ಹೈಲೈಟ್ಸ್:
- ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರೆ ಚಾಲನೆಗೆ ಕ್ಷಣಗಣನೆ
- ಸಿದ್ದರಾಮಯ್ಯ, ಖರ್ಗೆ ಸೇರಿ ಹಲವು ಕೈ ನಾಯಕರು ಭಾಗಿ
- ಕಾವೇರಿ ನದಿಗೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್
ಸದ್ಯ ಸಂಗಮದ ಬಳಿ ಕಾಂಗ್ರೆಸ್ ನಿಂದ ವೇದಿಕೆ ಹಾಕಲಾಗಿದ್ದು, ಸಭಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಮೂಲಕ ಪಾದಯಾತ್ರೆಗೆ ವಿದ್ಯುಕ್ತ ಚಾಲನೆ ಸಿಗಲಿದೆ. ಇನ್ನು ಸಂಗಮದಲ್ಲಿರುವ ವೇದಿಕೆ ಮೇಲೆ ಹಾಗೂ ಮುಂಭಾಗ ಹಲವಾರು ಕಾಂಗ್ರೆಸ್ ನಾಯಕರು, ಸಿನಿಮಾ ನಟರು, ಕಾಂಗ್ರೆಸ್ ಶಾಸಕರು, ಮಹಿಳಾ ಪ್ರತಿನಿಧಿಗಳು ಇದ್ದಾರೆ.
ಇನ್ನು ಪಾದಯಾತ್ರೆಯ ವೇದಿಕೆ ಮೇಲೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ , ವಿವಿಧ ಸ್ವಾಮೀಜಿಗಳು ಕೂಡ ಕೂತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಮೊದಲ ದಿನ 14 ಕಿಲೋ ಮೀಟರ್ ಪಾದಯಾತ್ರೆಗ ಕಾಂಗ್ರೆಸ್ ನಿರ್ಧಾರ ಮಾಡಿದೆ. ಬರೋಬ್ಬರಿ 11 ದಿನ 165ಕ್ಕೂ ಹೆಚ್ಚು ಕಿಲೋಮೀಟರ್ ಪಾದಯಾತ್ರೆ ಸಾಗಲಿದೆ.
ನಿರ್ಬಂಧದ ನಡುವೆ ಭಾನುವಾರ ಮೇಕೆದಾಟು ಪಾದಯಾತ್ರೆ ಆರಂಭ, ಏನಾಗಲಿದೆ ಕ್ಲೈಮ್ಯಾಕ್ಸ್?
ಪಾದಯಾತ್ರೆಗೆ ಬರುವವರಿಗೆ ತೊಂದರೆ ನೀಡುತ್ತಿದ್ದಾರೆ!
ಡಿಕೆ ಶಿವಕುಮಾರ್ಮೇಕೆದಾಟು ಪಾದಯಾತ್ರೆಗೆ ಬರುವವರಿಗೆ ತೊಂದರೆ ನೀಡುತ್ತಿದ್ದಾರೆ. ಆದರೆ ನೀವು ಯಾರನ್ನೂ ತಡೆಯುವುದಕ್ಕೆ ಆಗಲ್ಲ. ಉದಯಿಸುವ ಸೂರ್ಯ, ಹರಿಯುವ ನೀರನ್ನು ತಡೆಯಲಾಗಲ್ಲ. ಅದೇ ರೀತಿ ನಮ್ಮ ಪಾದಯಾತ್ರೆಯನ್ನು ತಡೆಯುವುದಕ್ಕೆ ಆಗಲ್ಲ. ಪಾದಯಾತ್ರೆಗೆ ನಮ್ಮ ತಾಲೂಕಿನಲ್ಲಿ ಎಲ್ಲರೂ ಬೆಂಬಲಿಸುತ್ತಿದ್ದಾರೆ. ಆದರೆ ಕೆಲವರು ಪಾದಯಾತ್ರೆಗೆ ಹೋಗದಂತೆ ಕರೆ ಮಾಡಿ ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
Read more
[wpas_products keywords=”deal of the day sale today offer all”]