The New Indian Express
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಇನ್ನಷ್ಟು ಹದಗೆಟ್ಟರೆ ಶಿಕ್ಷಣ ಇಲಾಖೆಯು ಈ ಶೈಕ್ಷಣಿಕ ವರ್ಷಕ್ಕೆ ಪರ್ಯಾಯ ಶಿಕ್ಷಣ ರೂಪುರೇಷೆ ಸಿದ್ಧಪಡಿಸುವುದರೊಂದಿಗೆ ವಿದ್ಯಾಗಮ ಕಾರ್ಯಕ್ರಮ ಪುನರಾರಂಭ ಮಾಡಲು ಸಿದ್ಧತೆ ನಡೆಸಿದೆ.
ಮತ್ತೆ ವಿದ್ಯಾಗಮ ಆರಂಭಿಸಲು ಮುಂದಾಗಿರುವ ಶಿಕ್ಷಣ ಇಲಾಖೆಯು ಈ ಸಂಬಂಧ ಕರಡು ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿಶಾಲ್ ಆರ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಇದನ್ನು ಓದಿ: ಮಕ್ಕಳಿಗೆ ಪಾಠ ಮಾಡಲು ‘ವಠಾರ ಶಾಲೆ’ ಉತ್ತಮ ಆಯ್ಕೆ: ಶಿಕ್ಷಕರು, ತಜ್ಞರ ಅಭಿಮತ
ಸಾರ್ವಜನಿಕ ಶಿಕ್ಷಣ ಇಲಾಖೆಯು ಬೆಂಗಳೂರಿನ ಎಲ್ಲಾ ಶಾಲೆಗಳನ್ನು ಪೂರ್ವ ಪ್ರಾಥಮಿಕದಿಂದ 9 ನೇ ತರಗತಿಯವರೆಗಿನ ತರಗತಿಗಳನ್ನು ನಿಲ್ಲಿಸುವಂತೆ ಸೂಚಿಸಿದೆ. ಇದರ ನಂತರ, ಆನ್‌ಲೈನ್ ಅಥವಾ ವರ್ಚುವಲ್ ಮೋಡ್ ಹೊರತಾಗಿ ಪರ್ಯಾಯ ವಿಧಾನಗಳ ಬೋಧನೆಗೆ ಬೇಡಿಕೆ ಬಂದಿದ್ದು, ವಿದ್ಯಾಗಮ ಆರಂಭಿಸುವ ಚಿಂತನೆ ನಡೆಸಿದೆ.
ಮಕ್ಕಳು ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಅನಿಷ್ಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳಲು ಮತ್ತು ಮುಂದೆ ಮಕ್ಕಳು ಶಾಲೆ ಬಿಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶಾಲ್ ಅವರು ತಿಳಿಸಿದ್ದಾರೆ.
ಎಲ್ಲಾ ಜಿಲ್ಲೆಗಳಲ್ಲಿಯೂ ಕೊರೋನಾ ಸೋಂಕು ಹೆಚ್ಚಾಗಿ ರಜೆ ಘೋಷಿಸಿದರೆ ಶಿಕ್ಷಣ ಇಲಾಖೆ ಮತ್ತೆ ವಿದ್ಯಾಗಮ ಯೋಜನೆಯನ್ನು ಅನುಷ್ಟಾನಗೊಳಿಸಲಿದೆ. ಈ ಸಂಬಂಧ ಶಿಕ್ಷಣ ಇಲಾಖೆ ಕ್ರಮಕೈಗೊಂಡಿದ್ದು, ಎಲ್ಲಾ ಬಿಇಒ ಮತ್ತು ಉಪನಿರ್ದೇಶಕರಿಗೆ ಸುತ್ತೋಲೆ ಹೊರಡಿಸಲಾಗಿದೆ.
Read more
[wpas_products keywords=”deal of the day”]