ಹೈಲೈಟ್ಸ್:
- ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಹಿನ್ನೆಲೆ
- ಬೈಕ್ ಸವಾರರಿಗೆ ಕಾಂಗ್ರೆಸ್ನಿಂದ ಉಚಿತ ಪೆಟ್ರೋಲ್
- ಪೆಟ್ರೋಲ್ ಪಡೆಯಲು ಬಂಕ್ ನಲ್ಲಿ ಮುಗಿಬಿದ್ದ ಜನರು
ಯಾಕೆ ಪೆಟ್ರೋಲ್?
ಬಂದಿರುವ ಬೈಕ್ ಸವಾರರಿಗೆ ಹೊರೆಯಾಗದೆ ಇರಲಿ ಎನ್ನುವ ಉದ್ದೇಶದಿಂದ ಪೆಟ್ರೋಲ್ ನೀಡುತ್ತಿರುವುದಾಗಿ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ. ಒಂದು ಬೈಕ್ ಗೆ 300 ರಿಂದ 500 ರೂ ಪೆಟ್ರೋಲ್ ನ್ನು ಉಚಿತವಾಗಿ ನೀಡುತ್ತಿದ್ದೇವೆ ಎಂದಿದ್ದಾರೆ. ಇನ್ನು ಪೆಟ್ರೋಲ್ ಜೊತೆಗೆ ಪಾದಯಾತ್ರೆಯಲ್ಲಿ ಭಾಗವಹಿಸುವರಿಗೆ ತಿಂಡಿ, ಊಟದೊಂದಿಗೆ, ನಮ್ಮ ನೀರು- ನಮ್ಮ ಹಕ್ಕು ಎಂಬ ಘೋಷವಾಕ್ಯದ ಟೀ ಶರ್ಟ್, ಕಾಂಗ್ರೆಸ್ ನ ಬಳಿ ಬಣ್ಣದ ಟೀ ಶರ್ಟ್ ಗಳು,ಕೆಲವರಿಗೆ ಪಂಚೆ, ಶಲ್ಯ, ಟೋಪಿಗಳನ್ನು ಉಡುಗೊರೆಯಾಗಿ ನೀಡಲಾಯಿತು. ಈ ವೇಳೆ ಒಂದು ಲಕ್ಷ ಮಾಸ್ಕ್ ಗಳನ್ನು ಸಹ ಕಾಂಗ್ರೆಸ್ ಸಿದ್ದ ಪಡಿಸಿತ್ತು.
ಕಳೆದ ಹಲವು ದಿನಗಳಿಂದ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ವಾಕ್ಸಮರಕ್ಕೆ ಕಾರಣವಾಗಿದ್ದ ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆಗೆ ಕೊನೆಗೂ ಅಧಿಕೃತ ಚಾಲನೆ ಸಿಕ್ಕಿದೆ. ರಾಮನಗರ ಜಿಲ್ಲೆಯ ಸಂಗಮದಲ್ಲಿ ಸಭಾ ಕಾರ್ಯಕ್ರಮದಲ್ಲಿ ಪಾದಯಾತ್ರೆಗೆ ಚಾಲನೆ ಸಿಕ್ಕಿದೆ. ಇನ್ನು ವೇದಿಕೆಯಲ್ಲಿ ಕಾಂಗ್ರೆಸ್ ನ ಘಟಾನುಘಟಿ ನಾಯಕರು, ಸ್ವಾಮೀಜಿಗಳು, ಸಿನಿಮಾ ತಾರೆಯರು ಭಾಗಿಯಾಗಿದ್ದರು.
ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರೆ ಚಾಲನೆಗೆ ಕ್ಷಣಗಣನೆ : ಅಪಾರ ಜನಸ್ತೋಮ
Read more
[wpas_products keywords=”deal of the day sale today offer all”]