ಡಿಕೆಶಿ ಟೆಂಪಲ್ ರನ್, ಮಸೀದಿಗೆ ಭೇಟಿ; ಪಾದಯಾತ್ರೆ ಮಾಡಿಯೇ ತೀರುತ್ತೇವೆ….
ಕನಕಪುರದಲ್ಲಿ ಡಿಕೆಶಿವಕುಮಾರ್ ನಿವಾಸದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದ ಬಳಿಕ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
2013 ರಲ್ಲಿ ಎಂ.ಬಿ.ಪಾಟೀಲ್ ನೀರಾವರಿ ಸಚಿವರಾಗಿದ್ದರು. ನಾರಿಗೌಡರ ಸಲಹೆ ಪಡೆಯಲಾಗಿತ್ತು. ಗ್ಲೋಬಲ್ ಇಂಟರೆಸ್ಟ್, ಇವೆಲ್ಲ ನಡೆಯಲು ಕೆಲ ಸಮಯ ಹಿಡಿಯುತ್ತದೆ. ಇದನ್ನೆಲ್ಲ ಪ್ರಾರಂಭ ಮಾಡಿದ್ದೇ ನಾವು. 2017ರಲ್ಲಿ ಡಿಪಿಆರ್ ಮಾಡಲಾಗಿತ್ತು. ಕೆಲ ವಿರೋಧಗಳಿಗೂ ಉತ್ತರಿಸಲಾಗಿತ್ತು. ಬಿಜೆಪಿ ಏನು ಮಾಡಿದೆ? ಎಂದು ಪ್ರಶ್ನಿಸಿದರು.
ಬಿಜೆಪಿ ಕೆಲಸ ಮಾಡುವುದನ್ನು ಬಿಟ್ಟು, ಜಾಹಿರಾತುಗಳ ಮೂಲಕ ತಪ್ಪು ಮಾಹಿತಿ ನೀಡುತ್ತಿದೆ. 16,02,2018 ರಲ್ಲಿ ಸುಪ್ರಿಂ ಕೋರ್ಟ್ ಸಹ 192 ಟಿಎಂಸಿ ನೀರನ್ನು ತಮಿಳು ನಾಡು ಬಿಡಬೇಕೆಂದು ಕೇಳಿತ್ತು. ವಿರೋಧದ ಬಳಿಕ 177.75 ನೀರಿಗೆ ಬೇಡಿಕೆ ಇಟ್ಟಿತ್ತು ಎಂದು ತಿಳಿಸಿದರು.
ಇದು ಕುಡಿಯುವ ನೀರಿನ ಯೋಜನೆ. ಇದಕ್ಕೆ ಆದ್ಯತೆ ನೀಡುವಂತೆ ಸುಪ್ರಿಂ ಕೋರ್ಟ್ ಹೇಳಿದೆ. ಇದು ನೀರಾವರಿ ಯೋಜನೆ ಅಲ್ಲ.ನಮ್ಮ ನೀರನ್ನು ನಾವು ಶೇಖರಿಸಿ, ವಿದ್ಯುತ್ ಸಿದ್ದಪಡಿಸಿದ ಬಳಿಕ ತಮಿಳುನಾಡಿಗೆ ನೀರು ಬಿಡುತ್ತೇವೆ. ಬೆಂಗಳೂರಿಗರಿಗೆ ಶೆ.30 ರಷ್ಟು ಜನರಿಗೆ ಕಾವೇರಿ ನೀರು ಸಿಗುತ್ತಿಲ್ಲ. ಅವರಿಗೆ ನೀರು ನೀಡಲೇಬೇಕು. ಈ ಯೋಜನೆಯಿಂದ ಬೆಂಗಳೂರಿಗರಿಗೆ ಮುಂದಿನ 50 ವರ್ಷ ಕಾಲ ನೀರಿನ ಬವಣೆ ಬರುವುದಿಲ್ಲ. ಎರಡೂವರೆ ಕೋಟಿ ಜನರಿಗೆ ಅನುಕೂಲವಾಗಲಿದೆ. ನಾವು ಇಲ್ಲಿ ರಾಜಕೀಯ ಮಾಡುತ್ತಿಲ್ಲ. ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.
ರಾಮನಗರ ಜಿಲ್ಲೆಯಲ್ಲಿ ವಿಶೇಷವಾಗಿ ನಿರ್ಬಂಧ ಏರಲಾಗಿದೆ. ಬಿಜೆಪಿ ತಪ್ಪನ್ನು ಮುಚ್ಚಿಕೊಳ್ಳಲು, ಬಣ್ಣ ಕಳೆದುಕೊಳ್ಳದಿರಲು ಹುನ್ನಾರ ನಡೆಸಿದೆ. ನಮಗೆ ಕಾನೂನಿನ ಬಗ್ಗೆ ಗೌರವ ಇದೆ. ಹೀಗಾಗಿ ಕೋವಿಡ್ ನಿಯಮ ಪಾಲನೆ ಮೂಲಕವೇ ಬಿಜೆಪಿಯ ಹುನ್ನಾರ ಬಯಲಿಗೆಳೆಯಲಿದ್ದೇವೆ. ಬಿಜೆಪಿಯ ಅನ್ಯಾಯವನ್ನು ಜನರಿಗೆ ತಿಳಿಸುವುದು ವಿರೋಧ ಪಕ್ಷದ ಕರ್ತವ್ಯ ಎಂದರು.
ಮೇಕೆದಾಟು ಪಾದಯಾತ್ರೆ ಹೋರಾಟ ಹತ್ತಿಕ್ಕಲು ಬಿಜೆಪಿ ಕುತಂತ್ರ ಮಾಡುತ್ತಿದೆ ಎಂದ ಡಿಕೆಶಿ
ಹೋರಾಟ ಹತ್ತಿಕಲು ಬಿಜೆಪಿ ಮಾಡಿರುವ ಷಡ್ಯಂತ್ರ್ಯಕ್ಕೆ ನಾವು ತಕ್ಕ ಉತ್ತರ ನೀಡುತ್ತೇವೆ. ನಮಗಿರುವ ಮಾಹಿತಿ ಪ್ರಕಾರ, ಕೋವಿಡ್ ನಿಯಮ ಪಾಲನೆ ಮಾಡುತ್ತಿರುವ ಬಗ್ಗೆ ಪರಿಶೀಲಿಸಿ, ಕೇಸ್ ಹಾಕಬಹುದು ಅಷ್ಟೇ. ನಿಯಮ ಪಾಲಿಸಿದರೆ ಕೇಸ್ ಏಕೆ ಹಾಕುತ್ತಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
Read more
[wpas_products keywords=”deal of the day sale today offer all”]