Karnataka news paper

ಉತ್ತರ ಪ್ರದೇಶ ಚುನಾವಣೆಯ ಏಳು ಹಂತಗಳು: ನಾಮಪತ್ರ ಸಲ್ಲಿಕೆ, ಮತದಾನದ ವಿವರ


ಹೈಲೈಟ್ಸ್‌:

  • ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರಗಳಿಗೆ ಏಳು ಹಂತಗಳ ಚುನಾವಣೆ
  • ಫೆಬ್ರವರಿ 10ರಿಂದ ಮಾರ್ಚ್ 7ರವರೆಗೂ ನಡೆಯಲಿರುವ ಮತದಾನ
  • ಉತ್ತರ ಪ್ರದೇಶ ಸೇರಿ ಎಲ್ಲ ಐದು ರಾಜ್ಯಗಳ ಫಲಿತಾಂಶ ಮಾರ್ಚ್ 10ಕ್ಕೆ

ಹೊಸದಿಲ್ಲಿ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಇವುಗಳ ಪೈಕಿ ಅತಿ ಹೆಚ್ಚು ಕುತೂಹಲ ಕೆರಳಿಸಿರುವುದು ಉತ್ತರ ಪ್ರದೇಶ ಮತ್ತು ಪಂಜಾಬ್ ವಿಧಾನಸಭೆ ಚುನಾವಣೆ. 403 ಸೀಟುಗಳು ಇರುವ ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ 10 ರಿಂದ ಆರಂಭವಾಗುವ ಚುನಾವಣೆ, ಮಾರ್ಚ್ 10ರಂದು ಫಲಿತಾಂಶ ಪ್ರಕಟದೊಂದಿಗೆ ಮುಕ್ತಾಯವಾಗಲಿದೆ.

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಫೆಬ್ರವರಿ 10ರಂದು ನಡೆಯಲಿದೆ. ಎರಡನೇ ಹಂತದ ಮತದಾನ ಫೆ. 14ರಂದು, ಮೂರನೇ ಹಂತದ ಚುನಾವಣೆ ಫೆ. 20ರಂದು, ನಾಲ್ಕನೇ ಹಂತದ ಮತದಾನ ಫೆ. 23ರಂದು ಹಾಗೂ ಐದನೇ ಹಂತದ ಚುನಾವಣೆ ಫೆ. 27ರಂದು ನಡೆಯಲಿದೆ. ಆರು ಮತ್ತು ಏಳನೇ ಹಂತದ ಚುನಾವಣೆಗಳು ಕ್ರಮವಾಗಿ ಮಾರ್ಚ್ 3 ಹಾಗೂ 7ರಂದು ನಡೆಯಲಿದೆ.
ಐದು ರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ: ಚುನಾವಣಾ ಆಯೋಗದ ನಿಯಮಗಳೇನು?
ಮೊದಲ ಹಂತ
ಅಧಿಸೂಚನೆ ಪ್ರಕಟ: ಜನವರಿ 14
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಜನವರಿ 21
ನಾಮಪತ್ರ ಪರಿಶೀಲನೆ: ಜನವರಿ 24
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಜನವರಿ 27
ಮತದಾನದ ದಿನಾಂಕ: ಫೆಬ್ರವರಿ 10

ಎರಡನೇ ಹಂತ
ಅಧಿಸೂಚನೆ ಪ್ರಕಟ: ಜನವರಿ 21
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಜನವರಿ 28
ನಾಮಪತ್ರ ಪರಿಶೀಲನೆ: ಜನವರಿ 29
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಜನವರಿ 31
ಮತದಾನದ ದಿನಾಂಕ: ಫೆಬ್ರವರಿ 14

ಮೂರನೇ ಹಂತ
ಅಧಿಸೂಚನೆ ಪ್ರಕಟ: ಜನವರಿ 25
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 1
ನಾಮಪತ್ರ ಪರಿಶೀಲನೆ: ಫೆಬ್ರವರಿ 2
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 4
ಮತದಾನದ ದಿನಾಂಕ: ಫೆಬ್ರವರಿ 20

ನಾಲ್ಕನೇ ಹಂತ
ಅಧಿಸೂಚನೆ ಪ್ರಕಟ: ಜನವರಿ 27
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 3
ನಾಮಪತ್ರ ಪರಿಶೀಲನೆ: ಫೆಬ್ರವರಿ 4
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 7
ಮತದಾನದ ದಿನಾಂಕ: ಫೆಬ್ರವರಿ 23

ಐದನೇ ಹಂತ
ಅಧಿಸೂಚನೆ ಪ್ರಕಟ: ಫೆಬ್ರವರಿ 1
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 8
ನಾಮಪತ್ರ ಪರಿಶೀಲನೆ: ಫೆಬ್ರವರಿ 9
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 11
ಮತದಾನದ ದಿನಾಂಕ: ಫೆಬ್ರವರಿ 27

ಆರನೇ ಹಂತ
ಅಧಿಸೂಚನೆ ಪ್ರಕಟ: ಫೆಬ್ರವರಿ 4
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 11
ನಾಮಪತ್ರ ಪರಿಶೀಲನೆ: ಫೆಬ್ರವರಿ 14
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 16
ಮತದಾನದ ದಿನಾಂಕ: ಮಾರ್ಚ್ 3

ಏಳನೇ ಹಂತ
ಅಧಿಸೂಚನೆ ಪ್ರಕಟ: ಫೆಬ್ರವರಿ 10
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 17
ನಾಮಪತ್ರ ಪರಿಶೀಲನೆ: ಫೆಬ್ರವರಿ 18
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 21
ಮತದಾನದ ದಿನಾಂಕ: ಮಾರ್ಚ್ 7
ಪಂಚ ರಾಜ್ಯ ಚುನಾವಣೆ ಘೋಷಣೆ, ಉ. ಪ್ರದೇಶದಲ್ಲಿ 7 ಹಂತಗಳಲ್ಲಿ ಮತದಾನ, ಮಾರ್ಚ್‌ 10ಕ್ಕೆ ಫಲಿತಾಂಶ
ಉತ್ತರ ಪ್ರದೇಶದ 403 ಸೀಟುಗಳಲ್ಲಿ 202 ಬಹುಮತದ ಮ್ಯಾಜಿಕ್ ಸಂಖ್ಯೆಯಾಗಿದೆ. ಈ ಕ್ಷೇತ್ರಗಳು ಏಳು ವಿಶಾಲ ಪ್ರದೇಶಗಳಲ್ಲಿ ಹಂಚಿಹೋಗಿವೆ. ಪಶ್ಚಿಮ ಉತ್ತರ ಪ್ರದೇಶ (44), ರೆಹೆಲ್ಖಂಡ್ (52), ದೊಯಬ್ (73), ಬುಂಡೇಲ್‌ಖಂಡ್ (19), ಪೂರ್ವ ಯುಪಿ (76) ಮತ್ತು ಈಶಾನ್ಯ ಯುಪಿ (61).



Read more

[wpas_products keywords=”deal of the day sale today offer all”]