ಪ್ರತಿ ಗೊಂಚಲಲ್ಲಿ ಕನಿಷ್ಠವೆಂದರೂ ನಾಲ್ಕುನೂರು ಕಾಯಿಗಳಾಗಿವೆ. ಈ ತೆಂಗಿಗೆ ಯಾವುದೇ ಗೊಬ್ಬರವಾಗಲಿ, ರಾಸಾಯನಿಕವನ್ನಾಗಲಿ ಬಳಸುವುದಿಲ್ಲ. ಆದರೂ ಇಷ್ಟೆಲ್ಲ ಕಾಯಿಗಳಾಗುತ್ತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಚಿಕ್ಕ ಚಿಕ್ಕ ಕಾಯಿಗಳಾಗಿದ್ದರೂ ಉತ್ತಮ ರುಚಿಯ ನೀರು ಈ ತೆಂಗಿನಲ್ಲಿದೆ. ಹೀಗಾಗಿ ಜನವರಿಯ ಸಮಯದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಇರುಮುಡಿ ಕಟ್ಟಲೆಂದು ಈ ಕಾಯಿಗಳನ್ನು ನೀಡಲಾಗುತ್ತದೆ. ಅದನ್ನ ಬಿಟ್ಟು ಅಧ್ಯಯನಕ್ಕೆ ಬರುವವರಿಗೆ ಕಾಯಿಗಳನ್ನು ನೀಡಲಾಗುತ್ತದೆ ಹೊರತು ದುಡ್ಡಿಗಾಗಿ ಕಾಯಿ ಮಾರಾಟ ಮಾಡುವುದಿಲ್ಲ ಎನ್ನುತ್ತಾರೆ ಅನಿಲ ನಾಯ್ಕ.
ಇನ್ನು ಈ ತಳಿ ಅಪರೂಪದ್ದಾಗಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಹೀಗಾಗಿ ಈ ತಳಿಯನ್ನು ಅಧ್ಯಯನ ಮಾಡಲು ಸ್ಥಳೀಯ ನೆಲದನಿ ಸಸ್ಯ ಸಂಶೋಧನಾ ಸಂಸ್ಥೆ ಮುಂದಾಗಿದೆ. ಗಜನಿ ಪ್ರದೇಶದಲ್ಲಿ ಬೆಳೆದ ಈ ತೆಂಗಿಗೆ ಎ.ಆರ್.ಗಜ್ನಿ ಎಂದು ನಾಮಕರಣ ಮಾಡಲಾಗಿದೆ. ಅಲ್ಲದೇ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯವರು ಈ ಬಗ್ಗೆ ಹೆಚ್ಚಿನ ಸಂಶೋಧನೆ ಕೈಗೊಂಡರೆ ರೈತರಿಗೆ ಹೆಚ್ಚು ಆದಾಯ ತರುವ ಬೆಳೆಯಾಗಬಲ್ಲದು ಎನ್ನುತ್ತಾರೆ. ನೆಲದನಿ ಸಸ್ಯ ಸಂಶೋಧನಾ ಸಂಸ್ಥೆಯ ಕೆ.ರಮೇಶ್. ಒಟ್ಟಾರೆಯಾಗಿ ಐದು ಸಾವಿರಕ್ಕೂ ಹೆಚ್ಚು ಕಾಯಿ ಬಿಟ್ಟು ಅಚ್ಚರಿ ಮೂಡಿಸಿರುವ ಈ ತೆಂಗಿನ ಬಗ್ಗೆ ಹೆಚ್ಚಿನ ಸಂಶೋಧನೆ ನಡೆದರೆ ರೈತರಿಗೆ ಇದು ವರದಾನವಾಗಬಲ್ಲದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಅಂಕೋಲಾ: ನೂರಲ್ಲ ಇನ್ನೂರಲ್ಲ, ಬರೋಬ್ಬರಿ 5000 ತೆಂಗಿನಕಾಯಿ ಬಿಟ್ಟು ಅಚ್ಚರಿಗೆ ಕಾರಣವಾದ ಕಲ್ಪವೃಕ್ಷ!
ಕಾರವಾರ: ಒಂದು ತೆಂಗಿನ ಮರದಲ್ಲಿ 50- 100 ತೆಂಗಿನಕಾಯಿಗಳಾಗುವುದು ಸರ್ವೇ ಸಾಮಾನ್ಯ. ಆದರೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಓರ್ವರ ಮನೆಯಲ್ಲಿನ ತೆಂಗಿನ ಮರ ಐದು ಸಾವಿರಕ್ಕೂ ಹೆಚ್ಚು ತೆಂಗಿನಕಾಯಿಗಳನ್ನು ಹೊಂದಿ ಅಚ್ಚರಿಗೆ ಕಾರಣವಾಗಿದೆ.