Karnataka news paper

ವಾರಾಂತ್ಯ ಕರ್ಫ್ಯೂ ನಡುವೆಯೂ ಬೆಂಗಳೂರಿನ ದೇವಾಲಯಗಳಲ್ಲಿ ಭಕ್ತರ ದಂಡು!


ಹೈಲೈಟ್ಸ್‌:

  • ಕೊರೊನಾ ಹಿನ್ನೆಲೆ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ
  • ಕರ್ಫ್ಯೂ ನಡುವೆಯೂ ದೇವಾಲಯಗಳಲ್ಲಿ ಭಕ್ತರ ದಂಡು
  • ಸುಬ್ರಹ್ಮಣ್ಯಸ್ವಾಮಿಯ ಷಷ್ಠಿ ಹಿನ್ನೆಲೆ ಜನವೋ ಜನ

ಬೆಂಗಳೂರು : ವಾರಾಂತ್ಯ ಕರ್ಫ್ಯೂ ನಡುವೆಯೂ ಶನಿವಾರ ನಗರದ ಕೆಲವು ದೇವಾಲಯಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಶನಿವಾರ ಸುಬ್ರಹ್ಮಣ್ಯಸ್ವಾಮಿಯ ಷಷ್ಠಿ. ಹೀಗಾಗಿ ಸುಬ್ರಹ್ಮಣ್ಯ ದೇವಾಲಯಗಳು ಮತ್ತು ಅಶ್ವತ್ಥಕಟ್ಟೆಗಳಲ್ಲಿ ನಾಗರಕಲ್ಲಿಗೆ ಪೂಜೆ ಸಲ್ಲಿಸಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.

ಬನಶಂಕರಿ ದೇವಾಲಯ, ಇಸ್ಕಾನ್‌, ರಾಜರಾಜೇಶ್ವರಿ ದೇವಾಲಯ, ಟಿಟಿಡಿ ಮತ್ತಿತರ ದೇವಾಲಯಗಳಲ್ಲಿ ಸಾರ್ವಜನಿಕ ಪ್ರವೇಶವನ್ನು ರದ್ದುಪಡಿಸಲಾಗಿತ್ತು. ಹೀಗಾಗಿ ಅರ್ಚಕರು ಮತ್ತು ದೇವಾಲಯದ ಆಡಳಿತ ಮಂಡಳಿ ಸಿಬ್ಬಂದಿಯಷ್ಟೇ ಪಾಲ್ಗೊಂಡು ಎಂದಿನಂತೆ ಅಭಿಷೇಕ, ಅಲಂಕಾರ ಮತ್ತು ಪೂಜೆಗಳನ್ನು ನೆರವೇರಿಸಿದರು. ಈ ವೇಳೆ ಕೆಲವು ಗಣ್ಯರು ಕೂಡ ಪಾಲ್ಗೊಂಡು ದೇವರ ದರ್ಶನ ಪಡೆದರು.

ಶನಿವಾರ ನಾನಾ ಆಂಜನೇಯನ ದೇವಾಲಯಗಳು, ಶನಿಮಹಾತ್ಮನ ದೇವಾಲಯಗಳು ಮತ್ತು ವೆಂಕಟೇಶ್ವರನ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ ಈ ವಾರ ವಾರಾಂತ್ಯ ಕರ್ಫ್ಯೂ ಇದ್ದುದರಿಂದ ಕೆಲವೆಡೆ ಭಕ್ತರ ಸಂಖ್ಯೆ ಕಡಿಮೆಯಿದ್ದರೂ ಹಲವೆಡೆ ಬೆಳಗಿನ ಅಭಿಷೇಕ, ಪೂಜೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.

ವಾರಾಂತ್ಯ ಕರ್ಫ್ಯೂ ಇದ್ದರೂ ಪ್ರವಾಸಿಗರಿಗೆ ಅನುಮತಿ

ಹೆಬ್ಬಾಳದ ಶನಿಮಹಾತ್ಮ ದೇವಾಲಯ, ಈಶ್ವರ ದೇವಾಲಯ, ಸಾಯಿಬಾಬಾ ದೇವಾಲಯ ಮತ್ತಿತರ ದೇವಾಲಯಗಳಲ್ಲಿ ಬೆಳಗ್ಗೆ ಭಕ್ತರು ಪಾಲ್ಗೊಂಡಿದ್ದರು.

ಅಶ್ವತ್ಥ ಕಟ್ಟೆಗಳಲ್ಲಿ ಜನವೋ ಜನ

ಶನಿವಾರ ಸುಬ್ರಹ್ಮಣ್ಯ ಷಷ್ಠಿ. ಈ ಹಿನ್ನೆಲೆಯಲ್ಲಿ ನಾಗರಕಲ್ಲಿಗೆ ಹಾಲೆರೆಯಲು ಜನ ಬೆಳಗ್ಗೆಯಿಂದಲೇ ಅಶ್ವತ್ಥಕಟ್ಟೆಗಳಿಗೆ ಕುಟುಂಬ ಸಮೇತರಾಗಿ ತೆರಳಿ ಪೂಜಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವೆಡೆ ಹುತ್ತಕ್ಕೂ ಹಾಲೆರೆದು ಪೂಜಿಸಿದರು.



Read more

[wpas_products keywords=”deal of the day sale today offer all”]