Karnataka news paper

ಡಿ.17ಕ್ಕೆ ಒಟಿಟಿಯಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರ ವಿ.ನಟನೆಯ ‘ಕನ್ನಡಿಗ’


ಕ್ರೇಜಿಸ್ಟಾರ್‌ ರವಿಚಂದ್ರ ವಿ. ನಟನೆಯ ‘ಕನ್ನಡಿಗ’ ಚಿತ್ರವು ಡಿ.17ರಂದು ‘ಜೀ ಸಿನಿಮಾ ಕನ್ನಡ’ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಪೀರಿಯಡ್ ಡ್ರಾಮ ಕಥಾಹಂದರ ಹೊಂದಿರುವ ಈ ಚಿತ್ರವನ್ನು ‘ಜಟ್ಟ’, ‘ಮೈತ್ರಿ’, ‘ಅಮರಾವತಿ’ ಚಿತ್ರಗಳ ಖ್ಯಾತಿಯ ಬಿ.ಎಂ.ಗಿರಿರಾಜ್ ರಚಿಸಿ, ನಿರ್ದೇಶಿಸಿದ್ದಾರೆ. ಓಂಕಾರ್ ಮೂವೀಸ್ ಲಾಂಛನದಲ್ಲಿ ಎನ್.ಎಸ್.ರಾಜಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಟೀಸರ್‌ ಕಳೆದ ಮೇ 30ರಂದು ಬಿಡುಗಡೆಯಾಗಿತ್ತು. ಇದರಲ್ಲಿ ಲಿಪಿಕಾರನ ಪಾತ್ರಕ್ಕೆ ಬಣ್ಣಹಚ್ಚಿರುವ ರವಿಚಂದ್ರ ಅವರು, ಗಿರಿಜಾ ಮೀಸೆ ಹಾಗೂ ಮುಂಡಾಸು ಧರಿಸಿ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಭಾಷೆ, ಲಿಪಿಯ ಬಗ್ಗೆ ಹಾಗೂ ಇದನ್ನು ಹೇಗೆ ಉಳಿಸಿಕೊಂಡು ಬಂದಿದ್ದೇವೆ, ಬೆಳೆಸುವುದು ಹೇಗೆ ಎನ್ನುವ ವಿಷಯವನ್ನು ಆಧಾರವಾಗಿಟ್ಟುಕೊಂಡು ಗಿರಿರಾಜ್‌ ಅವರು ಕಥೆ ಹೆಣೆದಿದ್ದು, ಸಂಕಮ್ಮಬ್ಬೆ ಪಾತ್ರದಲ್ಲಿ ಪಾವನಾ ಗೌಡ ನಟಿಸಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತವಿದ್ದು, ಜಿ.ಎಸ್.ವಿ.ಸೀತಾರಾಂ ಅವರ ಛಾಯಾಗ್ರಹಣವಿದೆ. ಅರ್ಜುನ್ ಕಿಟ್ಟು ಸಂಕಲನ, ಹೊಸ್ಮನೆ ಮೂರ್ತಿ ಕಲಾ‌ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ ‌ಸಾಹಸ ನಿರ್ದೇಶನ‌ ಈ ಚಿತ್ರಕ್ಕಿದೆ‌.

ಜೀವಿಕ, ಜಮ್ಮಿ ಅಲ್ಟರ್, ಬಾಲಾಜಿ ‌ಮನೋಹರ್,‌ ರಾಕ್‌ಲೈನ್ ವೆಂಕಟೇಶ್, ಶೃಂಗ, ಮೈತ್ರಿ ಜಗ್ಗ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ.



Read More…Source link