Karnataka news paper

ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಜಿಯೋಟಿವಿ ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡುವುದು ಹೇಗೆ?


ಜಿಯೋ

ಹೌದು, ಜಿಯೋ ಪರಿಚಯಿಸಿರುವ ಜನಪ್ರಿಯ ಸೇವೆಗಳಲ್ಲಿ ಜಿಯೋಟಿವಿ ಅಪ್ಲಿಕೇಶನ್‌ ಕೂಡ ಒಂದಾಗಿದೆ. ಆದರೆ ಜಿಯೋಟಿವಿ ಅಪ್ಲಿಕೇಶನ್‌ ಅನ್ನು ಸೇವೆಯನ್ನು ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿ ಮಾತ್ರ ಪ್ರವೇಶಿಸಬಹುದು. ಲ್ಯಾಪ್‌ಟಾಪ್‌ಗಳಲ್ಲಿ ಬಳಸಲು ಸಾಧ್ಯವಿಲ್ಲ. ಆದರೂ ನೀವು ಲ್ಯಾಪ್‌ಟಾಪ್ ಅಥವಾ ಟಿವಿಯಲ್ಲಿ ಜಿಯೋಟಿವಿ ಅಪ್ಲಿಕೇಶನ್‌ ಬಳಸಲು ಬಯಸಿದರೆ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ಜಿಯೋಟಿವಿ ಅಪ್ಲಿಕೇಶನ್‌ ಅನ್ನು ಟಿವಿ ಮೂಲಕ ಪ್ರವೇಶಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಲ್ಯಾಪ್‌ಟಾಪ್ ನಲ್ಲಿ JioTV ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡುವುದು ಹೇಗೆ?

ಲ್ಯಾಪ್‌ಟಾಪ್ ನಲ್ಲಿ JioTV ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡುವುದು ಹೇಗೆ?

ಹಂತ:1 ಲ್ಯಾಪ್‌ಟಾಪ್‌ನಲ್ಲಿ ಜಿಯೋಟಿವಿ ಅಪ್ಲಿಕೇಶನ್‌ ಬಳಸಬೇಕಾದರೆ ಬ್ಲೂಸ್ಟ್ಯಾಕ್ಸ್ ಆಂಡ್ರಾಯ್ಡ್ ಎಮ್ಯುಲೇಟರ್ ಇನ್‌ಸ್ಟಾಲ್‌ ಮಾಡಬೇಕು
ಹಂತ:2 ಬ್ಲೂಸ್ಟ್ಯಾಕ್ಸ್‌ ಆಂಡ್ರಾಯ್ಡ್‌ ಎಮ್ಯುಲೇಟರ್‌ ಇನ್‌ಸ್ಟಾಲ್‌ ಮಾಡಿದ ನಂತರ, ಗೂಗಲ್‌ಪ್ಲೇ ಸ್ಟೋರ್‌ ತೆರೆಯಿರಿ. ನಿಮ್ಮ ಗೂಗಲ್‌ ಅಕೌಂಟ್‌ ಮೂಲಕ ಲಾಗ್‌ ಇನ್‌ ಆಗಿರಿ.
ಹಂತ:3 ನಂತರ, ಜಿಯೋಟಿವಿ ಅಪ್ಲಿಕೇಶನ್‌ಗಾಗಿ ಸರ್ಚ್‌ ಮಾಡಿ ಮತ್ತು ಇನ್‌ಸ್ಟಾಲ್‌ ಮಾಡಿರಿ. ಒಮ್ಮೆ ನೀವು ಅದನ್ನು ಡೌನ್‌ಲೋಡ್ ಮಾಡಿದರೆ, ಬ್ಲೂಸ್ಟ್ಯಾಕ್ಸ್‌ನ ಹೋಮ್ ಸ್ಕ್ರೀನ್‌ನಲ್ಲಿ ಅಪ್ಲಿಕೇಶನ್ ಗೋಚರಿಸುತ್ತದೆ.

ಇನ್ನು ಜಿಯೋ ಅಪ್ಲಿಕೇಶನ್ ಅನ್ನು ಬಳಸಬೇಕಾದರೆ ನಿಮ್ಮ ಬಳಿ ಜಿಯೋ ನಂಬರ್‌ ಇರುವುದು ಅಗತ್ಯ ಎಂಬುದನ್ನು ಗಮನಿಸಬೇಕು. ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡಿದ ನಂತರ OTP ಮೂಲಕ ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. ನೀವು ಜಿಯೋ ಸಿಮ್ ಹೊಂದಿಲ್ಲದಿದ್ದರೆ, ನೀವು ನಿಮ್ಮ ಸ್ನೇಹಿತರ ಸಂಖ್ಯೆಯನ್ನು ನಮೂದಿಸಿ ಮತ್ತು OTP ಯನ್ನು ಎಂಟ್ರಿ ಮಾಡಬಹುದು.

ಟಿವಿಯಲ್ಲಿ ಜಿಯೋಟಿವಿ ಅಪ್ಲಿಕೇಶನ್‌ ಪ್ರವೇಶಿಸುವುದು ಹೇಗೆ?

ಟಿವಿಯಲ್ಲಿ ಜಿಯೋಟಿವಿ ಅಪ್ಲಿಕೇಶನ್‌ ಪ್ರವೇಶಿಸುವುದು ಹೇಗೆ?

ಕೇಭಲ್‌ ಟಿವಿ ಬಳಸದ ಜನರು ಜಿಯೋಟಿವಿ ಅಪ್ಲಿಕೇಶನ್‌ ಬಳಸಲು ಮುಂದಾಗುವ ಸಾಧ್ಯತೆ ಇದೆ. ಲ್ಯಾಪ್‌ಟಾಪ್ ಹೊಂದಿರುವ ಜನರು HDMI ಕೇಬಲ್ ಬಳಸಿ ತಮ್ಮ ಲ್ಯಾಪ್‌ಟಾಪ್ ಅನ್ನು ತಮ್ಮ ಟಿವಿಗೆ ಸರಳವಾಗಿ ಸಂಪರ್ಕಿಸಬಹುದು. ಈ ಮೂಲಕ ಟಿವಿ ಮೂಲಕ ಜಿಯೋಟಿವಿ ವೀಕ್ಷಿಸಲು ಸಾಧ್ಯವಾಗಲಿದೆ. HDMI ಕೇಬಲ್‌ನೊಂದಿಗೆ ಟಿವಿ ಮತ್ತು ಲ್ಯಾಪ್‌ಟಾಪ್ ಅನ್ನು ಸಂಪರ್ಕಿಸಿದ ನಂತರ, ಇನ್‌ಪುಟ್‌ಗಳ ವಿಭಾಗದಲ್ಲಿ HDMI ಗೆ ಬದಲಾಯಿಸಲು ಟಿವಿಯ ರಿಮೋಟ್ ಅನ್ನು ಬಳಸಬಹುದಾಗಿದೆ. ಅಲ್ಲದೆ ನಿಮ್ಮ ಲ್ಯಾಪ್‌ಟಾಪ್ ಬಳಸಿ ಅಪ್ಲಿಕೇಶನ್ ಅನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗುತ್ತದೆ. ಆದರೆ ಇದಕ್ಕಾಗಿ ನೀವು ಲ್ಯಾಪ್‌ಟಾಪ್‌ನಲ್ಲಿ Jio TV ಯ APK ಅನ್ನು ಡೌನ್‌ಲೋಡ್ ಮಾಡುವ ಅಗತ್ಯವಿದೆ.

ರಿಲಯನ್ಸ್ ಜಿಯೋ

ಇನ್ನು ರಿಲಯನ್ಸ್ ಜಿಯೋ ಇತ್ತೀಚೆಗೆ JioTV ಅಪ್ಲಿಕೇಶನ್‌ನ UI ಇಂಟರ್ಫೇಸ್ ಅನ್ನು ಬದಲಾಯಿಸಿದೆ. ಇದರಿಂದ ಜಿಯೋಟಿವಿ ಅಪ್ಲಿಕೇಶನ್‌ನಲ್ಲಿ ಚಲನಚಿತ್ರಗಳು, ಗೇಮ್‌ಗಳು, ಹೋಮ್ (ಕೇಬಲ್ ಟಿವಿ) ಮತ್ತು ಮ್ಯೂಸಿಕ್‌ ಸೇರಿದಂತೆ ವಿವಿಧ ವಿಭಾಗಗಳನ್ನು ನೋಡಬಹುದು. ಇನ್ನು ಲ್ಯಾಪ್‌ಟಾಪ್‌ನಲ್ಲಿ ಬಳಸುವಾದ ಬ್ಲೂಸ್ಟ್ಯಾಕ್ಸ್‌ನಲ್ಲಿ ಚಿತ್ರದ ಗುಣಮಟ್ಟ ಉತ್ತಮವಾಗಿದೆ. ಜನರು JioTV ಅಪ್ಲಿಕೇಶನ್ ಅನ್ನು ನ್ಯಾವಿಗೇಟ್ ಮಾಡುವಲ್ಲಿ ಯಾವುದೇ ಸಮಸ್ಯೆ ಕಂಡುಬರುವುದಿಲ್ಲ ಎಂದು ಹೇಳಲಾಗಿದೆ. ತಮ್ಮ ಲ್ಯಾಪ್‌ಟಾಪ್ ಮೂಲಕ ಟಿವಿಗೆ ಕನೆಕ್ಟ್‌ ಮಾಡಿ JioTV ವೀಕ್ಷಿಸುವಾಗಲು ಕೂಡ ಚಿತ್ರದ ಗುಣಮಟ್ಟದ ಬಗ್ಗೆ ಯೋಚಿಸಬೇಕಾದ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಆದರೆ ಇದಕ್ಕಾಗಿ, ನೀವು JioTV ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ಹೆಚ್ಚಿನ ರೆಸಲ್ಯೂಶನ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ.



Read more…

[wpas_products keywords=”smartphones under 15000 6gb ram”]