ಕನಕಪುರದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದ ಬಳಿಕ ಕೆಪಿಸಿಸಿ ಅಧ್ಯಕ್ಷರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕೋವಿಡ್ ನಿಯಮ ಕೂಡ ಬೋಗಸ್. ನಮ್ಮ ಜಿಲ್ಲೆಯಲ್ಲಿ ಒಂದು ಸಾವು ಇಲ್ಲ. ಯಾವ ಜಿಲ್ಲೆಯಲ್ಲಿಯೂ ಐಸಿಯು ರೋಗಿಗಳಿಲ್ಲ. ಸರಕಾರ ನೀಡುತ್ತಿರುವ ನಂಬರ್ ಕೂಡ ಬೋಗಸ್. ಅಧಿಕಾರಿಗಳಿಗೆ ಒತ್ತಡ ಹಾಕಿ, ನಂಬರ್ ಏರಿಕೆ ಮಾಡಿ, ನಮ್ಮ ಹೋರಾಟ ಹತ್ತಿಕುವ ಪ್ರಯತ್ನ ನಡೆಸಲಾಗುತ್ತಿದೆ. ಇದರ ರಿಯಾಲಿಟಿ ಚೆಕ್ ಸಹ ನಡೆಸಿದ್ದೇವೆ ಎಂದು ತಿಳಿಸಿದರು.
ಏನೇ ಮಾಡಿದರೂ ಪಾದಯಾತ್ರೆ ನಿಲ್ಲಿಸಲು ಸಾಧ್ಯವಿಲ್ಲ. ಹೀಗಾಗಿ, ನಮ್ಮ ಮೇಲೆ ಕೆಟ್ಟು ಹೆಸರು ತರಲು, ಪಿತ್ತೂರಿ ನಡೆಯುತ್ತಿದೆ. ಸರಕಾರ ಸುಳ್ಳು ಜಾಹೀರಾತು ನೀಡುತ್ತಿದೆ. ಇದಕ್ಕೆ ನಾವು ಉತ್ತರ ನೀಡುತ್ತೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಒಂದು ಲಾಕ್ ಡೌನ್, ಕರ್ಫ್ಯೂ ಘೋಷಣೆ ಮಾಡಲು ಇರುವ ನಿಯಮಗಳನ್ನು ಸರಕಾರ ಉಲ್ಲಂಘಿಸಿದೆ. ಅಂತರ ಕಾಪಾಡುವುದು, ಸ್ಯಾನಿಟೈಸರ್, ಒಂದು ಲಕ್ಷಕ್ಕೂ ಹೆಚ್ಚಿನ ಮಾಸ್ಕ್, ಪ್ರತಿಯೊಬ್ಬರಿಗೂ ಶುದ್ದ ನೀರು. ನೂರು ಮಂದಿ ವೈದ್ಯರು, ಒಂದೂವರೆ ಸಾವಿರ ಕಾರ್ಯಕರ್ತರು ಎಲ್ಲ ಸೇವೆ ಸಲ್ಲಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರು ತಿಳಿಸಿದರು.
ಮೇಕೆದಾಟು ಪಾದಯಾತ್ರೆ ಹಿನ್ನೆಲೆ ಕನಕಪುರದಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್
ನಾನು ಸಿದ್ದರಾಮಯ್ಯ ಸೇರಿ, ಮೈಸೂರಿನಲ್ಲಿ ಘೋಷಣೆ ಮಾಡಿದಕ್ಕೆ ಈಗಲು ಬದ್ದರಾಗಿದ್ದೇವೆ. ಭಾನುವಾರ ಬೆಳಗ್ಗೆ 8.30 ರ ಅಸುಪಾಸಿಗೆ ಹೋರಾಟ ಶುರುವಾಗಲಿದೆ. ರಾಜ್ಯದ ಹಿತ, ಬೆಂಗಳೂರಿಗೆ ಕುಡಿಯುವ ನೀರಿಗಾಗಿ ಈ ಹೋರಾಟ ಶುರುವಾಗಲಿದೆ. ಶಾಂತ ರೀತಿಯಿಂದ ಕಾರ್ಯಕ್ರಮ ಯಶಸ್ಸುಗೊಳ್ಳಲು ಮನವಿ ಮಾಡಿಕೊಳ್ಲುತ್ತಿದ್ದೇವೆ. ಬೆಳಗ್ಗೆ 7.30 ಕ್ಕೆ ಬನ್ನಿ. ಏಗ್ಗನೂರು ಬಳಿ ನಿಮ್ಮನ್ನು ತಡೆದು ನಿಲ್ಲಿಸುವ ಪ್ರಯತ್ನ ನಡೆಯುತ್ತದೆ ಎಂದು ಡಿಕೆ ಶಿವಕುಮಾರ್ ವಿವರಿಸಿದರು.
Read more
[wpas_products keywords=”deal of the day sale today offer all”]