Karnataka news paper

ಶೀಘ್ರದಲ್ಲೇ ಫೀಚರ್‌ ಫೋನ್‌ಗಳಲ್ಲಿಯೂ ಲಭ್ಯವಾಗಲಿದೆ ಯುಪಿಐ ಪಾವತಿ ಸೇವೆ!


ಫೀಚರ್‌

ಹೌದು, ಸಾಮಾನ್ಯ ಫೀಚರ್‌ ಫೋನ್‌ ಬಳಕೆದಾರರಿಗೆ ಆರ್‌ಬಿಐ ಗುಡ್‌ ನ್ಯೂಸ್‌ ನೀಡಿದೆ. ಇದರಿಂದ ಯುಪಿಐ ಪಾವತಿ ಸೇವೆಯನ್ನು ನೀವು ಫೀಚರ್‌ ಫೋನ್‌ಗಳಲ್ಲಿ ಕೂಡ ಬಳಸಬಹುದಾಗಿದೆ. ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ಸ್ಮಾರ್ಟ್‌ಫೋನ್‌ಗಳ ಮೂಲಕವೇ ಹೆಚ್ಚು ಬಳಸಲಾಗುತ್ತಿದೆ. ಆರ್‌ಬಿಐ ತನ್ನ “ಅಭಿವೃದ್ಧಿ ಮತ್ತು ನಿಯಂತ್ರಕ ಅಭ್ಯಾಸಗಳ ಹೇಳಿಕೆಯಲ್ಲಿ” ಫೀಚರ್‌ ಫೋನ್‌ಗಳಲ್ಲಿ UPI ಪಾವತಿಗಳನ್ನು ತರುವ ಪ್ರಸ್ತಾಪವನ್ನು ಪ್ರಕಟಿಸಿದೆ. ಹಾಗಾದ್ರೆ ಆರ್‌ಬಿಐ ಹೇಳಿದ್ದೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆರ್‌ಬಿಐ

ಆರ್‌ಬಿಐ ಫೀಚರ್‌ ಫೋನ್‌ಗಳಲ್ಲಿಯೂ ಯುಪಿಐ ಪಾವತಿ ಸೇವೆಯನ್ನು ಬಳಸುವುದಕ್ಕೆ ಅವಕಾಶ ನೀಡುವುದಾಗಿ ಹೇಳಿದೆ. ಆದರೆ ಈ ಹೊಸ ಸೇವೆಯ ಬಗ್ಗೆ ಕೇಂದ್ರ ಬ್ಯಾಂಕ್ ಇನ್ನೂ ವಿವರಗಳನ್ನು ಬಿಡುಗಡೆ ಮಾಡಿಲ್ಲ. ಸದ್ಯ ಫೀಚರ್ ಫೋನ್‌ಗಳಿಗೆ ಯುಪಿಐ ಆಧಾರಿತ ಪಾವತಿಗಳನ್ನು ನೀಡುವ ನಿರ್ಧಾರವನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರಕಟಿಸಿದ್ದಾರೆ. ಫೀಚರ್ ಫೋನ್ ಬಳಕೆದಾರರನ್ನು ಡಿಜಿಟಲ್ ಪಾವತಿಯ ಮುಖ್ಯ ವಾಹಿನಿಗೆ ತರುವುದು ಇದರ ಉದ್ದೇಶವಾಗಿದೆ ಎಂದು ಹೇಳಲಾಗಿದೆ.

ಮೊಬೈಲ್

ಇನ್ನು ಭಾರತದಲ್ಲಿನ 118 ಕೋಟಿ ಮೊಬೈಲ್ ಬಳಕೆದಾರರಲ್ಲಿ ಸುಮಾರು 44 ಕೋಟಿ ಜನರು ಇನ್ನೂ ಫೀಚರ್ ಫೋನ್‌ಗಳನ್ನು ಬಳಸುತ್ತಿದ್ದಾರೆ. ಸ್ಟ್ಯಾಟಿಸ್ಟಾ ವರದಿ ಪ್ರಕಾರ, ಜುಲೈ 2021 ರಲ್ಲಿ, ದೇಶದಲ್ಲಿ ಸುಮಾರು 74 ಕೋಟಿ ಬಳಕೆದಾರರು ತಮ್ಮೊಂದಿಗೆ ಸ್ಮಾರ್ಟ್‌ಫೋನ್ ಹೊಂದಿದ್ದಾರೆ. RBI ರೆಗ್ಯುಲೇಟರಿ ಸ್ಯಾಂಡ್‌ಬಾಕ್ಸ್‌ನ ಮೊದಲ ಸಮೂಹದ ಸಮಯದಲ್ಲಿ, ಹಲವಾರು ಹೂಡಿಕೆದಾರರು ‘ರಿಟೇಲ್ ಪೇಮೆಂಟ್ಸ್’ ಎಂಬ ವಿಷಯದ ಅಡಿಯಲ್ಲಿ ಫೀಚರ್‌ ಫೋನ್ ಪಾವತಿಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಆರ್‌ಬಿಐ

ಇದಕ್ಕೆ ಸಂಬಂದಿಸಿದಂತೆ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್ ಅವರು ವ್ಯಾಪಕ ಡಿಜಿಟೈಸೇಶನ್ ಅನ್ನು ಉತ್ತೇಜಿಸಲು ಫೀಚರ್‌ ಫೋನ್‌ಗಳಲ್ಲಿ UPI ಆಧಾರಿತ ಡಿಜಿಟಲ್ ಪಾವತಿ ಪರಿಹಾರಗಳನ್ನು ಸುಗಮಗೊಳಿಸುತ್ತದೆ ಎಂದಿದ್ದಾರೆ. ಇದಕ್ಕಾಗಿ ಫೀಚರ್ ಫೋನ್‌ ಬಳಕೆದಾರರಿಗೆ UPI ಆಧಾರಿತ ಪಾವತಿ ಪ್ರಾಡಕ್ಟ್‌ ಅನ್ನು ಪ್ರಾರಂಭಿಸಲು ಪ್ರಸ್ತಾಪಿಸಲಾಗಿದೆ. ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಅನ್ನೊ ವಿಚಾರವನ್ನು ತಿಳಿಸಿದ್ದಾರೆ.

ಫೀಚರ್‌

ಹಾಗೇ ನೋಡಿದರೆ ಫೀಚರ್‌ ಫೋನ್‌ಗಳಲ್ಲಿ ನಗದು ಪಾವತಿ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. 2012 ರಲ್ಲಿ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ USSD ಆಧಾರಿತ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು *99# ಅನ್ನು ಪ್ರಾರಂಭಿಸಿತು. ಈ ಸೇವೆಯನ್ನು ಆರಂಭದಲ್ಲಿ BSNL ಮತ್ತು MTNL ಬಳಕೆದಾರರಿಗೆ ಪರಿಚಯಿಸಲಾಗಿತ್ತು. ಆದರೆ ನಂತರ ಇತರ ನೆಟ್‌ವರ್ಕ್‌ಗಳಿಗೂ ವಿಸ್ತರಿಸಲಾಯಿತು. 2016 ರಲ್ಲಿ, ಭಾರತ ಸರ್ಕಾರವು BHIM ಜೊತೆಗೆ USSD 2.0 ಅನ್ನು ಪರಿಚಯಿಸಿದ್ದು, ಇದು ಎಲ್ಲಾ UPI ಆಯ್ಕೆಗಳನ್ನು ಒಳಗೊಂಡಿದೆ. ಆದರೆ ಸೂಕ್ತ ಪ್ರಚಾರದ ಕೊರತೆ ಹಾಗೂ ಇತರೆ ನ್ಯುನತೆಗಳಕಾರಣದಿಂದ ಈ ಸೇವೆ ಹಚ್ಚಿನ ಜನಪ್ರಿಯತೆ ಪಡೆದುಕೊಂಡಿಲ್ಲ.

99# ಬಳಸಿ UPI ಮೂಲಕ ಹಣ ಕಳುಹಿಸುವುದು ಹೇಗೆ?

99# ಬಳಸಿ UPI ಮೂಲಕ ಹಣ ಕಳುಹಿಸುವುದು ಹೇಗೆ?

ಹಂತ:1 ಡಯಲ್ *99#
ನಿಮ್ಮ ಮೊಬೈಲ್‌ನಲ್ಲಿ *99# ಡಯಲ್ ಮಾಡಿ. ನಂತರ ನಿಮಗೆ ಸೆಂಡ್‌ ಮನಿ, ರಿಸಿವ್‌ ಮನಿ, ಬ್ಯಾಲೆನ್ಸ್ ಚೆಕ್‌, ಮೈ ಪ್ರೊಫೈಲ್, ಮತ್ತು ಯುಪಿಐ ಪಿನ್ ಸೇರಿದಂತೆ ಏಳು ವಿಭಿನ್ನ ಆಯ್ಕೆಗಳು ನಿಮಗೆ ಮೇನ್‌ ಮೆನುವಿನಲ್ಲಿ ಕಾಣಿಸಲಿದೆ. ಇದರಲ್ಲಿ ನಿಮಗೆ ಯಾವ ಆಯ್ಕೆ ಬೇಕೋ ಅದನ್ನು ಆಯ್ಕೆ ಮಾಡಿ.

ಹಂತ:2 ಸೆಂಡ್‌ ಮನಿ ಆಯ್ಕೆಮಾಡಿ
ನೀವು ಯಾರಿಗಾದರೂ ಹಣ ಕಳುಹಿಸಬೇಕಾದರೆ ಲಭ್ಯವಿರುವ ಆಯ್ಕೆಗಳಿಂದ ‘ಹಣ ಕಳುಹಿಸಿ’ ಆಯ್ಕೆ ಮಾಡಿರಿ, ಇದಕ್ಕಾಗಿ ನೀವು ಒಂದನ್ನು ಒತ್ತಿರಿ. ನಂತರ ನಿಮಗೆ ಮೊಬೈಲ್ ಸಂಖ್ಯೆ, ಯುಪಿಐ ಐಡಿ ಅಥವಾ ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್ ಬಳಸಿ ಹಣವನ್ನು ಕಳುಹಿಸುವ ಆಯ್ಕೆ ಕಾಣಲಿದೆ. ಇದರಲ್ಲಿ ನೀವು ಯಾವ ಆಯ್ಕೆಯನ್ನು ಮಾಡುತ್ತಿರಿ ಅದನ್ನು ಆಯ್ಕೆ ಮಾಡಿರಿ.

ಹಂತ:3 ಯಾರಿಗೆ ಕಳುಹಿಸಬೇಕು ಅವರನ್ನು ಆಯ್ಕೆ ಮಾಡಿ
ನೀವು ಮೊಬೈಲ್ ಸಂಖ್ಯೆ ಮೂಲಕ ಹಣ ಕಳುಹಿಸುವುದಾದರೆ ನೀವು ಹಣ ಕಳುಹಿಸುತ್ತಿರುವ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
UPI ID ಯನ್ನು ಆಯ್ಕೆ ಮಾಡಿದರೆ: ಆ ವ್ಯಕ್ತಿಯ UPI ID ಯನ್ನು ನಮೂದಿಸಿ

ಹಂತ:4 ಅಮೌಂಟ್‌ ಎಂಟ್ರಿ ಮಾಡಿ
ನೀವು ಫಲಾನುಭವಿಯ ಮೊಬೈಲ್ ಸಂಖ್ಯೆ, ಯುಪಿಐ ಐಡಿ ಅಥವಾ ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಿದ ನಂತರ, ಅಮೌಂಟ್‌ ಎಂಟ್ರಿ ಮಾಡಿ.

ಹಂತ:5 ನಿಮ್ಮ UPI ಪಿನ್ ಎಂಟ್ರಿ ಮಾಡಿರಿ
ಮೇಲಿನ ಎಲ್ಲಾ ಹಂತಗಳು ಪೂರ್ಣಗೊಂಡ ನಂತರ ನೀವು ನಿಮ್ಮ ಆರು ಅಥವಾ ನಾಲ್ಕು-ಅಂಕಿಯ UPI ಪಿನ್ ಎಂಟ್ರಿ ಮಾಡಿ, ನಂತರ, ಸೆಂಡ್‌ ಅನ್ನು ಕ್ಲಿಕ್ ಮಾಡಿ.ಈಗ ನಿಮ್ಮ ಹಣ ನೀವು ಬಯಸಿದ ವ್ಯಕ್ತಿಯ ಅಕೌಂಟ್‌ಗೆ ವರ್ಗಾವಣೆ ಆಗಿರುತ್ತದೆ.

ಆಫ್‌ಲೈನ್ UPI ಪಾವತಿ ಸೇವೆಯ ವಿಶೇಷತೆಗಳು!

ಆಫ್‌ಲೈನ್ UPI ಪಾವತಿ ಸೇವೆಯ ವಿಶೇಷತೆಗಳು!

* ಇಂಟರ್‌ನೆಟ್‌ ಇಲ್ಲದೆ ಹಣಕಾಸು ಪಾವತಿ ಮಾಡಲು ಅವಕಾಶ ನೀಡಲಿದೆ.
* ಹಣವನ್ನು ಕಳುಹಿಸುವುದು, ಅಕೌಂಟ್‌ ಬ್ಯಾಲೆನ್ಸ್‌ ಚೆಕ್‌ ಮಾಡುವುದು ಮತ್ತು ಯುಪಿಐ ಪಿನ್ ಬದಲಾಯಿಸುವ ಫೀಚರ್ಸ್‌ಗಳನ್ನು ಬಳಸಬಹುದು.
* ಇನ್ನು ನೀವು ಎಲ್ಲಾ ಟೆಲಿಕಾಂಗಳಲ್ಲಿ ಸಾಮಾನ್ಯ ಕೋಡ್
*99# ಮೂಲಕ ಪ್ರವೇಶಿಸಬಹುದು.
* GSM ಸೇವಾ ಪೂರೈಕೆದಾರರಲ್ಲಿ ಎಲ್ಲಾ ಮೊಬೈಲ್ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ.
* ಇನ್ನು ಈ ಸೇವೆ ದಿನದ 24ಗಂಟೆಯೂ ಲಭ್ಯವಾಗಲಿದೆ.
* ನಿಮ್ಮ ಆಯ್ಕೆಯ ಭಾಷೆಗಳಲ್ಲಿ ಪ್ರವೇಶಿಸಬಹುದು.



Read more…