Karnataka news paper

ರಾಕಿಂಗ್‌ ಸ್ಟಾರ್‌ ಯಶ್‌ ಜನ್ಮದಿನ: ರವೀನಾ ಟಂಡನ್‌ ಸೇರಿದಂತೆ ಗಣ್ಯರ ಶುಭಾಶಯ


36ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ರಾಕಿಂಗ್‌ ಸ್ಟಾರ್‌ ಯಶ್‌ ಅವರಿಗೆ ಶುಭಾಶಯಗಳು ಹರಿದುಬರುತ್ತಿವೆ. 

ಕೆಜಿಎಫ್‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಾಲಿವುಡ್‌ ನಟಿ ರವೀನಾ ಟಂಡನ್‌, ನಿರ್ದೇಶಕ ಪ್ರಶಾಂತ್‌ ನೀಲ್ ಸೇರಿದಂತೆ ಹಲವು ಗಣ್ಯರು ಯಶ್‌ಗೆ ಶುಭಾಶಯ ಕೋರಿದ್ದಾರೆ.

ಯಶ್‌ ಜೊತೆಗಿನ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ರವೀನಾ, ‘ಜನ್ಮದಿನದ ಶುಭಾಶಯಗಳು ಪ್ರಿಯ ಯಶ್‌. ನಮ್ಮೆಲ್ಲರ ಶುಭಾಶಯಗಳಿಂದ ನಿಮಗೆ ರಾಕಿಂಗ್ ವರ್ಷ ಬರಲಿ’ ಎಂದು ಹಾರೈಸಿದ್ದಾರೆ. #KGFChapter2 ಹ್ಯಾಶ್‌ಟ್ಯಾಗ್‌ ಬಳಸಿ ಟ್ವೀಟಿಸಿದ್ದಾರೆ. 

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಹ ಯಶ್‌ಗೆ ಶುಭಾಶಯಗಳನ್ನು ಕೋರಿದ್ದಾರೆ. ಕೆಜಿಎಫ್ ಚಾಫ್ಟರ್ 2 ಸಿನಿಮಾದ ವಿಶೇಷ ಪೋಸ್ಟರ್ ಅನ್ನು ಯಶ್‌ಗೆ ಅರ್ಪಿಸಿ ಟ್ವೀಟ್‌ ಮಾಡಿದ್ದಾರೆ.

ಕೆಜಿಎಫ್‌ ನಿರ್ಮಾಪಕ ವಿಜಯ್‌ ಕಿರಗಂದೂರು, ನಿರ್ದೇಶಕರಾದ ಸುನಿ, ತರುಣ್‌ ಸುದೀರ್, ಸಚಿವರಾದ ಡಾ. ಅಶ್ವತ್ಥನಾರಾಯಣ, ಬಿ.ಸಿ. ಪಾಟೀಲ್‌, ಮುನಿರತ್ನ  ಸೇರಿದಂತೆ ಹಲವು ಗಣ್ಯರು ಹಾಗೂ ಅಭಿಮಾನಿಗಳು ಯಶ್‌ಗೆ ಶುಭ ಹಾರೈಸಿದ್ದಾರೆ.



Read More…Source link

[wpas_products keywords=”deal of the day party wear for men wedding shirt”]