Karnataka news paper

ಲಕ ಲಕ ಲ್ಯಾಂಬೋರ್ಗಿನಿಯಲ್ಲಿ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌


ಚಂದನವನದ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಇದೀಗ ‘ಲಕ ಲಕ ಲ್ಯಾಂಬೋರ್ಗಿನಿ’ ಹತ್ತಿದ್ದಾರೆ. ಸಾಲು ಸಾಲು ಸಿನಿಮಾಗಳ ನಡುವೆಯೂ ಸಂಗೀತ ನಿರ್ದೇಶಕ, ಗಾಯಕ ಚಂದನ್‌ ಶೆಟ್ಟಿ ಜೊತೆಗೆ ಮ್ಯೂಸಿಕ್‌ ವಿಡಿಯೊವೊಂದಕ್ಕೆ ಹೆಜ್ಜೆಹಾಕಿದ್ದಾರೆ.

ಚಂದನ್‌ ಮ್ಯೂಸಿಕ್‌ ವಿಡಿಯೊಗಳಾದ ‘3ಪೆಗ್‌’, ‘ಚಾಕೊಲೇಟ್‌ ಗರ್ಲ್‌’, ‘ಪಾರ್ಟಿ ಫ್ರೀಕ್‌’, ‘ಟಕಿಲ’ ಹಿಟ್‌ ಆಗಿದ್ದವು. ಇದೀಗ ‘ಅಲೆ ಲೆಲೆಲೇ ಇವ್ಳು ಚೆಂದಾಗವ್ಳೆ..ಒಳ್ಳೆ ರೆಡ್‌ ಕಲರ್‌ ಲ್ಯಾಂಬೋರ್ಗಿನಿ ಹಂಗೇ ಅವ್ಳೆ’ ಎಂದು ಹಾಡಿದ್ದಾರೆ ಚಂದನ್‌. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸ ಹಾಡಿನ ಪೋಸ್ಟರ್‌ ಅನ್ನು ಚಂದನ್‌ ಅಪ್‌ಲೋಡ್‌ ಮಾಡಿದ್ದಾರೆ. ಈ ಮ್ಯೂಸಿಕ್‌ ವಿಡಿಯೊಗೆ ಸಾಹಿತ್ಯ ಬರೆದು, ಹಾಡಿದ್ದಾರೆ ಚಂದನ್‌. ಹೊಸ ವರ್ಷ ಸಮೀಪಿಸುತ್ತಿದ್ದು, ಶೀಘ್ರದಲ್ಲೇ ಈ ಹಾಡು ಬಿಡುಗಡೆಯಾಗಲಿದೆ. 

ಖ್ಯಾತ ನಿರ್ದೇಶಕ ನಂದ ಕಿಶೋರ್‌ ಈ ಹಾಡನ್ನು ನಿರ್ದೇಶಿಸಿದ್ದಾರೆ. ‘ಪೊಗರು’ ಸಿನಿಮಾದಲ್ಲಿ ನಂದ ಕಿಶೋರ್‌ ಜೊತೆಗೆ ಚಂದನ್‌ ಕಾರ್ಯನಿರ್ವಹಿಸಿದ್ದರು. ಚಿತ್ರದ ಸಂಗೀತ ನಿರ್ದೇಕನಾಗಿ ‘ಪೊಗರು’, ‘ಕರಾಬು’ ಹಾಡಿನ ಸಾಹಿತ್ಯ ಬರೆದು ಹಾಡಿದ್ದರು.





Read More…Source link