Karnataka news paper

ಫಿನ್‌ಟೆಕ್ ಯುನಿಕಾರ್ನ್ ಗ್ರೋವ್‌ನಲ್ಲಿ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಹೂಡಿಕೆ!


The New Indian Express

ನವದೆಹಲಿ: ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾಡೆಲ್ಲಾ ಫಿನ್‌ಟೆಕ್ ಯುನಿಕಾರ್ನ್ ಗ್ರೋವ್‌ನಲ್ಲಿ ಹೂಡಿಕೆ ಮಾಡಿದ್ದು, ಅದರ ಸಲಹೆಗಾರರಾಗಿಯೂ ಅವರು ಕಾರ್ಯನಿರ್ವಹಿಸಲಿದ್ದಾರೆ. ಫಿನ್‌ಟೆಕ್ ಯುನಿಕಾರ್ನ್ ಸಹ ಸಂಸ್ಥಾಪಕರು ಹಾಗೂ ಸಿಇಒ ಆಗಿರುವ ಲಲಿತ್ ಕೇಶ್ರೆ ಶನಿವಾರ ಈ ವಿಚಾರವನ್ನು ಟ್ವೀಟರ್ ನಲ್ಲಿ ತಿಳಿಸಿದ್ದಾರೆ. 

ವಿಶ್ವದ ಅತ್ಯುತ್ತಮ ಸಿಇಒ ಗಳಲ್ಲಿ ಒಬ್ಬರಾದ ಹೂಡಿಕೆದಾರ ಮತ್ತು ಸಲಹೆಗಾರನನ್ನು ಗ್ರೋವ್ ಪಡೆದಿದೆ. ಭಾರತದಲ್ಲಿ ಹಣಕಾಸು ಸೇವೆ  ಸಿಗುವಂತೆ ಮಾಡುವ ನಮ್ಮ ಮಿಷನ್‌ನಲ್ಲಿ ಸತ್ಯ ನಾಡೆಲ್ಲಾ ನಮ್ಮೊಂದಿಗೆ ಸೇರುತ್ತಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ ಎಂದು ಅವರು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ. 

ನಾಲ್ಕು ಮಾಜಿ ಫ್ಲಿಪ್‌ಸ್ಟರ್‌ಗಳಾದ ಲಲಿತ್ ಕೇಶ್ರೆ, ಹರ್ಷ್ ಜೈನ್, ನೀರಜ್ ಸಿಂಗ್ ಮತ್ತು ಇಶಾನ್ ಬನ್ಸಾಲ್ ಅವರು ಸೇರಿ 2016ರಲ್ಲಿ ಸ್ಥಾಪಿಸಿದ ಗ್ರೋವ್,  2021 ಏಪ್ರಿಲ್ ನಲ್ಲಿ  ಟೈಗರ್ ಗ್ಲೋಬಲ್‌ನಿಂದ $ 83 ಮಿಲಿಯನ್ ಹಣವನ್ನು ಸಂಗ್ರಹಿಸುವ ಮೂಲಕ ಯುನಿಕಾರ್ನ್ ಕ್ಲಬ್‌ ಪ್ರವೇಶಿಸಿತ್ತು. 





Read more…

[wpas_products keywords=”deal of the day”]