Karnataka news paper

ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್‍ಗೆ ಥಾಣೆಯಲ್ಲಿ ವಾಸಿಸಲು ಕೋರ್ಟ್ ಅನುಮತಿ


Online Desk

ಥಾಣೆ: ಎಲ್ಗಾರ್ ಪರಿಷದ್ ಪ್ರಕರಣದ ಆರೋಪಿ ವಕೀಲೆ ಮತ್ತು ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಅವರಿಗೆ ಥಾಣೆಯಲ್ಲಿ ವಾಸಿಸಲು ವಿಚಾರಣಾ ನ್ಯಾಯಾಲಯ ಅನುಮತಿ ನೀಡಿದೆ.

ಭಾರದ್ವಾಜ್ ಅವರ ಸ್ನೇಹಿತ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದ ನಂತರ ವಿಶೇಷ ನ್ಯಾಯಾಧೀಶ ದಿನೇಶ್ ಇ ಕೊತಲಿಕರ್ ಅವರು ಗುರುವಾರ ಮುಂಬೈ ಬದಲಿಗೆ ಥಾಣೆಯಲ್ಲಿ ಉಳಿಯಲು ಅನುಮತಿ ಕೋರಿದ್ದ ಮನವಿಯನ್ನು ಪುರಸ್ಕರಿಸಿದರು.

ಇದನ್ನು ಓದಿ: ಕೊರೊನಾ ಹೆಚ್ಚಳ ಹಿನ್ನೆಲೆ ವರವರ ರಾವ್ ಸರಂಡರ್ ದಿನಾಂಕ ಮುಂದೂಡಿದ ಹೈಕೋರ್ಟ್​

ಮುಂಬೈನಲ್ಲಿ ವಸತಿ ದುಬಾರಿಯಾಗಿರುವುದರಿಂದ ಥಾಣೆಯಲ್ಲಿರುವ ಸ್ನೇಹಿತನ ನಿವಾಸಕ್ಕೆ ತೆರಳಲು ಭಾರದ್ವಾಜ್ ಅನುಮತಿ ಕೋರಿದ್ದರು.

ವಿಚಾರಣಾ ನ್ಯಾಯಾಲಯವು ಭಾರದ್ವಾಜ್‍ಗೆ ವಿಧಿಸಿದ ಜೈಲು ಷರತ್ತುಗಳ ಪ್ರಕಾರ, ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯೊಳಗೆ ವಾಸಿಸಬೇಕೇ ವಿನಃ ಹೊರಗೆ ವಾಸಿಸುವಂತಿಲ್ಲ ಎಂದು ಹೇಳಲಾಗಿತ್ತು.

ಜಾಮೀನು ಷರತ್ತುಗಳ ಭಾಗವಾಗಿ ಥಾಣೆಯ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗುವಂತೆ ನ್ಯಾಯಾಲಯ ಸುಧಾ ಅವರಿಗೆ ಸೂಚಿಸಿದೆ. ವಿಳಾಸವನ್ನು ಪರಿಶೀಲಿಸಲು ತನಿಖಾ ಸಂಸ್ಥೆ ಎನ್‍ಐಎಗೆ ಸ್ವಾತಂತ್ರ್ಯವಿದೆ ಎಂದು ಕೋರ್ಟ್ ಹೇಳಿದೆ.



Read more

[wpas_products keywords=”deal of the day”]