Karnataka news paper

ವಿಕ್ರಾಂತ್ ರೋಣ ಒಟಿಟಿ ರೈಟ್ಸ್‌ ಭಾರೀ ಮೊತ್ತ: ದಕ್ಷಿಣ ಭಾರತದಲ್ಲೇ ಇದು ಅತಿದೊಡ್ಡ ಆಫರ್!


The New Indian Express

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷೆಯ ಸಿನಿಮಾ ‘ವಿಕ್ರಾಂತ್ ರೋಣ’. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಸಜ್ಜಾಗುತ್ತಿರುವ ಈ ಸಿನಿಮಾಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಸ್ಯಾಟಲೈಟ್ ಹಾಗೂ ಓಟಿಟಿಯಿಂದ ಸುದೀಪ್ ಚಿತ್ರಕ್ಕೆ ಆಫರ್‌ ನೀಡಲಾಗುತ್ತಿದೆ.

ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡುವಂತೆ ಎರಡು ಓಟಿಟಿ ಸಂಸ್ಥೆಗಳು ದೊಡ್ಡ ಮೊತ್ತದ ಆಫರ್‌ ಅನ್ನು ಮುಂದಿಟ್ಟಿವೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ದೊಡ್ಡ ಆಫರ್ ಅಂತಲೇ ಹೇಳಲಾಗುತ್ತಿದೆ.

3ಡಿ ತಂತ್ರಜ್ಞಾನದಲ್ಲಿ ಅದ್ದೂರಿ ವೆಚ್ಚದಲ್ಲಿ ತಯಾರಾಗಿರುವ ಪ್ಯಾನ್‌ ಇಂಡಿಯಾ ಚಿತ್ರ ‘ವಿಕ್ರಾಂತ್‌ ರೋಣ’ದ ನೇರ ಪ್ರಸಾರ ಹಕ್ಕುಗಳಿಗಾಗಿ ಎರಡು ಒಟಿಟಿ ಸಂಸ್ಥೆಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ ಎನ್ನಲಾಗಿದೆ.  ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿ ಇಂಗ್ಲಿಷ್‌ ಭಾಷೆಯಲ್ಲೂ ನೇರವಾಗಿ ಒಟಿಟಿಯಲ್ಲಿ ಪ್ರಸಾರ ಮಾಡಲು ಓಟಿಟಿ ಆಫರ್‌ನೀಡಿದೆ.

ಆದರೆ, ಚಿತ್ರತಂಡ ಇನ್ನೂ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಗಾಂಧಿನಗರದಲ್ಲಿ ಚಾಲ್ತಿಯಲ್ಲಿರುವ ವದಂತಿಯ ಪ್ರಕಾರ ಒಂದು ಓಟಿಟಿ ವಿಕ್ರಾಂತ್‌ ರೋಣ ಚಿತ್ರಕ್ಕೆ ಬರೋಬ್ಬರಿ ನೂರು ಕೋಟಿ ರುಪಾಯಿ ನೀಡಲು ಮುಂದೆ ಬಂದಿದೆ ಎಂದು ಹೇಳಲಾಗುತ್ತಿದೆ.

ದಕ್ಷಿಣ ಭಾರತೀಯ ಚಿತ್ರವೊಂದಕ್ಕೆ ಬಂದಿರುವ ಅತೀ ಹೆಚ್ಚಿನ ಆಫರ್‌ ಇದಾಗಿದೆ. ಈ ಕುರಿತು ಚಿತ್ರದ ನಿರ್ಮಾಪಕ ಜಾಕ್‌ ಮಂಜು ಯಾವುದೇ ನಿರ್ಧಾರ ಮಾಡಿಲ್ಲವಂತೆ. ವಿಕ್ರಾಂತ್‌ ರೋಣ’ ಚಿತ್ರವನ್ನು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುವ ಉದ್ದೇಶ ನಮಗೆ ಇದೆ. ಆ ಕಾರಣಕ್ಕೆ ಅದ್ದೂರಿಯಾಗಿ 3ಡಿ ತಂತ್ರಜ್ಞಾನದಲ್ಲಿ ಚಿತ್ರವನ್ನು ನಿರ್ಮಿಸಿದ್ದೇವೆ.

ನಟ ಸುದೀಪ್‌ ಅವರಿಗೆ ಇರುವ ಪ್ಯಾನ್‌ ಇಂಡಿಯಾ ಫ್ಯಾನ್‌ ಬೇಸ್‌ ಬಗ್ಗೆ ಗೊತ್ತಿದೆ.ವೀಕೆಂಡ್‌ ಕರ್ಫ್ಯೂ ಮತ್ತು ಶೇ.50 ಸೀಟು ಭರ್ತಿ ಆದೇಶ ಜಾರಿಯಾಗಿದ್ದು, ಇದು ಮತ್ತಷ್ಟುದಿನ ಮುಂದುವರಿದವರೆ ಹೇಗೆ ಎನ್ನುವ ಯೋಚನೆ ಕೂಡ ಇದೆ ಎಂದು ಜಾಕ್ ಮಂಜು ಹೇಳಿದ್ದಾರೆ.

ಇದನ್ನೂ ಓದಿ: ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಫೆಬ್ರವರಿ 24 ಕ್ಕೆ ‘ವಿಕ್ರಾಂತ್ ರೋಣ’ ರಿಲೀಸ್

ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಡುವೆ ಮತ್ತೆ ಲಾಕ್​ಡೌನ್​ ಮಾಡುವ ಎಲ್ಲ ಸಾಧ್ಯತೆ ಹೆಚ್ಚಿದೆ. ಈ ವಿಚಾರ ಗಮನದಲ್ಲಿಟ್ಟುಕೊಂಡು ಕಿಚ್ಚ ಸುದೀಪ್​ ಅವರ ಜೊತೆ ಮಾತನಾಡಿ ಎರಡ್ಮೂರು ವಾರಗಳ ನಂತರ ಸೂಕ್ತ ನಿರ್ಧಾರಕ್ಕೆ ಬರುತ್ತೇವೆ ಎಂದು ಸಿನಿಮಾದ ನಿರ್ಮಾಪಕರು ಹೇಳಿದ್ದಾರೆ.

ವಿಕ್ರಾಂತ್ ರೋಣ’ ಫೆಬ್ರವರಿ 24ಕ್ಕೆ ಬಿಡುಗಡೆ ಸಜ್ಜಾಗುತ್ತಿದೆ. ಇದಕ್ಕಾಗಿ ಚಿತ್ರತಂಡ ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದೆ. ಆದರೆ, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಚಿತ್ರತಂಡದ ಆತಂಕಕ್ಕೆ ಕಾರಣವಾಗಿದೆ.

‘ವಿಕ್ರಾಂತ್ ರೋಣ’ ಸಿನಿಮಾವನ್ನು ನೇರವಾಗಿ ಓಟಿಟಿ ರಿಲೀಸ್ ಮಾಡಲು 95 ರಿಂದ 100 ಕೋಟಿ ಆಫರ್ ನೀಡಿವೆ. “RRR, ರಾಧೆ ಶ್ಯಾಮ್ ಪೋಸ್ಟ್‌ಪೋನ್ ಆದ ನಂತರ ಎರಡು-ಮೂರು ಓಟಿಟಿಗಳ ಮ್ಯಾನೇಜರ್‌ಗಳಿಂದ ಹಾಗೂ ಮಧ್ಯವರ್ತಿಗಳಿಂದ ನಮಗೆ ಆಫರ್‌ಗಳು ಬರುತ್ತಿವೆ. ಈ ಆಫರ್‌ಗಳನ್ನು ನಾವು ಇನ್ನೂ ಪರಿಗಣನೆಗೆ ತೆಗೆದುಕೊಂಡಿಲ್ಲ.

ಕಾರಣ ಏನೆಂದರೆ, ನಾವು ಎರಡೂವರೆಗೂ ಮೂರು ವರ್ಷಗಳಿಂದ ಕಷ್ಟ ಪಟ್ಟು ಕ್ವಾಲಿಟಿ ಸಿನಿಮಾ ಮಾಡಿ, 3ಡಿ ಕೂಡ ಮಾಡಿದ್ದೇವೆ. 3ಡಿ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಿದರನೇ ಚಂದ. ಈಗ 3ನೇ ಲಾಕ್‌ಡೌನ್ ಆಗುವ ಭೀತಿಯಲ್ಲಿ ನಾವಿರುವಾಗ ನಿರ್ಮಾಪಕನಾಗಿ ಓಟಿಟಿ ಆಫರ್‌ ಅನ್ನು ತೆಗೆದುಕೊಳ್ಳಬೇಕಾ ಬೇಡವಾ ಅನ್ನುವ ಗೊಂದಲದಲ್ಲಿ ನಾನಿದ್ದೇನೆ.” ಎಂದು ನಿರ್ಮಾಪಕ ಜಾಕ್ ಮಂಜು ಇದ್ದಾರೆ.

ಜೀ ಸ್ಟುಡಿಯೋಸ್ ಪ್ರಸ್ತುತಪಡಿಸಿದ ಅನುಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಬಹುಭಾಷಾ ಸಾಹಸ-ಸಾಹಸವಾಗಿದ್ದು, ಇದು 14 ಭಾಷೆಗಳು ಮತ್ತು 55 ದೇಶಗಳಲ್ಲಿ ಬಿಡುಗಡೆಯಾಗುತ್ತದೆ. ಪ್ರೊಡಕ್ಷನ್ ಹೌಸ್, ಶಾಲಿನಿ ಮಂಜುನಾಥ್ ಅವರ ಬೆಂಬಲದೊಂದಿಗೆ ಮತ್ತು ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಣದಲ್ಲಿ ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಸಹ ನಟಿಸಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದ್ದು, ವಿಲಿಯಂ ಡೇವಿಡ್ ಛಾಯಾಗ್ರಹಣವಿದೆ.



Read more…

[wpas_products keywords=”party wear dress for women stylish indian”]