ಹೈಲೈಟ್ಸ್:
- ಮಧ್ಯಮ ವರ್ಗದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕಿಂಗ್ ವಲಯದ ಸುಧಾರಣೆ
- ಇದರಿಂದ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸ್ಥಿತಿ ಉತ್ತಮವಾಗಿದೆ
- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ
“ಇದರಿಂದಾಗಿ, ಪ್ರಸ್ತುತ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸ್ಥಿತಿ ಸುಧಾರಿಸಿದೆ. ಇದರಿಂದಾಗಿ ಬ್ಯಾಂಕುಗಳು ತಮಗೆ ಅಗತ್ಯವಿರುವ ಹಣವನ್ನು ತಾವೇ ಸ್ವಂತವಾಗಿ ಸಂಗ್ರಹಿಸಲು ಸಮರ್ಥವಾಗಿವೆ. ಇದು ಠೇವಣಿದಾರರು ಮತ್ತು ಅವರ ಹಣವು ನಮ್ಮ ಎಲ್ಲ ಬ್ಯಾಂಕುಗಳಲ್ಲಿ ಸುರಕ್ಷಿತವಾಗಿವೆ ಎಂಬುದನ್ನು ಸೂಚಿಸುತ್ತದೆ” ಎಂದು ಹೇಳಿದರು.
ಠೇವಣಿ ವಿಮಾ ಯೋಜನೆಯ ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಸೀತಾರಾಮನ್, 2019 ರಿಂದ ಬ್ಯಾಂಕ್‌ಗಳ ಮೇಲೆ ನಿಯಂತ್ರಣ ಕ್ರಮಗಳನ್ನು ಹೇರಿದ್ದರಿಂದ ಠೇವಣಿದಾರರ ಹಣ ಸಿಕ್ಕಿಹಾಕಿಕೊಂಡಿದ್ದು, ಸಾವಿರಾರು ಠೇವಣಿದಾರರು ಸಾಕಷ್ಟು ತೊಂದರೆಗೆ ಒಳಗಾಗಿರುವ ದೂರುಗಳು ಬಂದಿವೆ ಎಂದೂ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
“ಠೇವಣಿದಾರರು ತಮ್ಮ ಹಣಕ್ಕಾಗಿ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಕಾಯ್ದಿದ್ದಾರೆ. ಏಕೆಂದರೆ ಬ್ಯಾಂಕ್ ಅನ್ನು ದಿವಾಳಿಯನ್ನಾಗಿ ಘೋಷಿಸಬೇಕಾಗಬಹುದು ಅಥವಾ ಕೆಲವನ್ನು ವಿಲೀನಗೊಳಿಸಬೇಕಾಗುತ್ತದೆ ಎಂದು ಸೀತಾರಾಮನ್ ಹೇಳಿದರು.
ವಿತ್ತ ಸಚಿವರ ಪ್ರಕಾರ, ಠೇವಣಿದಾರರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಠೇವಣಿ ವಿಮಾ ಯೋಜನೆಯಲ್ಲಿ ಕೆಲವು ಬದಲಾವಣೆ ತಂದಿದೆ. “ಅಲ್ಲದೆ ಇದೊಂದು ಪ್ರಮುಖ ಹೆಜ್ಜೆ, ಮಧ್ಯಮ ವರ್ಗದ ಕಷ್ಟಗಳನ್ನು ಅರ್ಥಮಾಡಿಕೊಳ್ಳುವ ಸೂಕ್ಷ್ಮ ಹೆಜ್ಜೆಯಾಗಿದೆ” ಎಂದು ಸೀತಾರಾಮನ್ ಹೇಳಿದರು.
ಕೈಗೆಟುಕುವ ಮತ್ತು ಮಧ್ಯಮ ಆದಾಯದ ವಸತಿಗಾಗಿ ವಿಶೇಷ ವಿಂಡೋ (SWAMIH) ತೆರೆದಿರುವುದು ಮತ್ತೊಂದು ವಿಶೇಷ ಕ್ರಮವಾಗಿದೆ. ಇದರ ಮೂಲಕ 33 ನಗರಗಳಲ್ಲಿ 1.4 ಲಕ್ಷ ಮನೆ ಖರೀದಿದಾರರು ಮತ್ತು 243 ಯೋಜನೆಗಳು ತಮ್ಮ ಮನೆಗಳನ್ನು ಮರಳಿ ಪಡೆಯುತ್ತಿದ್ದಾರೆ ಎಂದು ಸೀತಾರಾಮನ್ ಹೇಳಿದರು.
ಹೆಚ್ಚಿನ ಆದಾಯ, ಹೆಚ್ಚಿನ ಅಪಾಯ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ ದಾಸ್ ಅವರು ಸಮಾರಂಭದಲ್ಲಿ ಮಾತನಾಡಿ, ಹೆಚ್ಚಿನ ಆದಾಯವನ್ನು ಬೆನ್ನಟ್ಟುವ ಠೇವಣಿದಾರರಿಗೆ ಎಚ್ಚರಿಕೆ ನೀಡಿದರು.
“ಬ್ಯಾಂಕ್ ಹೆಚ್ಚಿನ ಬಡ್ಡಿ ನೀಡುತ್ತವೆ ಎಂದ ಮಾತ್ರಕ್ಕೆ ಹಣ ಠೇವಣಿ ಮಾಡಬಾರದು. ಅಂತಹ ಬ್ಯಾಂಕುಗಳಲ್ಲಿ ಹಣ ಠೇವಣಿ ಮಾಡುವ ಮೊದಲು ಬಹಳ ಜಾಗರೂಕರಾಗಿರಬೇಕು ಏಕೆಂದರೆ ಸಾಮಾನ್ಯವಾಗಿ, ಹೆಚ್ಚಿನ ಆದಾಯ ಅಥವಾ ಹೆಚ್ಚಿನ ಬಡ್ಡಿ ದರಗಳು ಹೆಚ್ಚಿನ ಅಪಾಯಗಳೊಂದಿಗೆ ಸಂಬಂಧ ಹೊಂದಿವೆ” ಎಂದು ಆರ್‌ಬಿಐ ಗವರ್ನರ್ ಹೇಳಿದರು.
ಠೇವಣಿ ವಿಮಾ ಮೊತ್ತದ ಪಾವತಿಯನ್ನು ಕೊನೆಯ ಉಪಾಯವಾಗಿ ನೋಡಬೇಕು ಎಂದು ದಾಸ್ ಒತ್ತಿ ಹೇಳಿದರು. “ಆರ್‌ಬಿಐ ನಿಯಂತ್ರಕ ಮಾರ್ಗಸೂಚಿಗಳು ಮತ್ತು ಮೇಲ್ವಿಚಾರಣಾ ವಿಧಾನಗಳನ್ನು ಬಲಪಡಿಸಲು ಪೂರ್ವಭಾವಿ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ. ಮತ್ತು ಮುಂದೆ ಯಾವುದೇ ಅಪಾಯಗಳು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕುಗಳು ಸ್ಥಿತಿಸ್ಥಾಪಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ” ಎಂದು ಶಕ್ತಿಕಾಂತ ದಾಸ್ ಹೇಳಿದರು.
ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ‘ಎಕನಾಮಿಕ್ ಟೈಮ್ಸ್’ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.