Karnataka news paper

ಟಿವಿ ಕ್ಷೇತ್ರದಲ್ಲಿ ಸಂಬಳ ಬೇಕು ಅಂದ್ರೆ ಬೇಡ್ಬೇಕು, ಅಳಬೇಕು, ಗೋಗರೆಯಬೇಕು: ಕಿರುತೆರೆ ನಟಿ ನಿಯಾ ಶರ್ಮಾ


ಹೈಲೈಟ್ಸ್‌:

  • ಹಿಂದಿಯ ಅನೇಕ ಧಾರಾವಾಹಿಗಳಲ್ಲಿ ನಿಯಾ ಶರ್ಮಾ ನಟನೆ
  • ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುವ ಈ ಕಿರುತೆರೆ ನಟಿ
  • ಟಿವಿ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಸರಿಯಾಗಿ ಹಣ ಸಿಗಲ್ಲ ಎಂದ ‘ಜಮಾಯಿ ರಾಜ’ನ ರಾಣಿ

ಸದಾ ಬೋಲ್ಡ್ ಅವತಾರದಿಂದ ಎಲ್ಲರೂ ಹುಬ್ಬೇರಿಸುವಂತೆ ಮಾಡುತ್ತ, ಆಗಾಗ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಕಿರುತೆರೆ ನಟಿಯರಲ್ಲಿ ನಿಯಾ ಶರ್ಮಾ ಹೆಸರು ಅಗ್ರಗಣ್ಯ ಸ್ಥಾನದಲ್ಲಿದೆ. ಟಿವಿ ರಂಗದ ಬಗ್ಗೆ ಮತ್ತೊಂದು ಬೋಲ್ಡ್ ಹೇಳಿಕೆ ನೀಡಿ ಎಲ್ಲರಿಗೂ ಇನ್ನೊಮ್ಮೆ ನಿಯಾ ಶರ್ಮಾ ಆಶ್ಚರ್ಯ ಮೂಡಿಸಿದ್ದಾರೆ.

ಹೌದು, ಟಿವಿ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿರುವ ನಿಯಾ ಶರ್ಮಾ ಅವರು ಅಲ್ಲಿ ಸಂಭಾವನೆ ಪಡೆಯಲು ಬೇಡಬೇಕು, ಅಳಬೇಕು, ಜಗಳ ಆಡಬೇಕು ಎಂದಿದ್ದಾರೆ. ಓಟಿಟಿಯಲ್ಲಿ ಕೆಲಸ ಮಾಡುವ ಕಲಾವಿದರಿಗೆ ಸಿಗುವ ಗೌರವ ಜಾಸ್ತಿ ಎಂದು ಅವರು ಹೇಳಿದ್ದಾರೆ.

ಭೀಕರ ಪರಿಸ್ಥಿತಿ ಎದುರಿಸಿದ ಬಗ್ಗೆ ಮಾತನಾಡಿರುವ ನಿಯಾ ಶರ್ಮಾ ಅವರು, 12 ಗಂಟೆ ಕೆಲಸ ಮಾಡಿ ಶೂಟಿಂಗ್‌ ಸೆಟ್‌ನಿಂದ ಹೊರಟರೆ ವೃತ್ತಿ ಧರ್ಮ ಇಲ್ಲ ಅಂತ ನಮಗೆ ಬಿರುದು ಕೊಡುತ್ತಾರೆ. ಒಮ್ಮೊಮ್ಮೆ ನಮಗೆ ಗಲೀಜಾದ ವ್ಯಾನಿಟಿಯನ್ನು ನೀಡುತ್ತಾರೆ ಎಂದಿದ್ದಾರೆ.

ಕಿರುತೆರೆ ನಟನ ಮೇಲೆ ಅತ್ಯಾಚಾರದ ಆರೋಪ; ಎರಡು ಜಡೆ ಮಧ್ಯೆ ಕಾದಾಟ ಶುರುವಾಯ್ತು!

“ನೀವು ಕಷ್ಟಪಟ್ಟು ಕೆಲಸ ಮಾಡಿದಾಗಲೂ ಕೂಡ ಸಂಭಾವನೆಗೋಸ್ಕರ ಬೇಡಬೇಕು. ಇದನ್ನೆಲ್ಲ ನಾನು ಅನುಭವಿಸಿದ್ದೇನೆ, ಹೋರಾಟ ಮಾಡಿದ್ದೇನೆ. ಅದೆಲ್ಲ ನಿಜಕ್ಕೂ ಕೆಟ್ಟದಾದ ಹೋರಾಟ. ಸ್ಟುಡಿಯೋ ಹೊರಗಡೆ ಕೂತು ನಾನು ಬಾಲಿಶವಾಗಿ ಆಡುತ್ತಿದ್ದೆ. ಸಂಭಾವನೆ ನೀಡದಂತೂ ನಾನು ಕೆಲಸ ಮಾಡೋದಿಲ್ಲ ಅಂತ ಹೇಳುತ್ತಿದ್ದೆ. ನಾನು ಹಾಗೆ ಮಾಡಿದಂತೂ ಸಂಬಳ ಸಿಗುತ್ತಲೇ ಇರಲಿಲ್ಲ. ನಾವು ಹಣಕ್ಕಾಗಿ ಬೇಡಬೇಕು, ಅಳಬೇಕು, ಮನವಿ ಮಾಡಬೇಕು” ಎಂದು ನಿಯಾ ಶರ್ಮಾ ಹೇಳಿದ್ದಾರೆ.

“ನನಗೆ ಹಣ ಕೊಡಲ್ಲ ಎಂದು ತಿರಸ್ಕರಿಸಿದಾಗ, ಹೇಗಾದರೂ ಸರಿ ನಾನು ಹಣ ಪಡೆದುಕೊಳ್ಳಬೇಕು ಅಂತ ನಿರ್ಧಾರ ಮಾಡಿದ್ದೆ. ನೀವು ಬ್ಲಾಕ್‌ಲಿಸ್ಟ್‌ ಮಾಡಿದರೂ ಪರವಾಗಿಲ್ಲ, ಮತ್ತೆ ಕೆಲಸ ಕೊಡದಿದ್ರೂ ಪರವಾಗಿಲ್ಲ, ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ. ಹಣ ಪಡೆಯೋಕೆ ನಾನು ಹೋರಾಟ ಮಾಡಿಬಿಟ್ಟೆ” ಎಂದು ನಿಯಾ ಶರ್ಮಾ ಹೇಳಿದ್ದಾರೆ.

Kaali – Ek Agnipariksha ಶೋ ಮೂಲಕ ನಿಯಾ ಶರ್ಮಾ ಅವರು ಕಿರುತೆರೆಗೆ ಕಾಲಿಟ್ಟರು. ಆ ನಂತರ ಅವರು ‘Ek Hazaaron Mein Meri Behna Hai’, ‘jamai raja’, ‘Ishq Mein Marjawan’, ‘Naagin 4: Bhagya Ka Zehreela Khel’ ಧಾರಾವಾಹಿಗಳಲ್ಲಿ ನಿಯಾ ಕಾಣಿಸಿಕೊಂಡಿದ್ದರು. ಅದಾದ ನಂತರದಲ್ಲಿ Khatron Ke Khiladi, Box Cricket League ರಿಯಾಲಿಟಿ ಶೋನ ಭಾಗವಾಗಿದ್ದರು ನಿಯಾ ಶರ್ಮಾ. Ladies Vs Gentlemen season 2ರಲ್ಲಿಯೂ ನಿಯಾ ಕಾಣಿಸಿಕೊಂಡಿದ್ದರು. Jamai 2.0 ಎಂಬ ವೆಬ್ ಸಿರೀಸ್‌ನಲ್ಲಿಯೂ ನಿಯಾ ಬಣ್ಣ ಹಚ್ಚಿದ್ದರು.

ಬಾಲಿವುಡ್ ಬೆಡಗಿಯರ ‘ಲಿಪ್‌ ಲಾಕ್’ ನೋಡಿ ಕಂಗಾಲಾದ ಜನ!

ಇತ್ತೀಚೆಗೆ ನಿಯಾ ಶರ್ಮಾ ಅವರು ಮ್ಯೂಸಿಕ್ ವಿಡಿಯೋಗಳನ್ನು ಮಾಡುತ್ತಿದ್ದಾರೆ, ಅನೇಕ ಶೋಗಳಲ್ಲಿ ನಿಯಾ ಶರ್ಮಾ ಅವರ ಮಾತಿನ ಚಾಕಚಕ್ಯತೆ ತೋರಿಸಿದ್ದಾರೆ. ಕಪ್ಪು & ಬಿಳಿ ಬಣ್ಣದ ಬಗ್ಗೆ ಜನರು ತಾರತಮ್ಯ ಮಾಡುವ ಬಗ್ಗೆಯೂ ನಿಯಾ ಶರ್ಮಾ ಆಕ್ರೋಶ ಹೊರಹಾಕಿದ್ದರು. ರೆಹ್ನಾ ಪಂಡಿತ್ ಜೊತೆಗೆ ನಿಯಾ ಶರ್ಮಾ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದರು. ಕಿರುತೆರೆಯ ಖ್ಯಾತ ನಟ ಪರ್ಲ್ ವಿ ಪುರಿ ಅವರು 5 ವರ್ಷದ ಹುಡುಗಿ ಅತ್ಯಾಚಾರ ಮಾಡಿರುವ ಆರೋಪದ ಕೇಸ್‌ನಲ್ಲಿ ಜೈಲಿನಲ್ಲಿದ್ದಾಗ ಡೆವೊಲಿನಾ ಭಟ್ಟಾಚಾರ್ಜಿ ಹಾಗೂ ನಿಯಾ ಶರ್ಮಾ ನಡುವೆ ಟ್ವಿಟ್ಟರ್‌ನಲ್ಲಿ ದೊಡ್ಡ ಜಗಳ ಆಗಿತ್ತು.



Read more

[wpas_products keywords=”deal of the day party wear dress for women stylish indian”]