ಹೈಲೈಟ್ಸ್:
- ಭಾರತದಲ್ಲಿ 24 ಗಂಟೆಗಳಲ್ಲಿ 1,59,632 ಮಂದಿಗೆ ಕೋವಿಡ್ ಸೋಂಕು
- ಒಂದು ದಿನದಲ್ಲಿ 327 ಸೋಂಕಿತರ ಸಾವು, 40,863 ಮಂದಿ ಚೇತರಿಕೆ
- ದೈನಂದಿನ ಪಾಸಿಟಿವಿಟಿ ದರ ಶೇ 10.21ಕ್ಕೆ, ಸಕ್ರಿಯ ಕೇಸ್ ಶೇ 1.66
- 3,623 ಓಮಿಕ್ರಾನ್ ಪ್ರಕರಣಗಳು ವರದಿ, 1409 ಮಂದಿ ಗುಣಮುಖ
ಒಟ್ಟು ಸೋಂಕುಗಳಲ್ಲಿ ಶೇ 1.66ರಷ್ಟು ಸಕ್ರಿಯ ಪ್ರಕರಣಗಳು ಇವೆ. ಒಟ್ಟು 5,90,611 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದ ಕೋವಿಡ್ 19 ಚೇತರಿಕೆ ದರ ಶೇ 96.98ಕ್ಕೆ ಕುಸಿತ ಕಂಡಿದೆ. ಕಳೆದ 24 ಗಂಟೆಗಳಲ್ಲಿ ಹೊಸ ಪ್ರಕರಣಗಳಲ್ಲಿನ ಭಾರಿ ಹೆಚ್ಚಳದೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 1,18,442ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ಭಾನುವಾರ ಬೆಳಿಗ್ಗೆ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.
ದೈನಂದಿನ ಪಾಸಿಟಿವಿಟಿ ದರ ಶೇ 10.21ಕ್ಕೆ ತಲುಪಿರುವುದು ಕಳವಳಕ್ಕೆ ಎಡೆಮಾಡಿಕೊಟ್ಟಿದೆ. ವಾರದ ಪಾಸಿಟಿವಿಟಿ ದರ ಶೇ 6.77ಕ್ಕೆ ಏರಿಕೆಯಾಗಿದೆ. ಒಂದು ದಿನದಲ್ಲಿ 40,863 ಸೋಂಕಿತರು ಗುಣಮುಖರಾಗಿದ್ದಾರೆ. 327 ಮಂದಿ ಸೋಂಕಿತರು ಜೀವ ಕಳೆದುಕೊಂಡಿದ್ದಾರೆ. ಒಟ್ಟು ಸಾವಿನ ಸಂಖ್ಯೆ 4,83,790ಕ್ಕೆ ಏರಿಕೆ ಕಂಡಿದೆ.
ದೇಶಾದ್ಯಂತ 15-18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯ ಆರಂಭವಾದ ಒಂದು ವಾರದೊಳಗೆ ಎರಡು ಕೋಟಿಗೂ ಅಧಿಕ ಮಕ್ಕಳಿಗೆ ಲಸಿಕೆ ಕೊಡಲಾಗಿದೆ. ಕಳೆದ 24 ಗಂಟೆಗಳಲ್ಲಿ 90 ಲಕ್ಷ ಡೋಸ್‌ಗೂ ಅಧಿಕ ಲಸಿಕೆ ನೀಡಲಾಗಿದೆ. ದೇಶದ ಒಟ್ಟಾರೆ ಲಸಿಕೆ ಡೋಸ್ ಸಂಖ್ಯೆ 150,61,92,903 ಎಂದು ಸಚಿವಾಲಯ ಮಾಹಿತಿ ನೀಡಿದೆ.
ಶನಿವಾರ ಒಟ್ಟು 616 ಹೊಸ ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ ಒಟ್ಟು ಸಂಖ್ಯೆ ಒಂದು ಸಾವಿರ ದಾಟಿದೆ. ರಾಜ್ಯದಲ್ಲಿ 1009 ಓಮಿಕ್ರಾನ್ ಸೋಂಕು ವರದಿಯಾಗಿದೆ. ದಿಲ್ಲಿಯಲ್ಲಿ 513, ಕರ್ನಾಟಕದಲ್ಲಿ 441, ರಾಜಸ್ಥಾನದಲ್ಲಿ 373 ಓಮಿಕ್ರಾನ್ ಸೋಂಕಿತರು ಪತ್ತೆಯಾಗಿದ್ದಾರೆ. 1409 ಸೋಂಕಿತರು ಗುಣಮುಖರಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಶನಿವಾರ 41,434 ಹೊಸ ಕೋವಿಡ್ ಪ್ರಕರಣ ವರದಿಯಾಗಿವೆ. ಮುಂಬಯಿಯಲ್ಲಿ 20,318 ಮಂದಿಗೆ ಸೋಂಕು ತಗುಲಿದೆ. ಶುಕ್ರವಾರಕ್ಕೆ ಹೋಲಿಸಿದರೆ ವಾಣಿಜ್ಯ ನಗರಿಯಲ್ಲಿ ಒಟ್ಟು ಪ್ರಕರಣ ಕೊಂಚ ಇಳಿಕೆಯಾಗಿದೆ. ಸೋಂಕು ಏರಿಕೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಅನೇಕ ಕಠಿಣ ನಿಯಮಗಳನ್ನು ಮತ್ತೆ ಜಾರಿಗೊಳಿಸಿದೆ.
ದಿಲ್ಲಿಯಲ್ಲಿ 20,181 ಮಂದಿಗೆ ಸೋಂಕು ತಗುಲಿದೆ. ಮೇ ತಿಂಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ದಾಖಲಾದ ಅತ್ಯಧಿಕ ಪ್ರಕರಣವಾಗಿದೆ. ಇಲ್ಲಿನ ಪಾಸಿಟಿವಿಟಿ ದರ ಶೇ 19.60ಗೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಶನಿವಾರ 8,906 ಹೊಸ ಕೋವಿಡ್- 19 ಕೇಸ್‌ಗಳು ಕರ್ನಾಟಕದಲ್ಲಿ ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 30,39,958ಕ್ಕೆ ಏರಿಕೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ 7,113 ಹೊಸ ಕೋವಿಡ್ ಕೇಸ್‌ಗಳು ದೃಢಪಟ್ಟಿದ್ದರೆ, ದಕ್ಷಿಣ ಕನ್ನಡದಲ್ಲಿ 295, ಮೈಸೂರಿನಲ್ಲಿ 203, ಉಡುಪಿಯಲ್ಲಿ 186, ಮಂಡ್ಯದಲ್ಲಿ 183, ಹಾಸನದಲ್ಲಿ 139 ಪ್ರಕರಣಗಳು ದಾಖಲಾಗಿವೆ.
ಸಂಸತ್‌ನಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು ಹಾಗೂ ಭದ್ರತಾ ಸಿಬ್ಬಂದಿಯನ್ನು ಜನವರಿ 6 ಮತ್ತು 7ರಂದು ತಪಾಸಣೆಗೆ ಒಳಪಡಿಸಿದ್ದು, 400ಕ್ಕೂ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ. ಸುಪ್ರೀಂಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳಲ್ಲಿ ಶನಿವಾರ ಸೋಂಕು ದೃಢಪಟ್ಟಿತ್ತು. ಭಾನುವಾರ ಇನ್ನೂ ಇಬ್ಬರು ನ್ಯಾಯಮೂರ್ತಿಗಳು ಸೋಂಕಿಗೆ ಒಳಗಾಗಿದ್ದಾರೆ.
Read more
[wpas_products keywords=”deal of the day sale today offer all”]