Karnataka news paper

ಇಸ್ರೇಲ್ ಮಾಜಿ ಪ್ರಧಾನಿಗೆ ‘ಭಗವದ್ಗೀತೆ’ ನೀಡಿದ ‘ಮಿ.ಐರಾವತ’ ಸಿನಿಮಾ ನಟಿ ಊರ್ವಶಿ ರೌಟೇಲಾರನ್ನು ಮೆಚ್ಚಿದ ಜನತೆ


ಹೈಲೈಟ್ಸ್‌:

  • ಕನ್ನಡ ಚಿತ್ರದಲ್ಲಿಯೂ ಊರ್ವಶಿ ರೌಟೇಲಾ ನಟಿಸಿದ್ದಾರೆ
  • 2021ರ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಊರ್ವಶಿ ರೌಟೇಲಾ ಕೂಡ ನಿರ್ಣಾಯಕಿ
  • ಇಸ್ರೇಲ್ ಮಾಜಿ ಪ್ರಧಾನಿಗೆ ಭಗವದ್ಗೀತೆಯನ್ನು ಊರ್ವಶಿ ಉಡುಗೊರೆಯಾಗಿ ನೀಡಿದ್ದಾರೆ

‘ಮಿಸ್ಟರ್ ಐರಾವತ’ ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ಇಸ್ರೇಲ್‌ನ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿ ಮಾಡಿರುವುದಲ್ಲದೆ, ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆಯನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಭಗವದ್ಗೀತೆ ಉಡುಗೊರೆಯಾಗಿ ನೀಡಿದ ಊರ್ವಶಿ ರೌಟೇಲಾ ( B
hagavad Gita )
ಬೆಂಜಮಿನ್ ನೆತನ್ಯಾಹು ಅವರಿಗೆ ಹಿಂದಿ ಭಾಷೆಯನ್ನು ಕೂಡ ಕಲಿಸಿಕೊಟ್ಟಿದ್ದಾರಂತೆ. ಈ ಫೋಟೋವನ್ನು ಊರ್ವಶಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “ನನ್ನ ಹಾಗೂ ನನ್ನ ಕುಟುಂಬವನ್ನು ಆಹ್ವಾನ ಮಾಡಿದ್ದಕ್ಕೆ ಇಸ್ರೇನ್‌ನ ಮಾಜಿ ಪ್ರಧಾನಿಗೆ ಧನ್ಯವಾದಗಳು. ನನ್ನ ಭಗವದ್ಗೀತೆ: ಏನೂ ನಿರೀಕ್ಷೆ ಇಲ್ಲದೆ ಸರಿಯಾದ ಸ್ಥಳದಲ್ಲಿ, ಸರಿಯಾದ ಸಮಯದಲ್ಲಿ, ಸರಿಯಾದ ವ್ಯಕ್ತಿಗೆ ನೀಡುವುದು ನಿಜವಾದ ಉಡುಗೊರೆ” ಎಂದು ಊರ್ವಶಿ ರೌಟೇಲಾ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಸುದ್ದಿ ವಿಶ್ವದಾದ್ಯಂತ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ.

‘ಐರಾವತ’ ಸಿನಿಮಾ ನಾಯಕಿ ಊರ್ವಶಿ ರೌಟೇಲಾರ ಈ ಸೀರೆ ಲುಕ್‌ಗೆ ಖರ್ಚಾದ ಹಣ ಎಷ್ಟು?

2021ರ ಮಿಸ್ ಯುನಿವರ್ಸ್ ನಿರ್ಣಾಯಕಿ ಊರ್ವಶಿ ರೌಟೇಲಾ ( Urvashi Rautela )
2021ರ ‘ಮಿಸ್ ಯುನಿವರ್ಸ್’ ಸ್ಪರ್ಧೆಗೆ ಊರ್ವಶಿ ರೌಟೇಲಾ ಅವರು ನಿರ್ಣಾಯಕರಾಗಿ ಹೋಗಿದ್ದರು. ಆ ಸಮಯದಲ್ಲಿ Marian Rivera ಅವರು ಊರ್ವಶಿಗೆ ಡ್ಯಾನ್ಸ್ ಮಾಡೋದನ್ನು ವೇದಿಕೆ ಮೇಲೆ ಹೇಳಿಕೊಟ್ಟಿದ್ದಾರೆ. Marian Rivera ಅವರ Ramp Walk ನೆರೆದಿದ್ದ ಜನರು ಮೆಚ್ಚುಗೆ ಸೂಚಿಸುವಂತೆ ಮಾಡಿತು.

ಊರ್ವಶಿ ಸಿನಿಮಾಗಳ ಸಂಖ್ಯೆ ಕಡಿಮೆ

ಅಂಡಮಾನ್ & ನಿಕೋಬಾರ್‌ನಿಂದ Youngest Most Beautiful Woman in the Universe 2018 ಹೆಸರಿಗೆ ಊರ್ವಶಿ ಭಾಜನರಾಗಿದ್ದಾರೆ. 2013ರಿಂದ ಇಲ್ಲಿಯವರೆಗೆ ಊರ್ವಶಿ ನಟಿಸಿದ ಸಿನಿಮಾಗಳ ಸಂಖ್ಯೆ ಕಡಿಮೆ. ಸಿನಿಮಾಗಳಲ್ಲಿ ಊರ್ವಶಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲವಾದರೂ ಕೂಡ, ಮಾಡೆಲಿಂಗ್‌ನಲ್ಲಿ ಹೆಸರು ಮಾಡಿದ್ದಾರೆ. ಕೆಲ ಮ್ಯೂಸಿಕ್ ವಿಡಿಯೋ, ವೆಬ್ ಸಿರೀಸ್ ಮಾಡಿರುವ ಅವರು ಫ್ಯಾಷನ್ ಶೋಗಳಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು.

ಹರ್ನಾಜ್ ಸಂಧು ಭುವನ ಸುಂದರಿ: 21 ವರ್ಷಗಳ ಬಳಿಕ ಭಾರತಕ್ಕೆ ಒಲಿದ ‘ಮಿಸ್ ಯೂನಿವರ್ಸ್’ ಕಿರೀಟ

ಭುವನ ಸುಂದರಿ ಪಟ್ಟ ಪಡೆದ ಹರ್ನಾಜ್ ಸಂಧು ( Harnaaz Sandhu )
21 ವರ್ಷಗಳ ಬಳಿಕ ಭಾರತಕ್ಕೆ ‘ಭುವನ ಸುಂದರಿ ಕಿರೀಟ’ ಸಿಕ್ಕಿದೆ. 2021ನೇ ಸಾಲಿನ ಮಿಸ್ ಯೂನಿವರ್ಸ್ (Miss Universe 2021) ಪಟ್ಟ ಪಂಜಾಬ್ ಮೂಲದ ಹರ್ನಾಜ್ ಸಂಧು ಪಾಲಾಗಿದೆ. ಈ ಸುದ್ದಿ ಇಡೀ ಭಾರತದವರಿಗೆ ಖುಷಿಯನ್ನುಂಟು ಮಾಡಿದ್ದು, ಹರ್ನಾಜ್ ಅವರಿಗೆ ಶುಭಾಶಯಗಳ ಸುರಿಮಳೆ ಹರಿದು ಬರುತ್ತಿದೆ. ಇಸ್ರೇಲ್‌ನ ಈಲಿಯಟ್‌ನಲ್ಲಿ ನಡೆದ 70ನೇ ಭುವನ ಸುಂದರಿ ಸ್ಪರ್ಧೆ ನಡೆದಿತ್ತು. 2020ರ ಮಾಜಿ ಭುವನ ಸುಂದರಿ, ಮೆಕ್ಸಿಕೋದ ಆಂಡ್ರಿಯಾ ಮೆಜಾ ಅವರು ಹಾಲಿ ವಿಜೇತೆ ಹರ್ನಾಜ್ ಅವರಿಗೆ ಕಿರೀಟ ತೊಡಿಸಿದ್ದಾರೆ. ಹರ್ನಾಜ್ ಸಂಧು ಅವರು 2021ರ ಅಕ್ಟೋಬರ್‌ನಲ್ಲಿ ನಡೆದ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿದ್ದರು. ಹರ್ನಾಜ್ ಮಾಡೆಲ್, ನಟಿಯಾಗಿ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಅಂದಹಾಗೆ ಹರ್ನಾಜ್‌ಗೆ ಈಗ 21ರ ಹರೆಯ.



Read more