Karnataka news paper

ಸಹೋದರ ರಮೇಶ್‌ ಬಾಬು ನಿಧನ, ಇತ್ತ ಮಹೇಶ್‌ ಬಾಬುಗೆ ಕೊರೊನಾ; ದುಃಖದ ಮಡುವಿನಲ್ಲಿ ‘ಪ್ರಿನ್ಸ್’ ಫ್ಯಾಮಿಲಿ


ಹೈಲೈಟ್ಸ್‌:

  • ಮಹೇಶ್ ಬಾಬು ಸಹೋದರ ರಮೇಶ್ ಬಾಬು ನಿಧನ
  • ಅನಾರೋಗ್ಯದಿಂದ ಬಳಲುತ್ತಿದ್ದ ರಮೇಶ್ ಬಾಬು
  • ‘ಸೂಪರ್ ಸ್ಟಾರ್’ ಕೃಷ್ಣ ಅವರ ಮೊದಲ ಪುತ್ರ ರಮೇಶ್ ಬಾಬು

ನಟ ‘ಪ್ರಿನ್ಸ್’ ಮಹೇಶ್ ಬಾಬು ಕುಟುಂಬದಲ್ಲಿ ಸಂಕಷ್ಟ ಮನೆ ಮಾಡಿದೆ. ಎರಡು ದಿನಗಳ ಹಿಂದಷ್ಟೇ ಮಹೇಶ್ ಬಾಬುಗೆ ಕೊರೊನಾ ಪಾಸಿಟಿವ್ ಆಗಿತ್ತು. ಈ ಸುದ್ದಿ ಕೇಳಿದ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ಇದೀಗ ಕರಾಳ ಸುದ್ದಿ ಘಟ್ಟಮನೇನಿ ಕುಟುಂಬದಿಂದ ಕೇಳಿಬಂದಿದೆ. ಹೌದು, ಹಿರಿಯ ನಟ ‘ಸೂಪರ್‌ ಸ್ಟಾರ್‌’ ಕೃಷ್ಣ ಅವರ ಪುತ್ರ, ಮಹೇಶ್ ಬಾಬು ಸಹೋದರ ಘಟ್ಟಮನೇನಿ ರಮೇಶ್ ಬಾಬು ಶನಿವಾರ (ಜ.8) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಕೊನೆಯುಸಿರೆಳೆದಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು.

ಪತ್ರ ಬರೆದ ಕುಟುಂಬ
ರಮೇಶ್‌ ಬಾಬು ನಿಧನದ ಹಿನ್ನೆಲೆಯಲ್ಲಿ ಘಟ್ಟಮನೇನಿ ಕುಟುಂಬ ಪತ್ರ ಬರೆದಿದೆ. ‘ನಮ್ಮ ಪ್ರೀತಿಯ ರಮೇಶ್ ಬಾಬು ಅವರ ನಿಧನದ ವಿಷಯವನ್ನು ನಾವು ತೀವ್ರ ದುಃಖದಿಂದ ಹೇಳುತ್ತಿದ್ದೇವೆ. ಅವರು ನಮ್ಮೆಲ್ಲರ ಹೃದಯದಲ್ಲಿ ಶಾಶ್ವತವಾಗಿ ಇರುತ್ತಾರೆ. ನಮ್ಮ ಎಲ್ಲಾ ಹಿತೈಷಿಗಳು ಕೋವಿಡ್ ಮಾರ್ಗಸೂಚಿಗಳಿಗೆ ಪಾಲಿಸಬೇಕು ಮತ್ತು ಅಂತ್ಯಕ್ರಿಯೆಯ ಸ್ಥಳದಲ್ಲಿ ಗುಂಪು ಸೇರುವುದನ್ನು ತಪ್ಪಿಸುವಂತೆ ನಾವು ವಿನಂತಿ ಮಾಡುತ್ತಿದ್ದೇವೆ’ ಎಂದು ಫ್ಯಾಮಿಲಿ ಕಡೆಯಿಂದ ತಿಳಿಸಲಾಗಿದೆ. ಇನ್ನು, ಮಹೇಶ್‌ ಬಾಬುಗೆ ಕೊರೊನಾ ಪಾಸಿಟಿವ್ ಆಗಿರುವುದರಿಂದ, ಅವರು ಅಣ್ಣನ ಅಂತಿಮ ದರ್ಶನ ಪಡೆಯುತ್ತಾರಾ? ಇಲ್ಲವಾ ಅನ್ನೋದು ಇನ್ನೂ ಖಚಿತಗೊಂಡಿಲ್ಲ.

ನಟ/ನಿರ್ಮಾಪಕ ರಮೇಶ್ ಬಾಬು
‘ಸೂಪರ್ ಸ್ಟಾರ್‌’ ಕೃಷ್ಣ ಅವರ ಮೊದಲ ಪುತ್ರನಾಗಿದ್ದ ರಮೇಶ್‌ ಬಾಬು ಬಾಲ ನಟನಾಗಿ ಚಿತ್ರರಂಗ ಪ್ರವೇಶ ಮಾಡಿದರು. 1974ರಲ್ಲಿ ತೆರೆಕಂಡ ಕೃಷ್ಣ ನಟನೆಯ ‘ಅಲ್ಲೂರಿ ಸೀತಾರಾಮರಾಜು’ ಚಿತ್ರದಲ್ಲಿ ಮೊದಲು ಬಣ್ಣ ಹಚ್ಚಿದ್ದರು. 1987ರಲ್ಲಿ ತೆರೆಕಂಡ ‘ಸಾಮ್ರಾಟ್’ ಸಿನಿಮಾದ ಮೂಲಕ ಹೀರೋ ಕೂಡ ಆದರು. ಆನಂತರ ಮುಂದಿನ 10 ವರ್ಷಗಳಲ್ಲಿ 15 ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಆದರೆ, ತಂದೆ ಕೃಷ್ಣ ಅವರಿಗೆ ಸಿಕ್ಕಿದ್ದ ಜನಪ್ರಿಯತೆ ರಮೇಶ್‌ ಬಾಬುಗೆ ಸಿಗಲಿಲ್ಲ.

ನಟ ಮಹೇಶ್ ಬಾಬು, ‘ಸಿಂಹಾದ್ರಿಯ ಸಿಂಹ’ ಖ್ಯಾತಿಯ ನಟಿ ಮೀನಾರಿಗೆ ಕೊರೊನಾ ಪಾಸಿಟಿವ್

1999ರಲ್ಲಿ ಅಮಿತಾಭ್ ಬಚ್ಚನ್ ನಟಿಸಿದ್ದ ‘ಸೂರ್ಯವಂಶಂ’ ಸಿನಿಮಾಗೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ ಅವರು, ಸಹೋದರ ಮಹೇಶ್‌ ಬಾಬು ಅವರ ಸಿನಿಮಾಗಳನ್ನು ನಿರ್ಮಿಸಿದರು. ಮಹೇಶ್ ನಟಿಸಿದ್ದ ಅರ್ಜುನ್, ಅತಿಥಿ, ದೂಕುಡು, ಆಗಡು ಸಿನಿಮಾಗಳನ್ನು ನಿರ್ಮಿಸಿದರು. 2014ರಲ್ಲಿ ತೆರೆಕಂಡ ಆಗಡು ಬಳಿಕ, ನಿರ್ಮಾಣದಿಂದಲೂ ದೂರ ಉಳಿದರು. ಸಾರ್ವಜನಿಕವಾಗಿ ಅವರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇನ್ನು, ರಮೇಶ್ ಬಾಬು ನಿಧನಕ್ಕೆ ತೆಲುಗು ಚಿತ್ರರಂಗ ಸಂತಾಪ ಸೂಚಿಸಿದೆ. ಚಿರಂಜೀವಿ ಸೇರಿದಂತೆ ಅನೇಕ ಗಣ್ಯರು ರಮೇಶ್ ಬಾಬು ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಆ ಒಂದು ಕಾರಣಕ್ಕೆ ಒಂದಾಗ್ತಾರಾ , ತೆಲುಗು, ತಮಿಳು ಸೂಪರ್ ಸ್ಟಾರ್ ಮಹೇಶ್ ಬಾಬು, ದಳಪತಿ ವಿಜಯ್?

Ghattamaneni Ramesh Babu



Read more

[wpas_products keywords=”deal of the day party wear dress for women stylish indian”]