
ನ್ಯೂಯಾರ್ಕ್: ಅಮೆರಿಕದ ಜೆಎಫ್‌ಕೆ ವಿಮಾನ ನಿಲ್ದಾಣದಲ್ಲಿ ಭಾರತೀಯ ಮೂಲದ ಸಿಖ್ ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ ನಡೆಸಿ ಆತನ ಪೇಟವನ್ನು ಅಪರಿಚಿತ ವ್ಯಕ್ತಿ ಕಿತ್ತೆಸೆದ ಘಟನೆ ವರದಿಯಾಗಿದೆ.
ಈ ಸಂಬಂಧ ವಿಡಿಯೊ ಸಾಮಾಜಿಕ ಜಾಲಣತಾಣಗಳಲ್ಲಿ ಹರಿದಾಡುತ್ತಿದೆ. ಘಟನೆಯನ್ನು ಭಾರತದ ಕಾನ್ಸುಲೇಟ್ ಜನರಲ್ ಸೇರಿದಂತೆ ಹಲವರು ಖಂಡಿಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ: ಭಾರೀ ಹಿಮಪಾತ– ವಾಹನಗಳಲ್ಲೇ ಸಿಲುಕಿ 21 ಜನರ ಸಾವು
ನವಜೋತ್ ಪಾಲ್ ಕೌರ್ ಎಂಬವರು ಈ ವಿಡಿಯೊವನ್ನು ಜನವರಿ 4ರಂದು ಮೊದಲ ಬಾರಿಗೆ ಪೋಸ್ಟ್ ಮಾಡಿದ್ದರು. ವಿಮಾನ ನಿಲ್ದಾಣದಲ್ಲಿ ಇದ್ದವರು ಈ ವಿಡಿಯೂ ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ.
Another Sikh cab driver assaulted. This one at JFK Airport in NYC.
So upsetting to see. But it’s crucial that we don’t look away.pic.twitter.com/43s0jXMLSt
— Simran Jeet Singh (@simran) January 5, 2022
ನ್ಯೂಯಾರ್ಕ್‌ನ ಜಾನ್ ಎಫ್. ಕೆನೆಡಿ (ಜೆಎಫ್‌ಕೆ) ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗಡೆ ಭಾರತ ಮೂಲದ ಸಿಖ್ ವ್ಯಕ್ತಿ ಮೇಲೆ ಏಕಾಏಕಿ ಹಲ್ಲೆ ನಡೆಸುತ್ತಿರುವ ಅಪರಿಚಿತ ವ್ಯಕ್ತಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ.
ಘಟನೆ ಹಿಂದಿನ ನಿಖರ ಕಾರಣಗಳು ತಿಳಿದು ಬಂದಿಲ್ಲ. ಸಿಖ್ ಸಮುದಾಯದ ವಿರುದ್ಧ ದ್ವೇಷದ ಪ್ರವೃತ್ತಿ ಮುಂದುವರಿದಿದೆ ಎಂಬುದು ವ್ಯಕ್ತವಾಗಿದೆ.
ಈ ದೃಶ್ಯಗಳು ಮನಸ್ಸಿಗೆ ಅತೀವ ನೋವನ್ನುಂಟು ಮಾಡಿದೆ. ಇದನ್ನು ಅಮೆರಿಕದ ಅಧಿಕಾರಿಗಳ ಗಮನಕ್ಕೆ ತಂದಿದ್ದು, ತನಿಖೆ ನಡೆಸುವಂತೆ ಒತ್ತಾಯಿಸಿರುವುದಾಗಿ ಭಾರತದ ಕಾನ್ಸುಲೇಟ್ ಜನರಲ್ ತಿಳಿಸಿದರು.
Read more from source
[wpas_products keywords=”deals of the day offer today electronic”]