Karnataka news paper

ಬೆಂಗಳೂರು ಮೆಟ್ರೋ: ಐಟಿ ಹಬ್ ಮೊಬಿಲಿಟಿ ಯೋಜನೆಗಳ ಕುರಿತು ವಿವರ ನೀಡಿ- ಸರ್ಕಾರಕ್ಕೆ ಕೇಂದ್ರ ಪತ್ರ


The New Indian Express

ಬೆಂಗಳೂರು: ನಗರದ ಐಟಿ ಹಬ್‌ಗಳಾದ ಬೆಳ್ಳಂದೂರು ಮತ್ತು ಮಹದೇವಪುರದಲ್ಲಿ ಕೈಗೊಂಡಿರುವ ಸಮಗ್ರ ಚಲನಶೀಲತೆ ಯೋಜನೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಕುರಿತು ವಿವರಣೆ ಕೋರಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ರಾಜ್ಯದ ನಗರಾಭಿವೃದ್ಧಿ ಇಲಾಖೆ ಮತ್ತು ಬಿಎಂಆರ್’ಸಿಎಲ್’ಗೆ ಪತ್ರ ಬರೆದಿದೆ ಎಂದು ತಿಳಿದುಬಂದಿದೆ.

ನಾಗರೀಕರೊಬ್ಬರ ಪತ್ರಕ್ಕೆ ಪ್ರತಿಕ್ರಿಯೆ ನೀಡರುವ ಕೇಂದ್ರ ಸರ್ಕಾರವು “ನಗರ ಸಾರಿಗೆಯು ನಗರಾಭಿವೃದ್ಧಿಯ ಅವಿಭಾಜ್ಯ ಅಂಗವಾಗಿದೆ. ಬೆಂಗಳೂರಿಗೆ ಸಂಬಂಧಿಸಿದ ಕುಂದುಕೊರತೆಗಳಲ್ಲಿ ಅರ್ಜಿದಾರರು ಎತ್ತಿರುವ ಕಳವಳಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಸೂಚನೆ ನೀಡಿದೆ.

ಇದನ್ನೂ ಓದಿ: ನಮ್ಮ ಮೆಟ್ರೋದ ಗ್ರೀನ್ ಲೈನ್ ವಿಸ್ತರಣೆ ವಿಳಂಬಕ್ಕೆ “ನೈಸ್” ಕಾರಣ

ಕೇಂದ್ರದ ಸೂಚನೆ ಕುರಿತು ಪ್ರತಿಕ್ರಿಯೆ ನೀಡಿರುವ ‘ಬೆಳ್ಳಂದೂರು ಉಳಿಸಿ’ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಸವನಹಳ್ಳಿ ಕೆರೆ ಅಭಿವೃದ್ಧಿ ವೇದಿಕೆ ಅಧ್ಯಕ್ಷ ವಿಷ್ಣುಪ್ರಸಾದ್‌ ಅವರು, ಮೊಬಿಲಿಟಿ ಮೂಲಸೌಕರ್ಯಗಳ ಕೊರತೆ ಮತ್ತು ಸಮಗ್ರ ಚಲನಶೀಲತೆಯ ಯೋಜನೆಯ ಕೊರತೆಯ ಕುರಿತು ನಾನು ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದೆ. ಸರ್ಜಾಪುರ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ಕೈಬಿಡುವುದು ಕೂಡ ನಮ್ಮ ಕುಂದುಕೊರತೆಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.



Read more

[wpas_products keywords=”deal of the day”]