವಿಷನ್ ಮತ್ತು ರೆಫ್ರಿಜರೇಟರ್‌ಗಳ ಪೂರೈಕೆ ಕುಂಠಿತ
- ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೊಬೈಲ್ಸ್ ತಯಾರಕ ಕಂಪನಿಗಳ ಸಿಇಒಗಳ ಕಳವಳ
ಉತ್ಪಾದನೆ ಮತ್ತು ವಿತರಣಾ ಸೌಲಭ್ಯಗಳು ಕ್ರಮೇಣವಾಗಿ ತೆರೆದುಕೊಳ್ಳಲಿವೆ. ಇದರಿಂದ ಪೂರೈಕೆಗಳು ಕೂಡ ಪುನಾರಂಭವಾಗಲಿವೆ. ಜೂನ್ ತ್ರೈಮಾಸಿಕದ ವೇಳೆಗೆ ಚಿಪ್‌ಸೆಟ್ ಕೊರತೆಯು ಬಹುತೇಕ ಕಡಿಮೆಯಾಗಲಿದೆ ಎಂದು ಸ್ಮಾರ್ಟ್‌ಫೋನ್ ತಯಾರಕ ಕಂಪನಿ ‘ರಿಯಲ್‌ಮಿ’ಯ ಅಂತಾರಾಷ್ಟ್ರೀಯ ವ್ಯಾಪಾರ ಅಧ್ಯಕ್ಷ ಮತ್ತು ಭಾರತದ ಸಿಇಒ ಮಾಧವ್ ಶೇಠ್ ಹೇಳಿದ್ದಾರೆ. “2022 ರ ನಮ್ಮ ಲಾಂಚ್ ಸ್ಟ್ರಾಟಜಿಯು ಟ್ರ್ಯಾಕ್‌ನಲ್ಲಿದೆ” ಎಂದೂ ಅವರು ತಿಳಿಸಿದ್ದಾರೆ.
ಚಿಪ್‌ಸೆಟ್ ಮತ್ತು ಬಿಡಿಭಾಗಗಳ ಕೊರತೆಯಿಂದ ಈ ವರ್ಷ ಸಂಭಾವ್ಯ ಮಾರಾಟದಿಂದ ಗಮನಾರ್ಹ ಆದಾಯವನ್ನು ಕಳೆದುಕೊಂಡಿದ್ದೇವೆ ಎಂದು ಹಲವಾರು CEOಗಳು ಹೇಳಿದ್ದಾರೆ. ಇದರಿಂದಾಗಿ ತಮ್ಮ ಹೊಸ ಮಾದರಿಯ ಉತ್ಪನ್ನಗಳ ಬಿಡುಗಡೆಯೂ ವಿಳಂಬವಾಗಿದೆ. ಆದರೆ, ಉತ್ಪಾದನೆ ಹೆಚ್ಚಾದಂತೆ ಮುಂದಿನ ವರ್ಷ ನಷ್ಟ ಕಡಿಮೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಉದ್ಯಮದ ಅಂದಾಜಿನ ಪ್ರಕಾರ 2021 ರಲ್ಲಿ ಭಾರತೀಯ ಕಾರು ತಯಾರಕರು ಸುಮಾರು $5 ಬಿಲಿಯನ್ ಅಥವಾ ಶೇ.20ರಷ್ಟು ವಾಹನ ಉತ್ಪಾದನೆಯನ್ನು ಕಳೆದುಕೊಂಡಿದ್ದಾರೆ. ಮುಂದಿನ ವರ್ಷ ಇದು ಶೇ.10ಕ್ಕೆ ಇಳಿಕೆಯಾಗುವ ನಿರೀಕ್ಷೆ ಇದೆ.
2021 ರಲ್ಲಿ ಸೆಮಿಕಂಡಕ್ಟರ್ ಚಿಪ್‌ಗಳ ಕೊರತೆಯಿಂದಾಗಿ ಭಾರತವು ಸುಮಾರು ಅರ್ಧ ಮಿಲಿಯನ್ ಲಘು ವಾಹನಗಳ ಉತ್ಪಾದನೆಯನ್ನು ಕಳೆದುಕೊಂಡಿದೆ ಎಂದು ಜಾಗತಿಕ ವಾಹನ ಮುನ್ಸೂಚನೆ ಸಂಸ್ಥೆ IHS ಮಾರ್ಕಿಟ್‌ನ ಸಹಾಯಕ ನಿರ್ದೇಶಕ ಗೌರವ್ ವಂಗಾಲ್ ತಿಳಿಸಿದ್ದಾರೆ.
“ಲಘು ವಾಹನ (LV)ಉತ್ಪಾದನೆಯ ಬೇಡಿಕೆಯನ್ನು ಹೆಚ್ಚಿಸಲು ಮತ್ತು ಪೂರೈಸಲು ಜಾಗತಿಕ ಸೆಮಿಕಂಡಕ್ಟರ್ ಉತ್ಪಾದನಾ ಸಾಮರ್ಥ್ಯಗಳಲ್ಲಿ ನಿರಂತರ ಸವಾಲುಗಳನ್ನು ಬಗೆಹರಿಸಲು ಎದುರುನೋಡುತ್ತಿದ್ದೇವೆ ಎಂದು ವಂಗಾಲ್ ಹೇಳಿದರು.
ಕೋವಿಡ್ ನಿಂದಾಗಿ ಕಳೆದ ಒಂದು ವರ್ಷದಿಂದ ಎಲ್ಲಾ ಆಟೋ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿಗಳು ಬಿಡಿಭಾಗಗಳ ಕೊರತೆ ಮತ್ತು ಲಾಜಿಸ್ಟಿಕ್ಸ್ ವಿಳಂಬ ಎದುರಿಸುತ್ತಿವೆ. ಇದರಿಂದಾಗಿ ಉತ್ಪಾದನಾ ಅಡೆತಡೆಗಳು, ಕಂಟೇನರ್ ಕೊರತೆ, ಮುಚ್ಚುವಿಕೆ ಮತ್ತು ಬಂದರು ದಟ್ಟಣೆ ಉಂಟಾಗಿದೆ.
ಹಲವು ಕಂಪನಿಗಳು ಬಿಡಿಭಾಗಗಳ ಬೆಲೆಗಳನ್ನು ಶೇ.40 ರಿಂದ ಶೇ.100ರವರೆಗೆ ಏರಿಕೆ ಮಾಡಿವೆ. ಆದರೆ, ಲಾಜಿಸ್ಟಿಕ್ಸ್ ವೆಚ್ಚಗಳು ಪೂರ್ವ ಕೋವಿಡ್ ಮಟ್ಟಕ್ಕಿಂತ 5ರಿಂದ 6 ಪಟ್ಟು ಹೆಚ್ಚಾಗಿದೆ. ಅಲ್ಲದೆ ಈ ಸಮಯದಲ್ಲಿ ವರ್ಕ್ ಫ್ರಂ ಹೋಮ್ (ಮನೆಯಿಂದಲೇ ಕೆಲಸ) ಮತ್ತು ಸ್ಟಡೀ ಫ್ರಂ ಹೋಮ್‌ನಿಂದಾಗಿ ಜೀವನಶೈಲಿಯಲ್ಲಿ ಬದಲಾವಣೆಗಳಾದವು. ಹೀಗಾಗಿ ಇದಕ್ಕೆ ಬೇಕಾದ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಉಂಟಾಯಿತು. ಆದರೆ, ದುಬಾರಿ ಉತ್ಪನ್ನಗಳು ಅಥವಾ ಕಾರು ಖರೀದಿಯಲ್ಲಿಇಳಿಕೆಯಾಯಿತು. ಕಳೆದ ಆರು ತಿಂಗಳಲ್ಲಿ, ಚಿಪ್ ಕೊರತೆಯಿಂದಾಗಿ ರೆನಾಲ್ಟ್ ಇಂಡಿಯಾ ಸುಮಾರು 25,000 ರಿಂದ 30,000 ಕಾರುಗಳು ಅಥವಾ ಅದರ ಮಾಸಿಕ ಉತ್ಪಾದನೆಯ ಶೇ.30ರಷ್ಟನ್ನು ಕಳೆದುಕೊಂಡಿದೆ.
ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ‘ಎಕನಾಮಿಕ್ ಟೈಮ್ಸ್’ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.