2021 ರಲ್ಲಿ ಕೋವಿಡ್ ಭೀತಿಯ ನಡುವೆಯೂ ಚಿತ್ರರಂಗದಲ್ಲಿ ಹಲವು ಸಿನಿಮಾಗಳು ಸಖತ್ ಸದ್ದು ಮಾಡಿದವು. ಇನ್ನೂ ಇದೇ ವರ್ಷ ಅನೇಕ ತಾರೆಯರು ಕೂಡ ದಾಂಪತ್ಯ ಜೀವನಕ್ಕೆ ನಾಂದಿ ಹಾಡಿ ಸುದ್ದಿಯಾದರು. ಅದರಲ್ಲೂ ಕನ್ನಡ ಕಿರುತೆರೆ ಲೋಕದ ಅನೇಕ ತಾರೆಯರು ಈ ವರ್ಷ ವೈವಾಹಿಕ ಬದುಕಿಗೆ ಕಾಲಿಟ್ಟರು.
ನಟ ಚಂದನ್ ಕುಮಾರ್ ಹಾಗೂ ಕವಿತಾ ಗೌಡ, ನಟಿ ಕಾವ್ಯ ಗೌಡ ಮತ್ತು ಸೋಮಶೇಖರ್, ನಟಿ ಆಶಿತಾ ಚಂದ್ರಪ್ಪ ಹಾಗೂ ರೋಹನ್ ರಾಘವೇಂದ್ರ, ನಟಿ ಪ್ರಿಯಾಂಕಾ ಚಿಂಚೋಳಿ ಹಾಗೂ ರಾಕೇಶ್, ನಟ ದೀಪಕ್ ಮಹಾದೇವ್ ಹಾಗೂ ಚಂದನಾ ಮಹಾಲಿಂಗಯ್ಯ, ನಟಿ ಆಶಿಕಾ ಪಡುಕೋಣೆ ಹಾಗೂ ಚೇತನ್ ಶೆಟ್ಟಿ ಸೇರಿದಂತೆ ಹಲವು ಕನ್ನಡ ಕಿರುತೆರೆ ಕಲಾವಿದರು 2021ರಲ್ಲಿ ಹೊಸ ಜೀವನಕ್ಕೆ ಪದಾರ್ಪಣೆ ಮಾಡಿದರು. 2021ರಲ್ಲಿ ಸಪ್ತಪದಿ ತುಳಿದ ಕನ್ನಡ ಕಿರುತೆರೆ ತಾರೆಯರ ಪಟ್ಟಿ ಇಲ್ಲಿದೆ ನೋಡಿ….
ಚಂದನ್ ಕುಮಾರ್ – ಕವಿತಾ ಗೌಡ

ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ನಟ ಚಂದನ್ ಕುಮಾರ್ ಹಾಗೂ ನಟಿ ಕವಿತಾ ಗೌಡ ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೋವಿಡ್ ಲಾಕ್‌ಡೌನ್ ಮಧ್ಯೆಯೂ ಈ ವರ್ಷದ ಮೇ ತಿಂಗಳಿನಲ್ಲಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್ ವಿವಾಹವಾದರು. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್ ಸಪ್ತಪದಿ ತುಳಿದರು.
ಕಾವ್ಯ ಗೌಡ – ಸೋಮಶೇಖರ್

ಈ ವರ್ಷ ಅದ್ಧೂರಿಯಾಗಿ ಮದುವೆಯಾದ ಜೋಡಿಗಳ ಪೈಕಿ ಕಾವ್ಯ ಗೌಡ ಹಾಗೂ ಸೋಮಶೇಖರ್ ಕೂಡ ಒಬ್ಬರು. ಡಿಸೆಂಬರ್ ತಿಂಗಳಿನಲ್ಲಿ ಐಷಾರಾಮಿ ಪ್ರದೇಶದಲ್ಲಿ ನಟಿ ಕಾವ್ಯ ಗೌಡ ಹಾಗೂ ಸೋಮಶೇಖರ್ ವಿವಾಹ ಮಹೋತ್ಸವ ಗ್ರ್ಯಾಂಡ್ ಆಗಿ ಜರುಗಿತು. ಅಂದ್ಹಾಗೆ, ಇವರಿಬ್ಬರದ್ದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಕುಟುಂಬಸ್ಥರ ಇಚ್ಛೆಯಂತೆ ಸಾಂಪ್ರದಾಯಿಕವಾಗಿ ನಟಿ ಕಾವ್ಯ ಗೌಡ ಹಾಗೂ ಸೋಮಶೇಖರ್ ವಿವಾಹವಾದರು.
ಅದ್ದೂರಿಯಾಗಿ ನಡೆದ ಧಾರಾವಾಹಿ ನಟಿ ಕಾವ್ಯಾ ಗೌಡ ಮದುವೆಯಲ್ಲಿ ಸೆಲೆಬ್ರಿಟಿಗಳು!
ಆಶಿತಾ ಚಂದ್ರಪ್ಪ – ರೋಹನ್ ರಾಘವೇಂದ್ರ

‘ರಾಧಾ ರಮಣ’ ಸೀರಿಯಲ್ ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಹಾಗೂ ‘ಬಿಗ್ ಬಾಸ್’ ಶೋನಲ್ಲೂ ಸ್ಪರ್ಧಿಸಿದ್ದ ಆಶಿತಾ ಚಂದ್ರಪ್ಪ ಈ ವರ್ಷ ಹೊಸ ಬದುಕಿಗೆ ಪದಾರ್ಪಣೆ ಮಾಡಿದರು. ಮಾರ್ಚ್ ತಿಂಗಳಿನಲ್ಲಿ ರೋಹನ್ ರಾಘವೇಂದ್ರ ಎಂಬುವರ ಜೊತೆಗೆ ಆಶಿತಾ ಚಂದ್ರಪ್ಪ ವಿವಾಹ ಮಹೋತ್ಸವ ಜರುಗಿತು. ಆಶಿತಾ ಚಂದ್ರಪ್ಪ ಮದುವೆಗೆ ಚಿತ್ರರಂಗ ಹಾಗೂ ಕಿರುತೆರೆ ಲೋಕದ ತಾರೆಯರು ಸಾಕ್ಷಿಯಾಗಿದ್ದರು.
ಪ್ರಿಯಾಂಕಾ ಚಿಂಚೋಳಿ – ರಾಕೇಶ್

ಕಿರುತೆರೆ ನಟಿ ಪ್ರಿಯಾಂಕಾ ಚಿಂಚೋಳಿ ಹಾಗೂ ಉದ್ಯಮಿ ರಾಕೇಶ್ ಕೂಡ ಇದೇ ವರ್ಷ ಮದುವೆಯಾದರು. ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್‌ವೊಂದರಲ್ಲಿ ಪ್ರಿಯಾಂಕಾ ಚಿಂಚೋಳಿ ಹಾಗೂ ರಾಕೇಶ್ ಅವರ ವಿವಾಹ ಡಿಸೆಂಬರ್ 10 ರಂದು ನಡೆಯಿತು. ಇದಕ್ಕೂ ಮುನ್ನ.. ಅಂದ್ರೆ ಆಗಸ್ಟ್ ತಿಂಗಳಿನಲ್ಲಿ ಪ್ರಿಯಾಂಕಾ ಚಿಂಚೋಳಿ ಹಾಗೂ ರಾಕೇಶ್ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು.
ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ‘ಮನಸಾರೆ’ ಧಾರಾವಾಹಿ ನಟಿ ಪ್ರಿಯಾಂಕಾ ಚಿಂಚೋಳಿ
ದೀಪಕ್ ಮಹಾದೇವ್ – ಚಂದನಾ ಮಹಾಲಿಂಗಯ್ಯ

ಕಿರುತೆರೆ ನಟ ದೀಪಕ್ ಮಹಾದೇವ್ ಹಾಗೂ ಚಂದನಾ ಮಹಾಲಿಂಗಯ್ಯ ಕೂಡ ಈ ವರ್ಷವೇ ಮದುವೆಯಾದರು. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ದೀಪಕ್ ಮಹಾದೇವ್ ಹಾಗೂ ಚಂದನಾ ಮಹಾಲಿಂಗಯ್ಯ ಅವರ ವಿವಾಹ ಸಾಂಪ್ರದಾಯಿಕವಾಗಿ ನಡೆಯಿತು.
ಕನ್ನಡ ಕಿರುತೆರೆಯ ದೀಪಕ್ ಮಹಾದೇವ್, ಚಂದನಾ ಮಹಾಲಿಂಗಯ್ಯ ಮದುವೆ ಸಂಭ್ರಮ
ಆಶಿಕಾ ಪಡುಕೋಣೆ – ಚೇತನ್ ಶೆಟ್ಟಿ

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಆಶಿಕಾ ಪಡುಕೋಣೆ ಹಾಗೂ ಚೇತನ್ ಶೆಟ್ಟಿ ವಿವಾಹ ಮಹೋತ್ಸವ ನಡೆಯಿತು. ಅಂದ್ಹಾಗೆ, ಆಶಿಕಾ ಪಡುಕೋಣೆ ಹಾಗೂ ಚೇತನ್ ಶೆಟ್ಟಿ ಅವರದ್ದು ಪಕ್ಕಾ ಅರೇಂಜ್ಡ್ ಮ್ಯಾರೇಜ್.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆಯ ಜನಪ್ರಿಯ ನಟಿ ಆಶಿಕಾ ಪಡುಕೋಣೆ
ವಿಹಾರಿಕಾ ಪೂಜಾ – ಕಿರಣ್

‘ನನ್ನರಸಿ ರಾಧೆ’ ಧಾರಾವಾಹಿ ಖ್ಯಾತಿಯ ನಟಿ ವಿಹಾರಿಕಾ ಪೂಜಾ.. ಕಿರಣ್ ಎಂಬುವರೊಂದಿಗೆ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ವಿವಾಹವಾದರು. ಹೊಸ ಜೋಡಿಗೆ ಕಿರುತೆರೆ ತಾರೆಯರು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದರು.