Karnataka news paper

ಎಂದಿನಂತೆ ಜನ ಸಂಚಾರ; ರಾಯಚೂರಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾದ ವೀಕೆಂಡ್‌ ಕರ್ಫ್ಯೂ!


| Vijaya Karnataka Web | Updated: Jan 8, 2022, 2:00 PM

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪೋಲಿಸರು ಬೇಕಾ ಬಿಟ್ಟಿಯಾಗಿ ರಸ್ತೆಯಲ್ಲಿ ತಿರುಗಾಡುತ್ತಿರುವ ಬೈಕ್‌ ಸವಾರರನ್ನು ತಡೆದು ಬೈಕ್‌ಗಳನ್ನು ಸೀಜ್ ಮಾಡಿ ದಂಡ ವಿಧಿಸುತ್ತಿದ್ದಾರೆ. ಇನ್ನು, ಕೆಲವರು ಆಸ್ಪತ್ರೆಗೆ ಹೋಗುತ್ತಿದ್ದೇವೆ ಎಂದು ಚೀಟಿಗಳನ್ನು ತೋರಿಸುತ್ತಿದ್ದಾರೆ. ಇನ್ನು ಮಾಸ್ಕ್‌ ಧರಿಸದೇ ಮಹಿಳೆಯರು ರಸ್ತೆಯಲ್ಲಿ ತಿರುಗಾಡುತ್ತಿದ್ದು, ಅವರನ್ನು ಪೊಲೀಸರು ಪ್ರಶ್ನಿಸಿದರೆ ದೇವಸ್ಥಾನಕ್ಕೆ ಹೋಗಿದ್ವಿ ಎಂದು ನೆಪ ಹೇಳುತ್ತಿರುವುದು ಕಂಡುಬಂತು.

 

ವೀಕೆಂಡ್ ಕರ್ಪ್ಯೂ

ಸಾಂದರ್ಭಿಕ ಚಿತ್ರ

ಹೈಲೈಟ್ಸ್‌:

  • ವಾರಂತ್ಯದ ಕರ್ಫ್ಯೂಗೆ ರಾಯಚೂರಿನಲ್ಲಿ ಸಿಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು
  • ಪೋಲಿಸರು ಬೇಕಾ ಬಿಟ್ಟಿಯಾಗಿ ರಸ್ತೆಯಲ್ಲಿ ತಿರುಗಾಡುತ್ತಿರುವ ಬೈಕ್‌ ಸವಾರರನ್ನು ತಡೆದು ಬೈಕ್‌ಗಳನ್ನು ಸೀಜ್ ಮಾಡಿ ದಂಡ ವಿಧಿಸುತ್ತಿದ್ದಾರೆ
  • ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದರು ಕೂಡ ಸಾರ್ವಜನಿಕರು ಬೇಕಾ ಬಿಟ್ಟಿ ರಸ್ತೆಯಲ್ಲಿ ತಿರುಗಾಡುತ್ತಿದ್ದಾರೆ

ರಾಯಚೂರು: ದಿನದಿಂದ ದಿನಕ್ಕೆ ಕೊರೊನಾ ಮತ್ತು ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ಸರಕಾರ ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದರು ಕೂಡ ಸಾರ್ವಜನಿಕರು ಬೇಕಾ ಬಿಟ್ಟಿ ರಸ್ತೆಯಲ್ಲಿ ತಿರುಗಾಡುತ್ತಿದ್ದು, ರಾಯಚೂರು ನಗರದಲ್ಲಿ ಲಾಕ್‌ಡೌನ್‌ ಆಟಕ್ಕುಂಟು ಲೆಕ್ಕಕಿಲ್ಲ ಎನ್ನುವಂತಾಗಿದೆ.

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪೋಲಿಸರು ಬೇಕಾ ಬಿಟ್ಟಿಯಾಗಿ ರಸ್ತೆಯಲ್ಲಿ ತಿರುಗಾಡುತ್ತಿರುವ ಬೈಕ್‌ ಸವಾರರನ್ನು ತಡೆದು ಬೈಕ್‌ಗಳನ್ನು ಸೀಜ್ ಮಾಡಿ ದಂಡ ವಿಧಿಸುತ್ತಿದ್ದಾರೆ. ಇನ್ನು, ಕೆಲವರು ಆಸ್ಪತ್ರೆಗೆ ಹೋಗುತ್ತಿದ್ದೇವೆ ಎಂದು ಚೀಟಿಗಳನ್ನು ತೋರಿಸುತ್ತಿದ್ದಾರೆ. ಇನ್ನು ಮಾಸ್ಕ್‌ ಧರಿಸದೇ ಮಹಿಳೆಯರು ರಸ್ತೆಯಲ್ಲಿ ತಿರುಗಾಡುತ್ತಿದ್ದು, ಅವರನ್ನು ಪೊಲೀಸರು ಪ್ರಶ್ನಿಸಿದರೆ ದೇವಸ್ಥಾನಕ್ಕೆ ಹೋಗಿದ್ವಿ ಎಂದು ನೆಪ ಹೇಳುತ್ತಿರುವುದು ಕಂಡುಬಂತು.
ಮೈಸೂರಲ್ಲಿ ವೀಕೆಂಡ್ ಕರ್ಫ್ಯೂ : ನಗರದಲ್ಲಿ ಖಾಕಿ ನಾಕಾಬಂದಿ , ಫೀಲ್ಡ್ ಗಿಳಿದ ಡಿಸಿಪಿ ಗೀತಾ ಪ್ರಸನ್ನ
ಇನ್ನು, ಕೆಲವು ಕಡೆ ಬೇಕಾ ಬಿಟ್ಟಿಯಾಗಿ ತಿರುಗಾಡುತ್ತಿರುವವರ ವಾಹನದ ಬೀಗವನ್ನು ಕಸಿದುಕೊಂಡು ಪೊಲೀಸರ ಜೊತೆ ಸಾರ್ವಜನಿಕರು ವಾಗ್ವಾದ ನಡೆಸಿದರು. ಇನ್ನು, ಕೆಲವರು ಕಳೆದ ಲಾಕ್‌ಡೌನ್‌ನಲ್ಲಿ ವಿತರಿಸಿದ ಪಾಸನ್ನು ಈ ಬಾರಿ ತೋರಿಸಿಕೊಂಡು ಹೋಗಲು ಪ್ರಯತ್ನಿಸಿದರು. ಡಿವೈಎಸ್ಪಿ ಶಿವನಗೌಡ, ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಬಿ.ನಿಖಿಲ್ ರಸ್ತೆಗಿಳಿದು ವಾಹನಗಳನ್ನು ಪರಿಶೀಲಿಸಿದರು.
ಕೋವಿಡ್‌ ಸೋಂಕು ಹೆಚ್ಚಿದರೂ ಆತಂಕ ಬೇಡ : ಯಾಕೆ ಗೊತ್ತಾ? ಇಲ್ಲಿದೆ ವಿವರ
ದಿನಸಿ ಅಂಗಡಿಗಳು, ತರಕಾರಿ ವ್ಯಾಪಾರ, ಹೂ, ಹಣ್ಣು ಹೋಟೆಲ್‌ಗಳು ಓಪನ್ ಆಗಿದ್ದರೂ ಕೂಡ ಗ್ರಾಹಕರಿಲ್ಲದೆ ವ್ಯಾಪಾರ ನಷ್ಟವಾಗಿದೆ ಎಂದು ದಿನಸಿ ಅಂಗಡಿ ಮಾಲೀಕರು ತಮ್ಮ ಅಳಲನ್ನು ತೋಡಿಕೊಂಡರು. ನಗರದ ಪ್ರತಿಯೊಂದು ವೃತ್ತದಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ವಾಹನ ಪರಿಶೀಲಿಸಿದರು. ಬಸ್‌ ನಿಲ್ದಾಣಗಳು ಪ್ರಯಾಣಿಕರಿಲ್ಲದೇ ಬಣಗುಡುತ್ತಿದ್ದವು.

ಸಮೀಪದ ನಗರಗಳ ಸುದ್ದಿ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ

Web Title : weekend curfew violation in raichur
Kannada News from Vijaya Karnataka, TIL Network



Read more

[wpas_products keywords=”deal of the day sale today offer all”]