ಅತ್ತ ಆಡಿದ 7 ಪಂದ್ಯಗಳಲ್ಲಿ ಖಾತೆ ತೆರೆಯಲು ವಿಫಲಗೊಂಡಿರುವ ಟೈಟನ್ಸ್ ತಂಡ ಎರಡು ಡ್ರಾ ದೊಂದಿಗೆ ಒಟ್ಟು 6 ಅಂಕ ಹೊಂದಿದೆ. ಐದು ಸೋಲು ಕಂಡಿರುವ ಟೈಟನ್ಸ್ 12 ತಂಡಗಳಿರುವ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
PKL 2021-22: ಐದನೇ ಗೆಲುವಿನ ನಿರೀಕ್ಷೆಯಲ್ಲಿ ಬೆಂಗಳೂರು ಬುಲ್ಸ್!
ಟ್ಯಾಕಲ್ ಮತ್ತು ರೇಡಿಂಗ್ ಎರಡು ವಿಭಾಗಗಳಲ್ಲೂ ಪ್ರಭುತ್ವ ಸಾಧಿಸಿದ ಯು ಮುಂಬಾ ಮೊದಲಾರ್ಧಕ್ಕೆ 28 -13ರಲ್ಲಿ ಮೇಲುಗೈ ಸಾಧಿಸಿತು. ನಂತರವೂ ತನ್ನ ಆಕ್ರಮಣಕಾರಿ ಆಟ ಮುಂದುವರಿಸಿದ ಮುಂಬಾ ತಂಡ ಪಂದ್ಯದ ಮುಕ್ತಾಯಕ್ಕೆ 10 ಅಂಕಗಳ ಅಂತರ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಮುಂಬಾ ತಂಡದ ಪರ ಅಭಿಷೇಕ್ ಸಿಂಗ್ 12 ಅಂಕ ಗಳಿಸಿದರೆ, ವಿ.ಅಜಿತ್ 8 ಅಂಕ ಗಳಿಸಿ ತಂಡದ ಮೂರನೇ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಇವರಲ್ಲದೆ, ಡಿಫೆಂಡರ್ ರಿಂಕು 7 ಅಂಕ ಕಲೆಹಾಕಿದರೆ, ನಾಯಕ ಫಜಲ್ ಅತ್ರಾಚರಿ ಮತ್ತು ಹರೇಂದ್ರ ಸಿಂಗ್ ತಲಾ ನಾಲ್ಕು ಅಂಕ ಗಳಿಸಿ ತಂಡದ ಗೆಲುವಿಗೆ ತಮ್ಮ ಕಾಣಿಕೆ ಅರ್ಪಿಸಿದರು.
ಪಿಂಕ್ ಪ್ಯಾಂಥರ್ಸ್ ಹೆಡೆಮುರಿ ಕಟ್ಟಿದ ಬೆಂಗಳೂರು ಬುಲ್ಸ್!
ಅತ್ತ ಟೈಟನ್ಸ್ ಪರ ನಾಯಕ ಸುರಿಂದರ್ ಸಿಂಗ್ ಖಾತೆ ತೆರೆಯಲು ವಿಫಲರಾದರೆ, ರಾಕೇಶ್ ಗೌಡ ಮತ್ತು ಅಂಕಿತ್ ಬೆನಿವಾಲ್ ಅನುಕ್ರಮವಾಗಿ ಏಳು ಮತ್ತು 6 ಅಂಕ ತಂದು ತಂಡದ ಹೋರಾಟಕ್ಕೆ ಯತ್ನಿಸಿದರು. ಡಿಫೆಂಡರ್ ಮೊಹಮ್ಮದ್ ಸಿಹಾಸ್ 5 ಅಂಕ ಗಳಿಸಿದರೂ ತಂಡಕ್ಕೆ ಮೊದಲ ಜಯ ತಂದುಕೊಡುವಲ್ಲಿ ವಿಫಲರಾದರು.
ದಬಾಂಗ್ ದಿಲ್ಲಿಗೆ ಗೆಲುವು: ದಿನದ ಮತ್ತೊಂದು ಪಂದ್ಯದಲ್ಲಿ ದಬಾಂಗ್ ದಿಲ್ಲಿ ತಂಡ 37 -33 ಅಂಕಗಳಿಂದ ಯು.ಪಿ.ಯೋಧಾ ತಂಡವನ್ನು ಸೋಲಿಸಿ 5 ಅಂಕ ಸಂಪಾದಿಸಿತು. ಅಲ್ಲದೆ ಅಂಕಪಟ್ಟಿಯಲ್ಲಿ 31 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೂ ಏರಿತು. ದಬಾಂಗ್ ದಿಲ್ಲಿ ಪರ ಸ್ಥಿರ ಪ್ರದರ್ಶನ ಮುಂದುವರಿಸಿದ ನವೀನ್ ಕುಮಾರ್ 18 ಅಂಕ ಕಲೆಹಾಕಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು.
ಪ್ರೊ ಕಬಡ್ಡಿ ಜಯಂಟ್ಸ್ ಸೋಲಿಸಿ ಅಂಕಪಟ್ಟಿಯ ಪಾತಾಳದಿಂದ ಮೇಲೆದ್ದ ಪಲ್ಟನ್!
ಅತ್ತ ಪ್ರದೀಪ್ ನರ್ವಾಲ್ ಮತ್ತು ಸುರೇಂದರ್ ಗಿಲ್ ತಲಾ 9 ಅಂಕ ಗಳಿಸಿದರೂ ತಂಡದ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ.
ವಿರಾಮಕ್ಕೆ 13-18ರಲ್ಲಿ ಹಿನ್ನಡೆಯಲ್ಲಿದ್ದ ದಬಾಂಗ್ ದಿಲ್ಲಿ ತಂಡ ನವೀನ್ ಅವರ ಚುರುಕಿನ ರೇಡಿಂಗ್ ಸಾಹಸದಿಂದ ದ್ವಿತೀಯಾರ್ಧಲ್ಲಿ 24-15ರಲ್ಲಿ ಮುನ್ನಡೆ ಗಳಿಸುವ ಮೂಲಕ ತಿರುಗೇಟು ನೀಡಿತು.
Read more
[wpas_products keywords=”deal of the day gym”]