Karnataka news paper

ಹಿಮಪಾತದಲ್ಲಿ ಸಿಲುಕಿದ ಸಾವಿರಾರು ಪಾಕ್ ಪ್ರವಾಸಿಗರು: ವಾಹನದೊಳಗೆ ಸಿಲುಕಿ 22 ಮಂದಿ ಸಾವು


ಹೈಲೈಟ್ಸ್‌:

  • ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುರ್ರೀ ಪರ್ವತದಲ್ಲಿ ಅವಘಡ
  • ಸಾವಿರಾರು ವಾಹನಗಳಲ್ಲಿ ಮುರ್ರೀ ನಗರಕ್ಕೆ ತೆರಳಿದ್ದ ಪ್ರವಾಸಿಗರ ದಂಡು
  • ವಿಪರೀತ ಹಿಮಪಾತದಿಂದ ರಸ್ತೆಗಳ ನಡುವೆ ಸಿಲುಕಿದ್ದ ವಾಹನಗಳು

ಲಾಹೋರ್: ಪಾಕಿಸ್ತಾನದ ಜನಪ್ರಿಯ ಪರ್ವತ ಪ್ರದೇಶ, ಪಂಜಾಬ್ ಪ್ರಾಂತ್ಯದ ಮುರ್ರೀಯಲ್ಲಿ ಶನಿವಾರ ವಿಪರೀತ ಹಿಮ ಸುರಿದ ಪರಿಣಾಮ 10 ಮಕ್ಕಳು ಸೇರಿದಂತೆ ಕನಿಷ್ಠ 22 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಹಿಮಪಾತ ಸಂಭವಿಸಿದೆ. ಇದರಿಂದ ನಡುವೆ ಸಿಲುಕಿಕೊಂಡ ವಾಹನದೊಳಗೆ ಮರಗಟ್ಟಿದ ಜನರು ಅಲ್ಲಿಯೇ ಮೃತಪಟ್ಟಿದ್ದಾರೆ.

ಸಾವಿರಾರು ವಾಹನಗಳು ನಗರಕ್ಕೆ ಪ್ರವೇಶಿಸಿದ್ದರಿಂದ ರಾವಲ್ಪಿಂಡಿ ಜಿಲ್ಲೆಯ ಮುರ್ರೀ ಭಾಗಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳೂ ಸಂಚಾರ ದಟ್ಟಣೆಯಿಂದ ಬಂದ್ ಆಗಿದ್ದವು. ಇದರಿಂದ ಪ್ರವಾಸಿಗರು ಅಸಹಾಯಕರಾಗಿ ರಸ್ತೆ ನಡುವೆ ಸಿಲುಕುವಂತೆ ಆಗಿತ್ತು. ಈ ಪ್ರದೇಶವನ್ನು ನೈಸರ್ಗಿಕ ವಿಕೋಪಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ.
Viral Video: ಹಿಮದ ಬಿರುಗಾಳಿ ನಡುವೆ ಧೀರ ಯೋಧರ ಕರ್ತವ್ಯ ನಿರ್ವಹಣೆ: ಹೃದಯ ತುಂಬಿ ಬರುವಂತೆ ಮಾಡುತ್ತದೆ ಈ ದೃಶ್ಯ
ಈ ಪರ್ವತ ಪ್ರದೇಶದಲ್ಲಿ ಸುಮಾರು ಒಂದು ಸಾವಿರ ಕಾರುಗಳು ಸಿಲುಕಿಕೊಂಡಿದ್ದವು. ಅವುಗಳ ಒಳಗೇ ಬಂಧಿಯಾದ ಪ್ರವಾಸಿಗರ ರಕ್ಷಣಾ ಕಾರ್ಯ ಹಾಗೂ ನೆರವಿಗಾಗಿ ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ಸೂಚಿಸಿದ್ದಾರೆ. ಪಂಜಾಬ್ ಸರ್ಕಾರವು ಆಸ್ಪತ್ರೆಗಳಲ್ಲಿ, ಪೊಲೀಸ್ ಠಾಣೆಗಳು ಹಾಗೂ ಆಡಳಿತ ಕಚೇರಿಗಳಲ್ಲಿ ಎಮರ್ಜೆನ್ಸಿ ಜಾರಿಗೊಳಿಸಿದೆ.

ರಕ್ಷಣಾ ತಂಡ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ 1,122 ಮಂದಿಯಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 10 ಮಕ್ಕಳು ಸೇರಿದ್ದಾರೆ. ಮುರ್ರೀ ರಸ್ತೆಯಲ್ಲಿ ಪ್ರವಾಸಿಗರ ದುರ್ಮರಣಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
Viral Video:ಹಿಮವನ್ನು ಸಂಪೂರ್ಣವಾಗಿ ಮುಚ್ಚಿದ ಮರಳು! ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದ ದೃಶ್ಯವಿದು
ರಸ್ತೆಗಳಿಂದ ವಾಹನಗಳನ್ನು ತೆರವುಗೊಳಿಸಲು ಸೇನೆ ಕಾರ್ಯಾಚರಣೆ ಇಳಿದಿದ್ದು, ಇನ್ನೂ ಸಿಲುಕಿಕೊಂಡಿರುವ ಜನರ ರಕ್ಷಣಾ ಕಾರ್ಯ ಮುಂದುವರಿದೆ. 15-20 ವರ್ಷಗಳಲ್ಲಿಯೇ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಇದರಿಂದ ಸ್ಥಳದಲ್ಲಿ ವಿಪರೀತ ದಟ್ಟಣೆ ಉಂಟಾಗಿದೆ. ವಾಹನಗಳು ಹಿಂದೆ ಮುಂದೆ ಚಲಿಸಲಾಗದೆ ಗಂಟೆಗಟ್ಟಲೆ ಸಿಲುಕಿಕೊಂಡಿವೆ. ಇದೇ ವೇಳೆ ಸುರಿದ ವಿಪರೀತ ಹಿಮದಿಂದ ಚಳಿ ಹೆಚ್ಚಾಗಿ ಅಲ್ಲಿಯೇ ಮೃತಪಟ್ಟಿದ್ದಾರೆ. ಪರಿಸ್ಥಿತಿ ಕೈಮೀರಿರುವುದರಿಂದ ಮುರ್ರೀ ಪ್ರದೇಶಕ್ಕೆ ಪ್ರವಾಸಿಗರನ್ನು ನಿಷೇಧಿಸಲಾಗಿದೆ. ವಿಪರೀತ ಹಿಮಪಾತದಿಂದ ಇಡೀ ನಗರ ಕಂಗಾಲಾಗಿದೆ. ಸುಮಾರು 23 ಸಾವಿರ ವಾಹನಗಳನ್ನು ನಗರದಿಂದ ಸುರಕ್ಷಿತವಾಗಿ ಹೊರಗೆ ಕಳುಹಿಸಲಾಗಿದೆ. ಇನ್ನೂ ಸಾವಿರಾರು ವಾಹನಗಳನ್ನು ತೆರವುಗೊಳಿಸಲು ಕಾರ್ಯಾಚರಣೆ ನಡೆದಿದೆ.



Read more

[wpas_products keywords=”deal of the day sale today offer all”]