ಹೈಲೈಟ್ಸ್:
- ಹೊಸ ಶೂ ಧರಿಸಿ ಪಾದಯಾತ್ರೆಗೆ ಸಜ್ಜು
- ಕನಕಪುರದತ್ತ ತೆರಳಿದ ಸಿದ್ದರಾಮಯ್ಯ
- ಭಾನುವಾರದಿಂದ ಪಾದಯಾತ್ರೆಗೆ ಚಾಲನೆ
ಭಾನುವಾರ ಮೇಕೆದಾಟು ಸಂಗಮ ಸ್ಥಾನದಿಂದ ಪಾದಯಾತ್ರೆ ಆರಂಭವಾಗಲಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. ಕೋವಿಡ್ ಕರ್ಫ್ಯೂ ಇದ್ದರೂ ಪಾದಯಾತ್ರೆಗೆ ಕಾಂಗ್ರೆಸ್ ಅಂತಿಮ ಸಿದ್ಧತೆ ನಡೆಸುತ್ತಿದೆ.
ಮೇಕೆದಾಟು ಡ್ಯಾಂ ವಿವಾದ..! ಕರ್ನಾಟಕದ ವಾದವೇನು..? ತಮಿಳುನಾಡಿನ ವಿರೋಧವೇನು..?
ಈಗಾಗಲೇ ವೇದಿಕೆ ರೆಡಿಯಾಗಿದ್ದು, 80 ಜನರಿಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಪಾದಯಾತ್ರೆಯಲ್ಲಿ ಭಾಗಿಯಾಗುವ ಎಲ್ಲರೂ ಕೋವಿಡ್ ನಿಯಮಾವಳಿಗಳನ್ನು ಪಾಲನೆ ಮಾಡುವಂತೆಯೂ ಸೂಚನೆ ನೀಡಲಾಗಿದೆ.
ಪಾದಯಾತ್ರೆಗಾಗಿ ಕನಕಪುರಕ್ಕೆ ತೆರಳುವ ಮುನ್ನ ಸಿದ್ದರಾಮಯ್ಯ ಮಾತನಾಡಿ, ಕೋವಿಡ್ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಪಾದಯಾತ್ರೆ ಮಾಡುತ್ತೇವೆ ಎಂದರು.
ರಾಮನಗರ ಜಿಲ್ಲೆಗೆ ಸೀಮಿತವಾಗಿ ಸರ್ಕಾರ 144 ಸೆಕ್ಷನ್ ಹೇರಿರುವುದು ಏನಾದರೂ ಮಾಡಿ ನಮ್ಮ ಪಾದಯಾತ್ರೆಯನ್ನು ನಿಲ್ಲಿಸಬೇಕು ಎಂಬ ದುರುದ್ದೇಶವನ್ನು ತೋರಿಸುತ್ತದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಾವು ನಾಳೆ ಪಾದಯಾತ್ರೆ ಮಾಡುವುದು ನಿಶ್ಚಿತ, ಈ ಸರ್ಕಾರ ನಮ್ಮ ಮೇಲೆ ಏನು ಕ್ರಮ ಜರುಗಿಸುತ್ತದೋ ಜರುಗಿಸಲಿ. ನಾವು ಎಲ್ಲವನ್ನು ಎದುರಿಸಲು ಸಿದ್ಧರಿದ್ದೇವೆ ಎಂದರು.
ಬಿಜೆಪಿಯವರು ಅಧಿಕಾರದಲ್ಲಿ ಇದ್ದಾರೆ. ನಾವು ಕೊರೊನಾ ನಿಯಮಗಳನ್ನು ಅನುಸರಿಸಿಯೇ ಪಾದಯಾತ್ರೆ ಮಾಡುತ್ತೇವೆ. ನಮ್ಮ ಮೇಲೆ ಏನು ಕಾನೂನು ಕ್ರಮ ತೆಗೆದುಕೊಳ್ಳಬೇಕು ಅದನ್ನು ಸರ್ಕಾರ ಮಾಡಲಿ. ನಾವು ಅದನ್ನು ಎದುರಿಸಲು ತಯಾರಾಗಿದ್ದೇವೆ. ನಾವು ಕಾನೂನನ್ನು ಗೌರವಿಸುತ್ತೇವೆ, ಆದರೂ ಅವರು ನಮ್ಮನ್ನು ಬಂಧಿಸುತ್ತಾರೆ ಎಂದರೆ ಬಂಧಿಸಲಿ ಎಂದು ಸವಾಲು ಹಾಕಿದರು.
Read more
[wpas_products keywords=”deal of the day sale today offer all”]