Karnataka news paper

ಮೇಕೆದಾಟು ಪಾದಯಾತ್ರೆ: ಅನಗತ್ಯ ಗೊಂದಲ ಸೃಷ್ಟಿಸಲು ನಿಷೇಧಾಜ್ಞೆ ಜಾರಿ! ಸಿದ್ದರಾಮಯ್ಯ ಆರೋಪ


ಹೈಲೈಟ್ಸ್‌:

  • ಮೇಕೆದಾಟು ಪಾದಯಾತ್ರೆ ವಿಚಾರವಾಗಿ ರಾಜ್ಯ ಸರ್ಕಾರ ಅನಗತ್ಯ ಗೊಂದಲ ಸೃಷ್ಟಿ
  • ನಿಷೇಧಾಜ್ಞೆಯನ್ನು ರಾಮನಗರದಲ್ಲಿ ಜಾರಿಗೊಳಿಸಿದ್ದು ಏಕೆ?
  • ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ

ಬೆಂಗಳೂರು:ಮೇಕೆದಾಟು ಪಾದಯಾತ್ರೆ ಹಿನ್ನೆಲೆಯಲ್ಲಿ ಅನಗತ್ಯ ಗೊಂದಲ ಸೃಷ್ಟಿಸಲು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಪಾದಯಾತ್ರೆ ಸಂದರ್ಭದಲ್ಲಿ ನಾವು ಕೊರೊನಾ ನಿಯಮ‌ ಪಾಲಿಸುತ್ತೇವೆ. ಅರೆಸ್ಟ್ ಮಾಡೋದಾದ್ರೆ ಮಾಡಲಿ ಎಂದರು. ಸರ್ಕಾರ ನಮ್ಮ ಪಾದಯಾತ್ರೆ ನಿಲ್ಲಿಸಲು ಸರ್ಕಾರ ಪ್ಲಾನ್ ಮಾಡಿದೆ. ಇಂದು ಸರ್ಕಾರ ಸುಳ್ಳು ಜಾಹೀರಾತು ನೀಡಿದೆ. 2015 ರವರೆಗೆ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ‌ಇತ್ತು. 2015 ರ ಫೆಬ್ರವರಿ ಯಲ್ಲಿ ಕೋರ್ಟ್ ಆದೇಶ ಬಂದಿದೆ. ಕೋರ್ಟ್ ಆದೇಶ ಬಂದ ಬಳಿಕ ನಾವು ಡಿಪಿಎಆರ್ ಮಾಡಿದ್ದೆವು ಎಂದು ವಿವರಣೆ ನೀಡಿದರು.

ಮೇಕೆದಾಟು ಪಾದಯಾತ್ರೆ ಗೊಂದಲ; ಶಾಸಕರು, ಕೈ ಮುಖಂಡರ ಜೊತೆ ಡಿಕೆಶಿ ಸಭೆ

2008 ರಿಂದ ಗೋವಿಂದ ಕಾರಜೋಳ ಮಂತ್ರಿ ಆಗಿದ್ದರು. ಬೊಮ್ಮಾಯಿ ನೀರಾವರಿ ಸಚಿವರಾಗಿದ್ದರು. ಅವರು ಎನು ಮಾಡಿದ್ರು..? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಆದರೆ ಇದೀಗ ಅನಗತ್ಯ ಗೊಂದಲ ಮಾಡುವ ಉದ್ದೇಶದಿಂದ ಸರ್ಕಾರ ನಿಷೇಧಾಜ್ಞೆ ಹಾಕಿದೆ. ನಾವು ಹದಿನೈದು ಜನ ಪಾದಯಾತ್ರೆ ಮಾಡಿದ್ರೆ ಬಿಡ್ತೇವೆ ಅಂತ ಕಾರಜೋಳ ಹೇಳ್ತಾರೆ. ಹದಿನೈದು ಜನ ನಡೆದರೆ ಅದು 144 ಕಲಂ ಉಲ್ಲಂಘನೆ ಅಲ್ವಾ..? ಎಂದು ಗರಂ ಆದರು.

ನಾವು ನಿಯಮದ ಪ್ರಕಾರ ಪಾದಯಾತ್ರೆ ಮಾಡ್ತೇವೆ. ಎಲ್ಲೂ ಇಲ್ಲದ 144 ಕಲಂ ರಾಮನಗರಕ್ಕೆ ಯಾಕೆ..? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಮೇಕೆದಾಟು ಯೋಜನೆ ಜಾರಿ ಆಗ್ರಹಿಸಿ ಕಾಂಗ್ರೆಸ್ ಜನವರಿ 9 ರಿಂದ ಪಾದಯಾತ್ರೆ ಹಮ್ಮಿಕೊಂಡಿದೆ. ಆದರೆ ವೀಕೆಂಡ್ ಕರ್ಫ್ಯೂ, ಕೋವಿಡ್ ನಿರ್ಬಂಧಗಳ ಕಾರಣಕ್ಕಾಗಿ ಪಾದಯಾತ್ರೆ ಹಮ್ಮಿಕೊಳ್ಳದಂತೆ ಸರ್ಕಾರ ಮನವಿ ಮಾಡಿದೆ. ಆದರೆ ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸುವುದಿಲ್ಲ ಎಂದು ಕಾಂಗ್ರೆಸ್ ಪಟ್ಟು ಹಿಡಿದಿದೆ.



Read more

[wpas_products keywords=”deal of the day sale today offer all”]