Karnataka news paper

ಪ್ರಸಿದ್ಧ ಪ್ರವಾಸಿ ತಾಣ ಮುರ್ರೆಯಲ್ಲಿ ಹಿಮಪಾತದಲ್ಲಿ ಸಿಲುಕಿದ ವಾಹನಗಳು; 20 ಮಂದಿ ಸಾವು!


Online Desk

ಮುರ್ರೆ: ಪಾಕಿಸ್ತಾನದ ಜನಪ್ರಿಯ ಪ್ರವಾಸಿ ತಾಣವಾದ ಮುರ್ರೆಯಲ್ಲಿ ರಾತ್ರಿ ಇಡೀ ಸುರಿದ ಹಿಮಪಾತದ ನಡುವೆ ವಾಹನಗಳು ಸಿಲುಕಿಕೊಂಡು ವಾಹನದಲ್ಲಿದ್ದ ಕನಿಷ್ಟ 20 ಪ್ರವಾಸಿಗರು ಸಾವನ್ನಪ್ಪಿದ್ದಾರೆ.

ತೀವ್ರ ಹಿಮಪಾತದಿಂದಾಗಿ ಸ್ಥಳೀಯರು ಮತ್ತು ಪ್ರವಾಸಿಗರು ಎದುರಿಸುತ್ತಿರುವ ಸಂಕಷ್ಟ ಹಾಗೂ ಅನೇಕ ಸಾವುಗಳು ಸಂಭವಿಸಿದ ಕಾರಣ ಮುರ್ರೆಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಭಾರಿ ಹಿಮದ ಹೊದಿಕೆಗಳ ಅಡಿಯಲ್ಲಿ ಕಾರುಗಳು ಹೂತು ಹೋಗಿವೆ. ಇದರಿಂದ 20 ಮಂದಿ ಸಾವನ್ನಪ್ಪಿದ್ದಾರೆ.

ಸದ್ಯಕ್ಕೆ ಮುರ್ರೆಗೆ ಪ್ರವೇಶಿಸದಂತೆ ಪ್ರಯಾಣಿಕರಿಗೆ ನಿಷೇಧ ಹೇರಲಾಗಿದೆ ಮತ್ತು ಹಿಲ್ ರೆಸಾರ್ಟ್‍ಗೆ ಹೋಗುವ ಎಲ್ಲಾ ಮಾರ್ಗಗಳನ್ನು ಮುಚ್ಚಲಾಗಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೋಟರ್‍ವೇ ಪೊಲೀಸ್ (ಎನ್ ಎಚ್ ಎಮ್ ಪಿ) ಇನ್ಸ್‍ಪೆಕ್ಟರ್ ಜನರಲ್ ಇನಾಮ್ ಘನಿ ಹೇಳಿದ್ದಾರೆ.

ಮುರ್ರೆಯು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‍ನಿಂದ 60 ಕಿಲೋಮೀಟರ್ ದೂರದಲ್ಲಿದೆ, ಮುರ್ರೆ ಪ್ರತಿ ವರ್ಷ ಚಳಿಗಾಲದಲ್ಲಿ ಹಿಮಪಾತದಿಂದ ತುಂಬುವುದರಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.



Read more

[wpas_products keywords=”deal of the day”]