ಹೈಲೈಟ್ಸ್:
- ಮೇಕೆದಾಟು ಪಾದಯಾತ್ರೆ ವಿಫಲಗೊಳಿಸಲು ಸರ್ಕಾರ ಪ್ರಯತ್ನ
- ಪಾದಯಾತ್ರೆ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಆರೋಪ
- ಬಿಜೆಪಿ, ಕಾಂಗ್ರೆಸ್ ಅಲ್ಲದೆ ಇತರರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪ
ಈ ಯೋಜನೆಯಿಂದ ಬೆಂಗಳೂರಿಗೆ ಸಹಾಯ ಆಗಲಿದೆ. ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಡಿಪಿಆರ್ ಪ್ರಾರಂಭ ಮಾಡಲಾಗಿತ್ತು. ಅದಕ್ಕೆ ಒಂದು ಸ್ವರೂಪ ಕೊಟ್ಟಿದ್ದರು. ನಂತರದಲ್ಲಿ ಡಿಕೆಶಿ ಹೆಚ್ಚಿನ ಆಸಕ್ತಿ ವಹಿಸಿ ಇದಕ್ಕೆ ಚಾಲನೆ ಕೊಡುವ ಪ್ರಯತ್ನ ಮಾಡಿದ್ದರು ಎಂದರು.
ಮೇಕೆದಾಟು ಡ್ಯಾಂ ವಿವಾದ..! ಕರ್ನಾಟಕದ ವಾದವೇನು..? ತಮಿಳುನಾಡಿನ ವಿರೋಧವೇನು..?
ಈ ಪಾದಯಾತ್ರೆಯಿಂದ ಉದ್ದೇಶ ಈಡೇರುವ ವರೆಗೂ ಹೋರಾಟ ಇರಬೇಕಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಂಸದ ಡಿಕೆ ಸುರೇಶ್ ಗೆ ಈ ನಿಟ್ಟಿನಲ್ಲಿ ಹಠ ಇದೆ. ಈ ಕಾರಣದಿಂದ ಈ ಕೆಲಸ ಸಾಧ್ಯವಾಗುತ್ತದೆ ಎಂದರು.
ಪಾದಯಾತ್ರೆ ನಡಿಗೆಯಲ್ಲಿ ಆರೋಗ್ಯ ಚೆನ್ನಾಗಿರಲಿ, ಕೋವಿಡ್ ಹಿನ್ನೆಲೆಯಲ್ಲಿ ಎಚ್ಚರಿಕೆಯನ್ನು ವಹಿಸಿ, ನಮ್ಮ ವಿರುದ್ಧ ಯಾರೂ ಹೇಳಿಕೊಳ್ಳುವಂತದದ್ದು ಆಗಬಾರದು. ಇದನ್ನು ವಿಫಲಗೊಳಿಸಲು ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತದೆ.
ನೀರಿಗಾಗಿ ಹೋರಾಟ ಮಾಡುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ಅದರ ಕ್ರೆಡಿಟ್ ಕಾಂಗ್ರೆಸ್ಗೆ ಸಿಗುತ್ತದೆ ಎಂದು ಇದನ್ನು ವಿಫಲಗೊಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು. ಪಾದಯಾತ್ರೆಯನ್ನು ತಡೆಯುವ ಪ್ರಯತ್ನ ಬಿಜೆಪಿ ಹಾಗೂ ಜೆಡಿಎಸ್ ಮಾತ್ರವಲ್ಲ ಬೇರೆ ಬೇರೆಯವರು ಕಾಲೆಳೆಯುವತಹ ಪ್ರಯತ್ನ ಮಾಡುತ್ತಾರೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
Read more
[wpas_products keywords=”deal of the day sale today offer all”]