Online Desk
ಬೆಂಗಳೂರು: ಮಾನಹಾನಿಕರ ಸುದ್ದಿಯೊಂದನ್ನು ಬಿತ್ತರಿಸುವುದಾಗಿ ಬೆದರಿಸಿ ವ್ಯಕ್ತಿಯೊಬ್ಬರಿಂದ 20 ಲಕ್ಷ ರು. ಲಂಚ ಪಡೆದಿದ್ದ ಖಾಸಗಿ ಸುದ್ದಿ ವಾಹಿನಿಯ ಸಿಬ್ಬಂದಿ ತೀರ್ಥಪ್ರಸಾದ್ ಎಂಬಾತನನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ದೊಡ್ಡಗುಬ್ಬಿ ಮುಖ್ಯ ರಸ್ತೆ ಬಳಿ ವಾಸವಿರುವ ಅನಿಲ್‌ಕುಮಾರ್ ಎಂಬುವರು ನೀಡಿರುವ ದೂರಿನ ಮೇಲೆ ಮುಖ್ಯ ಆರೋಪಿಯನ್ನು ಬಂಧಿಸಲಾಗಿದೆ. ವಿದ್ಯಾರಣ್ಯಪುರ ಕೋಕನಟ್ ಗಾರ್ಡನ್‌ನ ನಿವಾಸಿ ಹಾಗೂ ಖಾಸಗಿ ಸುದ್ದಿ ವಾಹಿನಿಯ ಉದ್ಯೋಗಿ ತೀರ್ಥ ಪ್ರಸಾದ್ (38) ಎಂಬಾತನೇ ಬಂಧಿತ ಆರೋಪಿ.
ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 384, 504, 506ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇವರನ್ನು ಇದೇ 7ರಿಂದ 13ರವರೆಗೆ ಪೊಲೀಸ್ ಕಸ್ಟಡಿಗೆ ನೀಡುವಂತೆ 11ನೇ ಎ.ಸಿ.ಎಂ.ಎಂ.ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಇನ್ನೂ ಪ್ರಕರಣ ಸಂಬಂಧ ಬಿಟಿವಿ ಸುದ್ದಿ ವಾಹಿನಿಯು ಸ್ಪಷ್ಟನೆ ನೀಡಿದೆ. ವಾಸ್ತವವಾಗಿ ಆರೋಪಿ ತೀರ್ಥಪ್ರಸಾದ ಎಂಬಾತ ಬಿಟಿವಿ ಉದ್ಯೋಗಿಯಲ್ಲ. ತೀರ್ಥಪ್ರಸಾದ್ ಬಿಟಿವಿ ಸುದ್ದಿ ವಾಹಿನಿಯಲ್ಲಿ ಸುದ್ದಿಯೇತರ ಸಿಬ್ಬಂದಿಯಾಗಿ ನವೆಂಬರ್ 01, 2020 ರಂದು ಕೆಲಸಕ್ಕೆ ಸೇರಿಕೊಂಡಿದ್ದು, ಸುದ್ದಿ ವಿಭಾಗಕ್ಕೆ ಸಂಬಂಧಪಟ್ಟಿಲ್ಲದ ವಿಡಿಯೋ ಎಡಿಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ತೀರ್ಥಪ್ರಸಾದನು 11.09.2021 ರಂದು ರಾಜೀನಾಮೆ ನೀಡಿದ್ದು, ಅದೇ ದಿನ ಅಂದರೆ 11.09.2021 ರಂದೇ ಆತನ ರಾಜೀನಾಮೆಯನ್ನು ಎಚ್ಆರ್ ಮತ್ತು ಅಡ್ಮಿನ್ ಮುಖ್ಯಸ್ಥರು ತಮ್ಮ ಸಹಿ ಮತ್ತು ಅಧಿಕೃತ ಮುದ್ರೆಯೊಂದಿಗೆ ಅಂಗೀಕರಿಸಿದ್ದಾರೆ. 30.09.2021 ರಂದು ತೀರ್ಥಪ್ರಸಾದನನ್ನು ಬಿಟಿವಿ ನಿಯಮಗಳ ಪ್ರಕಾರ ಆತನನ್ನು ಕೆಲಸದಿಂದ ರಿಲೀವ್ ಮಾಡಲಾಗಿದೆ. ತೀರ್ಥಪ್ರಸಾದನು ರಾಜೀನಾಮೆ ನೀಡಿದ ಬಳಿಕ ಆತನ ಎಲ್ಲಾ ಸಂಬಳದ ಹಣವನ್ನು ಆತನ ಅಧಿಕೃತ ಸ್ಯಾಲರಿ ಅಕೌಂಟ್ ಮೂಲಕವೇ ಚುಕ್ತಾ ಮಾಡಲಾಗಿದೆ. ಭವಿಷ್ಯನಿಧಿ ಕಚೇರಿಯಲ್ಲೂ ಆತನ ರಾಜೀನಾಮೆಯ ದಿನಾಂಕ ನಮೂದಿಸಲಾಗಿದೆ. ತೀರ್ಥಪ್ರಸಾದನು 2021 ಸೆಪ್ಟೆಂಬರ್ ನಲ್ಲಿ ಬಿಟಿವಿ ಸಂಸ್ಥೆಗೆ ರಾಜೀನಾಮೆ ನೀಡಿದ್ದು ದಾಖಲೆಗಳ ಪ್ರಕಾರ ನಿಖರವಾಗಿದೆ. ಈ ಬಗ್ಗೆ ಬಿಟಿವಿಯ ಸಂಪಾದಕರು ಹೆಣ್ಣೂರು ಠಾಣಾ ವ್ಯಾಪ್ತಿಗೆ ಒಳಪಡುವ ಎಲ್ಲಾ ಪೊಲೀಸ್ ಉನ್ನಾಧಿಕಾರಿಗಳಿಗೆ ಮಾಹಿತಿ ನೀಡಿ ತೀರ್ಥಪ್ರಸಾದ್ನನ್ನು ಬಂಧಿಸುವಂತೆ ಆಗ್ರಹಿಸಿತ್ತು. ಬಿಟಿವಿಯ ಆಗ್ರಹದಂತೆ ಪೊಲೀಸರು ತೀರ್ಥಪ್ರಸಾದನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ವಾಹಿನಿ ಸ್ಪಷ್ಟನೆ ನೀಡಿದೆ.
ಘಟನೆ ವಿವರ: ಮರುಳು ಮಾಫಿಯಾದ ಸಂಬಂಧ ಪಟ್ಟಂತೆ ಸುದ್ದಿ ಪ್ರಸಾರ ತಡೆಗೆ 25 ಲಕ್ಷ ಹಣಕ್ಕೆ ಬೇಡಿಕೆಯಿಟ್ಟು 8 ಲಕ್ಷ ರೂ. ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಖಾಸಗಿ ವಾಹಿನಿಯ ಪತ್ರಕರ್ತನನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Read more
[wpas_products keywords=”deal of the day”]