ಕಲಬುರಗಿಯಲ್ಲಿ ತರಕಾರಿ ವ್ಯಾಪಾರದ ಮೇಲೆ ವೀಕೆಂಡ್ ಕರ್ಫ್ಯೂ ಕರಿನೆರಳು! ವ್ಯಾಪಾರಿಗಳು, ರೈತರು ಕಂಗಾಲು
ನಾನು ಪ್ರವಾಸೋದ್ಯಮ ಸಚಿವನಾದಾಗ ಸನ್ನತಿ ಅಭಿವೃದ್ಧಿಗೆ ನೀಡಿರುವ ಹಣ ನನ್ನ ಬದ್ಧತೆಗೆ ಸಾಕ್ಷಿ. ನಾಲವಾರ – ಸನ್ನತಿ ರಸ್ತೆ ನಿರ್ಮಾಣಕ್ಕೆ 4.85 ಕೋಟಿ, ಸನ್ನತಿ – ಬನ್ನಟ್ಟಿ ಕ್ರಾಸ್ ರಸ್ತೆ ನಿರ್ಮಾಣಕ್ಕೆ 5.5 ಕೋಟಿ ಹಾಗೂ ರಾಜ್ಯ ಹೆದ್ದಾರಿ 149ರಿಂದ – ಬುದ್ಧ ಸ್ತೂಪವರೆಗಿನ ರಸ್ತೆ ನಿರ್ಮಾಣಕ್ಕೆ 2 ಕೋಟಿ ಹಣ ಬಿಡುಗಡೆ ಮಾಡಿ ಈ ಐತಿಹಾಸಿಕ ಪ್ರದೇಶಕ್ಕೆ ದಾರಿ ಮಾಡಿಕೊಡುವ ಕೆಲಸವನ್ನು ಯಶಸ್ವಿಯಾಗಿ ನಾವು ನಿರ್ವಹಿಸಿದ್ದೆವು. ಆದರೆ, 2018-19 ಸಾಲಿನ ನಂತರ ಅಲ್ಲಿನ ಪ್ರವಾಸೋದ್ಯಮಕ್ಕೆ ಸರಕಾರ ಈವರಿಗೂ ಒಂದೂ ರೂ. ಸಹ ಬಿಡುಗಡೆ ಮಾಡಿಲ್ಲಎಂದು ತಿವಿದಿದ್ದಾರೆ.
ಸನ್ನತಿ ಕ್ಷೇತ್ರದ ಅಭಿವೃದ್ದಿಗಾಗಿ, ಐತಿಹಾಸಿಕ ಹಿನ್ನೆಲೆಯುಳ್ಳ ಈ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸುವ ನಿಟ್ಚಿನಲ್ಲಿ2015ರಲ್ಲಿ ಕಾಂಗ್ರೆಸ್ ಸರಕಾರ ಲ್ಯಾಂಡ್ ಸ್ಕೇಪಿಂಗ್, ಇಂಟರ್‌ಪ್ರ್ರಿಟೇಷನ್ ಸೆಂಟರ್, ಸೈನೇಜಸ್ ಕಾಮಗಾರಿಗಳಿಗೆ 2 ಕೋಟಿ ರೂ. ಮಂಜೂರು ಮಾಡಿತ್ತು. 1.5 ಕೋಟಿ ರೂ.ಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಬಿಡುಗಡೆ ಮಾಡಲಾಗಿತ್ತು. ಆದರೆ, ಹಣ ಬಿಡುಗಡೆಯಾಗಿ 6 ವರ್ಷ ಕಳೆದರೂ ಕಾಮಗಾರಿ ಕೈಗೆತ್ತಿಕೊಳ್ಳದಿರುವುದು ಕೇಂದ್ರ ಬಿಜೆಪಿ ಸರಕಾರದ ಬೇಜವಾಬ್ದಾರಿ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಆರೋಪಿಸಿದ್ದಾರೆ.
ಲಾಕ್‌ಡೌನ್ ಮಾಡಿದ್ರೆ ಊಟಕ್ಕೇನು ಮಾಡಲಿ: ವೀಕೆಂಡ್ ಕರ್ಫ್ಯೂಗೆ ಹಮಾಲಿಗಳ ವಿರೋಧ
ಕಾಳಗಿಯಲ್ಲಿನ ಬೌದ್ಧ ಸ್ತೂಪಗಳ ಹಾಗೂ ಸಾಮ್ರಾಟ್ ಅಶೋಕನ ಶಿಲಾಶಾನಗಳ ಸಂರಕ್ಷಣೆಯ ಕಾರ್ಯವನ್ನೂ ತಾನು ಪ್ರವಾಸೋಧ್ಯಮ ಸಚಿವನಿದ್ದಾಗ ಕೈಗೆತ್ತಿಕೊಂಡಿದ್ದೆ. ಅದಕ್ಕೂ 50 ಲಕ್ಷ ಹಣ ಬಿಡುಗಡೆಯನ್ನೂ ಮಾಡಿಸಿದ್ದೆ. ಇದು ಸಂಸದರಿಗೆ ಮರೆತು ಹೋಗಿರಬಹುದು. ಹೈಕ ಪ್ರವಾಸೋದ್ಯಮ ಸಮಿತಿ ರಚಿಸಿ ಅನೇಕ ಸಭೆ ಮಾಡಿದ್ದರೂ ಸಂಸದರು ಸದಸ್ಯರಾಗಿದ್ದರೂ, ಒಂದೂ ಸಭೆಗೆ ಹಾಜರಾಗಿರಲಿಲ್ಲ. ಈಗ ಅಭಿವೃದ್ಧಿಯ ಮಾತನಾಡುತ್ತಿದ್ದಾರೆ. ಕುಚೋದ್ಯ ಕೈ ಬಿಟ್ಟು ಸಂಸದರು ಪುರಾತತ್ವ ಇಲಾಖೆಗೆ ಕಾಂಗ್ರೆಸ್ ಸರಕಾರ ನೀಡಿದ್ದ ಒಂದೂವರೆ ಕೋಟಿ ಹಣವನ್ನ ಸನ್ನತಿಯ ಅಭಿವೃದ್ಧಿಗೆ ಬಳಸುವಂತೆ ಮಾಡುವ ಕೆಲಸ ಮಾಡುವಂತಾಗಲಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
Read more
[wpas_products keywords=”deal of the day sale today offer all”]