ಬೆಂಗಳೂರು: ರಾಜ್ಯಾದ್ಯಂತ ಕಳೆದ ವರ್ಷ ಲಸಿಕಾಭಿಯಾನದ ಭಾಗವಾಗಿ ಖಾಸಗಿ ಆಸ್ಪತ್ರೆಗಳು ಖರೀದಿಸಿದ್ದ ಲಸಿಕೆಗಳಲ್ಲಿ 5 ಲಕ್ಷ ಡೋಸ್‌ಗಳು ಬಾಕಿ ಉಳಿದಿದ್ದು, ಇವುಗಳ ವಯಲ್‌ಗಳ ಮೇಲಿನ ಅವಧಿ ಮುಕ್ತಾಯದ ಹಿನ್ನೆಲೆ ಚೆಲ್ಲಬೇಕಾದ ಆತಂಕ ಸೃಷ್ಟಿಯಾಗಿತ್ತು. ಆದರೆ, ಕೇಂದ್ರ ಸರಕಾರ ಲಸಿಕೆಗಳನ್ನು ತಯಾರಾದ ದಿನದಿಂದ 1 ವರ್ಷದವರೆಗೆ ಬಳಸಬಹುದೆನ್ನುವ ಆದೇಶದ ಹಿನ್ನೆಲೆ ಪ್ರಸ್ತುತ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿನ ಡೋಸ್‌ಗಳ ಮೇಲಿನ ದಿನಾಂಕ ರೀಲೇಬಲಿಂಗ್ ಮಾಡಲಾಗುತ್ತಿದೆ.
2ನೇ ಅಲೆಯ ಆರಂಭಿಕವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಾಲನೆಗೊಂಡ ಲಸಿಕಾಭಿಯಾನಕ್ಕೆ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ಕೋವಾಕ್ಸಿನ್ ಖರೀದಿಸಿದ್ದವು. ಆರಂಭಿಕವಾಗಿ ಖಾಸಗಿ ವಲಯದಲ್ಲಿ ಲಸಿಕೆಗೆ ಬೇಡಿಕೆ ಸೃಷ್ಟಿಯಾದರೂ, ಆ ಬಳಿಕ ಕ್ರಮೇಣ ಜನರು ಸರಕಾರಿ ವಲಯದಲ್ಲಿನ ಉಚಿತ ಲಸಿಕೆಯತ್ತ ಮುಖ ಮಾಡಿದರು, ಹೀಗಾಗಿ, ಖಾಸಗಿ ಆಸ್ಪತ್ರೆಗಳಲ್ಲಿ ಬಾಕಿ ಉಳಿದಿದ್ದ ಕೋವಾಕ್ಸಿನ್ ಡೋಸ್‌ಗಳು ನವೆಂಬರ್, ಡಿಸೆಂಬರ್ ವೇಳೆಗೆ ದಿನಾಂಕ ಮುಕ್ತಾಯಗೊಂಡಿತ್ತು. ಕೇಂದ್ರ ಸರಕಾರ ಲಸಿಕೆ ಸಿದ್ಧವಾಗಿ ವರ್ಷದವರೆಗೆ ಡೋಸ್ ನೀಡಬಹುದೆನ್ನುವ ಆದೇಶದ ನಡುವೆ ರಾಜ್ಯದಲ್ಲಿ ವಯಲ್ ಮೇಲಿನ ದಿನಾಂಕದ ಬಳಿಕ ಬಳಸುವಂತಿಲ್ಲ ಎನ್ನುವ ಸುತ್ತೋಲೆಯನ್ನು ನೀಡಲಾಯಿತು. ಪ್ರಸ್ತುತ, ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಖಾಸಗಿ ಆಸ್ಪತ್ರೆಗಳ ಮನವಿಗೆ ಸ್ಪಂದಿಸಿದ್ದು, ಲಸಿಕೆ ವಯಲ್‌ಗಳ ಮೇಲಿನ ದಿನಾಂಕ ರೀಲೇಬಲಿಂಗ್‌ಗೆ ಅವಕಾಶ ಮಾಡಿಕೊಟ್ಟಿದೆ.
ಶೀಘ್ರ ಬಳಕೆ
ಕಳೆದ ಬಾರಿ ಜನರ ಬೇಡಿಕೆ ಕುಸಿತದಿಂದಾಗಿ ಸಂಗ್ರಹದಲ್ಲಿ ಬಾಕಿ ಉಳಿಸಿಕೊಂಡಿದ್ದ ಲಸಿಕೆಗಳನ್ನು ಈ ಬಾರಿ 3ನೇ ಡೋಸ್ ನೀಡಲು ಅನುಮತಿ ಸಿಕ್ಕ ವೇಳೆ ಬಳಸಲು ಖಾಸಗಿ ಆಸ್ಪತ್ರೆಗಳು ಸಜ್ಜಾಗಿವೆ. ಸದ್ಯ, ಕೇಂದ್ರ ಸರಕಾರ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಸೇರಿದಂತೆ ಹಿರಿಯ ನಾಗರಿಕರಿಗೆ ಜ.10ರ ಬಳಿಕ 3ನೇ ಡೋಸ್ ನೀಡುವ ಉದ್ದೇಶ ಹೊಂದಿದ್ದು, ಈ ವೇಳೆ ರೀಲೇಬಲ್ಡ್ ಕೋವಾಕ್ಸಿನ್‌ಗಳನ್ನು ಬಳಸಲು ಉದ್ದೇಶಿಸಲಾಗಿದೆ.
ರಾಜ್ಯಾದ್ಯಂತ 5ಲಕ್ಷ ಡೋಸ್ ಕೋವಾಕ್ಸಿನ್ ಮೇಲಿನ ದಿನಾಂಕ ವಿಸ್ತರಣೆಗೆ ಅವಕಾಶ ಮಾಡಿಕೊಡುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದ್ದು, 6 ತಿಂಗಳ ವಿಸ್ತರಣೆಗೆ ಔಷಧ ನಿಯಂತ್ರಣ ಮಂಡಳಿಯಿಂದ ಅವಕಾಶ ಸಿಕ್ಕಿದೆ. ಹೀಗಾಗಿ, ನಮ್ಮಲ್ಲಿನ ವಾಕ್ಸಿನ್‌ಗಳನ್ನು ರೀಲೇಬಲಿಂಗ್‌ಗೆ ಕಳಿಸಲಾಗಿದೆ.
ಡಾ.ಪ್ರಸನ್ನ, ಅಧ್ಯಕ್ಷರು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ಸ್ ಒಕ್ಕೂಟ(ಘನಾ).
Read more
[wpas_products keywords=”deal of the day sale today offer all”]