Karnataka news paper

ತಂದೆಯ ಕೊನೆ ಕ್ಷಣದಲ್ಲಿಯೂ ಇರಲಿಲ್ಲ, ಅಮ್ಮನ ಕೈ ಹಿಡಿದು ಸಾಂತ್ವನ ಹೇಳಲಿಲ್ಲ: ಬೇಸರ ಹೊರಹಾಕಿದ ಗಾಯಕ ವಿಶಾಲ್


ಹೈಲೈಟ್ಸ್‌:

  • ಹಿಂದಿಯ ಅನೇಕ ಸಿನಿಮಾಗಳಲ್ಲಿ ವಿಶಾಲ್ ದದ್ಲಾನಿ ಕೆಲಸ ಮಾಡಿದ್ದಾರೆ
  • ವಿಶಾಲ್ ದದ್ಲಾನಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ
  • ಕೊರೊನಾದಿಂದಾಗಿ ತಂದೆಯ ಕೊನೆಯ ಕ್ಷಣದಲ್ಲಿ ಅವರ ಜೊತೆ ವಿಶಾಲ್ ಇರಲಾಗಲಿಲ್ಲ

ಇಂಡಿಯನ್ ಐಡಲ್’ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿದ್ದ ಗಾಯಕ ವಿಶಾಲ್ ದದ್ಲಾನಿ ತಂದೆ ಮೋದಿ ದದ್ಲಾನಿ ಅವರ ಕಳೆದ ಶುಕ್ರವಾರ ನಿಧನರಾಗಿದ್ದಾರೆ. ತಂದೆ ಸಾಯುವ ಹಿಂದಿನ ದಿನ ಕೊರೊನಾ ಬಂದಿದ್ದರಿಂದ ವಿಶಾಲ್ ಅವರು ತಂದೆಯ ಕೊನೆಯ ಕ್ಷಣದಲ್ಲಿ ಅವರ ಹತ್ತಿರ ಇರಲಾಗಲಿಲ್ಲ.

ನನ್ನ ತಂದೆ ನನ್ನ ಜೀವನದ ಶಿಕ್ಷಕ: ವಿಶಾಲ್ ದದ್ಲಾನಿ

ತಂದೆಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಶಾಲ್, “ತಂದೆಯಿಲ್ಲದೆ ನಾನಿಲ್ಲ, ಮೋಟಿ ದದ್ಲಾನಿ ಜನವರಿ 8ರಂದು ನಿಧನರಾಗಿದ್ದಾರೆ. ನಾನು ಒಳ್ಳೆಯ ಸ್ನೇಹಿತ, ವಿಶ್ವದ ಸಹೃದಯಿ ವ್ಯಕ್ತಿಯನ್ನು ನಾನು ಕಳೆದ ರಾತ್ರಿ ಕಳೆದುಕೊಂಡಿರುವೆ. ಇವರಿಗಿಂತ ಉತ್ತಮ ತಂದೆ ಕೊಡಿ ಎಂದು ನಾನು ಕೇಳಿಕೊಳ್ಳಲು ಸಾಧ್ಯವೇ ಇಲ್ಲ. ನನ್ನ ಜೀವನಕ್ಕೆ ಅವರು ಶಿಕ್ಷಕರಾಗಿದ್ದರು. ನನ್ನಲ್ಲಿ ಏನಾದರೂ ಒಳ್ಳೆಯದು ಏನಾದರೂ ಇದ್ದರೆ ಅದು ಅವರ ಪ್ರತಿಬಿಂಬ” ಎಂದು ಹೇಳಿದ್ದಾರೆ.

ಕಷ್ಟದ ಸಂದರ್ಭದಲ್ಲಿ ತಾಯಿ ಜೊತೆ ಇರಲಾಗಲಿಲ್ಲ: ವಿಶಾಲ್

“ಇಂತಹ ಕಷ್ಟದ ಸಮಯದಲ್ಲಿ ತಾಯಿ ಜೊತೆಗೂ ಇರಲಾಗಲಿಲ್ಲ. ಕಳೆದ ಮೂರು ನಾಲ್ಕು ದಿನಗಳಿಂದ ನನ್ನ ತಂದೆ ಐಸಿಯುವಿನಲ್ಲಿದ್ದರು. ನನಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ನಿನ್ನೆಯಿಂದ ನಾನು ಅಲ್ಲಿ ಹೋಗಲಾಗಲಿಲ್ಲ. ಕಷ್ಟದ ಸಮಯದಲ್ಲಿ ನನ್ನ ತಾಯಿ ಜೊತೆ ಇರಲಾಗಲಿಲ್ಲ. ಇದು ಸರಿಯಲ್ಲ. ತಂದೆಯಿಲ್ಲದೆ ಈ ಭೂಮಿ ಮೇಲೆ ಹೇಗೆ ಇರಬೇಕು ಎಂದು ಗೊತ್ತಿಲ್ಲ” ಎಂದಿದ್ದಾರೆ ವಿಶಾಲ್

ಸ್ವಾತಂತ್ರ್ಯ ಹೋರಾಟದ ಬಗ್ಗೆ ಇನ್ನೆಂದೂ ಮರೆಯದಂತೆ ಆಕೆಗೆ ನೆನಪಿಸಿ: ಕಂಗನಾಗೆ ವಿಶಾಲ್ ದದ್ಲಾನಿ ತಿರುಗೇಟು!

ಮುಂಜಾಗ್ರತೆ ವಹಿಸಿದ್ರೂ ಕೊರೊನಾ ಬಂತು: ವಿಶಾಲ್
ಕಳೆದ ಶುಕ್ರವಾರ ತನಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ವಿಶಾಲ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು. “ನನ್ನ ಸಂಪರ್ಕಕ್ಕೆ ಬಂದಿರುವವರು ಆದಷ್ಟು ಬೇಗ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ. ಎಲ್ಲ ಮುಂಜಾಗ್ರತೆ ಕ್ರಮ ಕೈಗೊಂಡರೂ ನನಗೆ ಕೊರೊನಾ ಪಾಸಿಟಿವ್ ಬಂದಿದೆ” ಎಂದು ವಿಶಾಲ್ ಹೇಳಿದ್ದರು.

“ಎಲ್ಲ ನೀತಿ ನಿಯಮ ಪಾಲಿಸಿ ಶೂಟಿಂಗ್‌ನಲ್ಲಿ ಭಾಗಿಯಾಗಿರುತ್ತಿದ್ದೆ. ಸ್ಯಾನಿಟೈಸ್ ಮಾಡಿಕೊಳ್ಳದೆ ನಾನು ಯಾರನ್ನೂ ಮುಟ್ಟುತ್ತಿರಲಿಲ್ಲ. ಅದರ ಜೊತೆಗೆ ಮಾಸ್ಕ್ ಇಲ್ಲದೆ ಯಾರನ್ನೂ ಭೇಟಿ ಮಾಡುತ್ತಿರಲಿಲ್ಲ. ಹೀಗಿದ್ದಾಗ್ಯೂ ನನಗೆ ಸ್ವಲ್ಪ ಸೋಂಕಿನ ಲಕ್ಷಣ ಇದೆ. ದಯವಿಟ್ಟು ಜಾಗೃತರಾಗಿರಿ” ಎಂದು ವಿಶಾಲ್ ಹೇಳಿದ್ದಾರೆ.

ಮಂಗಳೂರಿನ ನಿಹಾಲ್ ತಾವ್ರೊರನ್ನು ಮೆಚ್ಚಿದ ‘ಸಂಗೀತ ಮಾಂತ್ರಿಕ’ ಎಆರ್ ರೆಹಮಾನ್! ‌

ವಿಶಾಲ್ ಕನ್ನಡ ಸಿನಿಮಾದಲ್ಲಿಯೂ ಕೆಲಸ ಮಾಡಿದ್ರು (
vishal dadlani )
ವರುಣ್ ಧವನ್, ವಾಣಿ ಕಪೂರ್, ಶಾಲ್ಮಿಲಿ, ಶ್ರೇಯಾ ಘೋಷಾಲ್ ಸೇರಿದಂತೆ ಅನೇಕ ಗಾಯಕರು ವಿಶಾಲ್ ಅವರಿಗೆ ಬೇಗ ಹುಷಾರಾಗುವಂತೆ ತಿಳಿಸಿದ್ದಾರೆ, ತಂದೆ ನಿಧನಕ್ಕೂ ಸಾಂತ್ವನ ತಿಳಿಸಿದ್ದಾರೆ. 1999ರಿಂದ ವಿಶಾಲ್ ಅವರು ಅನೇಕ ಹಾಡುಗಳನ್ನು ಹಾಡಿದ್ದಾರೆ, ಸಾಹಿತ್ಯ ಕೂಡ ರಚಿಸಿದ್ದಾರೆ, ಸಂಗೀತ ನಿರ್ದೇಶನ ಮಾಡಿದ್ದಾರೆ. ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾದ ಹಾಡಿಗೂ ವಿಶಾಲ್ ಕೆಲಸ ಮಾಡಿದ್ದರು. ಕನ್ನಡದ ‘ಅಂದರ್ ಬಾಹರ್’, ‘ನಿನ್ನಿಂದಲೇ’ ಸಿನಿಮಾ ಹಾಡಿಗೂ ವಿಶಾಲ್ ಧ್ವನಿ ನೀಡಿದ್ದರು.



Read more

[wpas_products keywords=”deal of the day party wear dress for women stylish indian”]