ಹೈಲೈಟ್ಸ್:
- ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಅಜ್ಞಾನಕ್ಕೆ ಮರುಕ ಇದೆ!
- ವಿಶ್ವದಲ್ಲಿ ಸರ್ಕಾರದ ಜೊತೆ ವಿರೋಧ ಪಕ್ಷಗಳು ಕೈಜೋಡಿಸಿ ಜನರ ಸಂಕಷ್ಟ ಎದುರಿಸುವಲ್ಲಿ ಪಾಲು ಹಂಚಿಕೊಂಡಿದೆ
- ಕಾಂಗ್ರೆಸ್ ವಿರುದ್ಧ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಕಿಡಿ
ಕೋವಿಡ್ ಪಾಸಿಟಿವಿಟಿ ಪ್ರಮಾಣ ರಾಜ್ಯದಲ್ಲಿ ಕೇವಲ ಶೇ. 2 ರಷ್ಟು ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಯನ್ನು ಖಂಡಿಸಿದ ಅವರು, ಡಿಕೆಶಿಗೆ ಮಾಹಿತಿ ಕೊರತೆ ಇದೆ ಎಂದು ಅವರು ಆರೋಪಿಸಿದರು.
ವೀಕೆಂಡ್ ಕರ್ಫ್ಯೂ ಬಗ್ಗೆ ಪ್ರತಿಕ್ರಿಯೆ ನೀಡಿ, ಓಮಿಕ್ರಾನ್ ಸೋಂಕನ್ನು ತಕ್ಕ ಮಟ್ಟಿಗೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಹಾಗೂ ಶಿಸ್ತನ್ನು ಹೇಗೆ ಕಾಪಾಡಬೇಕು ಎಂಬ ನಿಟ್ಟಿನಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೆ ತಂದಿರುವ ಹಿಂದಿನ ಮೂಲ ಉದ್ದೇಶವಾಗಿದೆ. ಇದು ಸಂಪೂರ್ಣ ಲಾಕ್‌ಡೌನ್ ಅಲ್ಲ. ಆದಷ್ಟು ಜನರು ಎರಡು ದಿನಗಳ ಕಾಲ ಮನೆಯಲ್ಲಿ ಇದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಅನಗತ್ಯ ಓಡಾಟ ಕಡಿವಾಣ ಹಾಕಿದರೆ ಕೋವಿಡ್ ನಿಯಂತ್ರಣ ಸಾಧ್ಯ ಎಂದರು.
ಮೇಕೆದಾಟು ಪಾದಯಾತ್ರೆ ಗೊಂದಲ; ಶಾಸಕರು, ಕೈ ಮುಖಂಡರ ಜೊತೆ ಡಿಕೆಶಿ ಸಭೆ
ಬೆಂಗಳೂರಿನಲ್ಲಿ ಕೋವಿಡ್ ಶೇ. 7.8 ರಷ್ಟು ಪಾಸಿವಿಟ್ ಇದೆ. ಐದಾರು ಜಿಲ್ಲೆಯಲ್ಲಿ ಜಾಸ್ತಿ ಆಗುತ್ತಿದೆ. ಇದು ಹರಡುವುದಕ್ಕೂ ಮೊಲದೇ ಬಿಗಿ ಕ್ರಮದ ಮೂಲಕ ನಿಯಂತ್ರಣ ಮಾಡಬೇಕಿದೆ. ಸರ್ಕಾರ ಬಹಳ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆ ಎಂದರು.
ವಿಶ್ವದಲ್ಲಿ ಯಾವ ವಿರೋಧ ಪಕ್ಷಗಳು ಕೋವಿಡ್ ತುರ್ತು ಪರಿಸ್ಥಿತಿ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮೊಸರಲ್ಲಿ ಕಲ್ಲು ಹುಡುಕುತ್ತಿಲ್ಲ. ಸರ್ಕಾರದ ಜೊತೆ ವಿರೋಧ ಪಕ್ಷಗಳು ಕೈಜೋಡಿಸಿ ಜನರ ಸಂಕಷ್ಟ ಎದುರಿಸುವಲ್ಲಿ ಪಾಲು ಹಂಚಿಕೊಂಡಿದೆ. ಆದರೆ ಇಂತಹ ರಾಜಕಾರಣ ಇಂತಹ ಪರಿಸ್ಥಿತಿಯಲ್ಲಿ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರದ ಕಾನೂನು ನಿಯಮ ಪಾಲನೆ ಮಾಡದೆ ಇದ್ದರೆ ಅದನ್ನು ವಿರೋಧ ಪಕ್ಷ ಎಂದು ಕರೆಯಲು ಸಾಧ್ಯವಿಲ್ಲ. ನಾವು ಪಾದಯಾತ್ರೆಗೆ ವಿರೋಧ ಮಾಡುತ್ತಿಲ್ಲ. ಪಾದಯಾತ್ರೆ, ಮ್ಯಾರಥಾನ್, ಕುದುರೆ ರೇಸ್ ಏನಾದರೂ ಮಾಡಿ ನಾವು ವಿರೋಧ ಇಲ್ಲ. ಎತ್ತಿನ ಗಾಡಿ, ಸೈಕಲ್, ಟ್ರಾಕ್ಟರ್ ಆಯ್ತು, ಇನ್ನು ರೈಲು, ಬಸ್, ಮ್ಯಾರಥಾನ್ ಟ್ರಕ್ಕಿಂಗ್ ಮಾಡಿ ಆರೋಗ್ಯಕ್ಕೆ ಒಳ್ಳೆಯದು. ಆದರೆ ಸಮಯ ನೋಡಿ ಮಾಡಿ ಎಂದರು.
Read more
[wpas_products keywords=”deal of the day sale today offer all”]