ಹೈಲೈಟ್ಸ್:
- ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳು
- ಕನ್ನಡ ಸಿನಿಮಾ ನಟಿ ನಿಶ್ವಿಕಾ ನಾಯ್ಡುಗೆ ಕೊರೊನಾ
- ನಟಿ ತ್ರಿಶಾ ಸೇರಿದಂತೆ ಧಾರಾವಾಹಿ ಕಲಾವಿದರಿಗೂ ಕೊರೊನಾ ಸೋಂಕು
ನಿಶ್ವಿಕಾ ನಾಯ್ಡು
‘ಸಖತ್’ ಸಿನಿಮಾ ನಟಿ ನಿಶ್ವಿಕಾ ನಾಯ್ಡು ಅವರಿಗೆ ಕೊರೊನಾ ಸೋಂಕು ತಗುಲಿದೆ. ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, “ನನಗೆ ಇಂದು ಕೊರೊನಾ ಸೋಂಕು ತಗುಲಿರೋದು ಗೊತ್ತಾಗಿದೆ, ಸ್ವಲ್ಪ ಲಕ್ಷಣಗಳಿವೆ, ನನ್ನ ಸಂಪರ್ಕಕ್ಕೆ ಬಂದಿರೋರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ” ಎಂದು ಹೇಳಿದ್ದಾರೆ.
ಕುಬ್ರಾ ಸೇಠ್
ನನಗೆ ಕೊರೊನಾ ವೈರಸ್ ಪಾಸಿಟಿವ್ ಆಗಿದೆ. ಎಲ್ಲರೂ ಸುರಕ್ಷತೆಯಿಂದ ಮನೆಯಲ್ಲಿಯೇ ಇರಿ, ಸಾಧ್ಯವಾದಷ್ಟು ಮಾಸ್ಕ್ ಹಾಕಿಕೊಳ್ಳಿ. ನನ್ನ ಸಂಪರ್ಕಕ್ಕೆ ಬಂದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ. ಕೊರೊನಾ ಪರೀಕ್ಷೆಗೆ ಒಳಪಟ್ಟು 36 ಗಂಟೆಯಾದರೂ ನನಗೆ ಫಲಿತಾಂಶದ ವರದಿ ಸಿಕ್ಕಿಲ್ಲ. ನಿಮಗೆ ಈಗ ಕೊರೊನಾ ಬಂದಿದೆಯೋ ಇಲ್ಲವೋ ಗೊತ್ತಾಗೋದಿಲ್ಲ. ಹೀಗಾಗಿ ಮನೆಯಲ್ಲಿಯೇ ಇರೋದು ಒಳ್ಳೆಯದು. ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತ ನಾನು ಟಿವಿ ನೋಡುತ್ತಿದ್ದೇನೆ. ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ, ಒಳ್ಳೆಯ ಆಹಾರ ಸೇವಿಸಿ, 5-6 ದಿನಗಳಲ್ಲಿ ನಾವು ಓಮಿಕ್ರಾನ್‌ಗೆ ಬಾಯ್ ಹೇಳಬಹುದು.
ನಟ ಮಹೇಶ್ ಬಾಬು, ‘ಸಿಂಹಾದ್ರಿಯ ಸಿಂಹ’ ಖ್ಯಾತಿಯ ನಟಿ ಮೀನಾರಿಗೆ ಕೊರೊನಾ ಪಾಸಿಟಿವ್
ತ್ರಿಶಾ
ಎಲ್ಲ ಮುಂಜಾಗ್ರತೆ ಕ್ರಮ ಕೈಗೊಂಡರೂ ಕೂಡ ಹೊಸ ವರ್ಷಕ್ಕೆ ಒಂದು ದಿನ ಮೊದಲು ನನಗೆ ಕೊರೊನಾ ವೈರಸ್ ಬಂತು, ನನಗೆ ಸೋಂಕಿನ ಲಕ್ಷಣಗಳು ಕಂಡು ಬಂತು. ಸಿಕ್ಕಾಪಟ್ಟೆ ಅನುಭವಿಸಿದೆ. ವ್ಯಾಕ್ಸಿನೇಶನ್‌ನಿಂದ ಸ್ವಲ್ಪ ಹಿಂಸೆ ಕಮ್ಮಿ ಆಯ್ತು ಎನ್ನಬಹುದು. ಇಂದು ಚೇತರಿಸಿಕೊಳ್ಳುತ್ತಿದ್ದೇನೆ. ಎಲ್ಲರೂ ಮಾಸ್ಕ್ ಧರಿಸಿಮ ಸುರಕ್ಷತೆಯಿಂದ ಇರಿ ಎಂದು ಕೇಳಿಕೊಳ್ಳುವೆ. ಆದಷ್ಟು ಬೇಗ ಹುಷಾರಾಗಿ ಮನೆಗೆ ಬರುವೆ. ಕುಟುಂಬ, ಸ್ನೇಹಿತರು, ಅಭಿಮಾನಿಗಳ ಪ್ರಾರ್ಥನೆಗೆ ಧನ್ಯವಾದಗಳು.
ಸ್ವರಾ ಭಾಸ್ಕರ್
ಸ್ವರಾ ಭಾಸ್ಕರ್ ಅವರು ಟ್ವೀಟ್ ಮಾಡಿ, “ಹೆಲೋ ಕೋವಿಡ್, RT PCR ಪರೀಕ್ಷೆ ಫಲಿತಾಂಶ ಸಿಕ್ಕಿದೆ. ನನಗೆ ಕೊರೊನಾ ಸೋಂಕು ತಗುಲಿದೆ. ಎರಡು ಬಾರಿ ವ್ಯಾಕ್ಸಿನೇಶನ್ ಮಾಡಿಸಿಕೊಂಡಿದ್ದೆ, ಜ್ವರ ತಲೆನೋವು ಇದೆ, ನಾಲಿಗೆ ರುಚಿ ಇಲ್ಲ. ಆದಷ್ಟು ಬೇಗ ಹುಷಾರಾಗುವೆ. ಎಲ್ಲರೂ ಸುರಕ್ಷತೆಯಿಂದಿರಿ” ಎಂದು ಹೇಳಿದ್ದಾರೆ.
Valimai: ಚಿತ್ರರಂಗಕ್ಕೆ ಆತಂಕ ತಂದ ಒಮಿಕ್ರಾನ್; ಅಜಿತ್ ‘ವಲಿಮೈ’ ಪೋಸ್ಟ್‌ಪೋನ್!
ಸತ್ಯರಾಜ್
ನಟ ಸತ್ಯರಾಜ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದ ಅವರು ಜನವರಿ 7ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಿರ್ದೇಶಕ ಮಧು ಭಂಡಾರ್‌ಕರ್ ಕೂಡ ಕೊರೊನಾ ಪಾಸಿಟಿವ್ ಆದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.
little things ಟಿವಿ ಸಿರೀಸ್ ನಟಿ ಮಿಥಿಲಾ ಪಾಲ್ಕರ್ ಅವರಿಗೂ ಕೊರೊನಾ ಸೋಂಕು ತಗುಲಿದೆ.
‘ನಿನ್ನಿಂದಲೇ’ ಸಿನಿಮಾ ನಟಿ ಎರಿಕಾ ಫರ್ನಾಂಡೀಸ್ ಹಾಗೂ ಅವರ ತಾಯಿಗೂ ಕೊರೊನಾ ಬಂದಿದೆ
ghum hai kisikey pyaar meiin ಧಾರಾವಾಹಿ ನಟಿ ಆಯೇಷಾ ಸಿಂಗ್ ಅವರಿಗೂ ಕೂಡ ಕೊರೊನಾ ವೈರಸ್ ಸೋಂಕು ತಗುಲಿದೆ. ಮನೆಯಲ್ಲಿಯೇ ಅವರು ಐಸೋಲೇಟ್ ಆಗಿದ್ದಾರೆ. ಆರೋಗ್ಯ ಚೆನ್ನಾಗಿಲ್ಲದ ಕಾರಣ ಅವರು ಧಾರಾವಾಹಿ ಶೂಟ್‌ಗೆ ಕೆಲ ದಿನಗಳಿಂದ ಬರುತ್ತಿರಲಿಲ್ಲವಂತೆ.
pandya store ಧಾರಾವಾಹಿಯ ನಾಲ್ಕು ಮಂದಿಗೆ ಕೊರೊನಾ ವೈರಸ್ ತಗುಲಿದೆ. Alice Kaushik, Akshay Kharodia, Simran Budharup, Mohit Parmar ಅವರು ಕೊರೊನಾ ಸೋಂಕಿಗೊಳಪಟ್ಟಿದ್ದಾರೆ.
Read more
[wpas_products keywords=”deal of the day sale today offer all”]