Karnataka news paper

ಪರಿಶೀಲನೆಗಾಗಿ ದೇವರಿಗೆ ಸಮನ್ಸ್ ನೀಡಿದ ನ್ಯಾಯಾಲಯ!: ಹೈಕೋರ್ಟ್ ಅಸಮಾಧಾನ


ಹೈಲೈಟ್ಸ್‌:

  • ವಿಗ್ರಹ ಹಾಜರುಪಡಿಸುವಂತೆ ಕುಂಬಕೋಣಂ ಕೆಳ ನ್ಯಾಯಾಲಯ ಆದೇಶ
  • ದೇವರ ಮೂರ್ತಿಯ ಕಳ್ಳತನ ಪ್ರಕರಣ ವಿಚಾರಣೆ ವೇಳೆ ಕೋರ್ಟ್ ಸೂಚನೆ
  • ದೇವರಿಗೆ ಸಮನ್ಸ್‌ ನೀಡಲು ಸಾಧ್ಯವಿಲ್ಲ ಎಂದ ಮದ್ರಾಸ್ ಹೈಕೋರ್ಟ್

ಚೆನ್ನೈ: ಪರಿಶೀಲನೆಗಾಗಿ ದೇವಸ್ಥಾನದ ಪ್ರಧಾನ ವಿಗ್ರಹವನ್ನು ಕೋರ್ಟ್ ಮುಂದೆ ಹಾಜರುಪಡಿಸುವಂತೆ ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ದೇವಸ್ಥಾನದ ಅಧಿಕಾರಿಗಳಿಗೆ ಅಧೀನ ನ್ಯಾಯಾಲಯ ನೀಡಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ.

ಕುಂಬಕೋಣಂನ ಕೆಳ ನ್ಯಾಯಾಲಯವೊಂದು, ಶಿವಿರಿಪಾಳ್ಯಂನಲ್ಲಿನ ಪರಮಶಿವನ್ ಸ್ವಾಮಿ ದೇವಸ್ಥಾನದ ಗರ್ಭಗುಡಿಯಿಂದ ಕಳುವಾದ, ಪತ್ತೆಯಾದ ಹಾಗೂ ಮರು ಪ್ರತಿಷ್ಠಾಪನೆಗೊಂಡ ಪ್ರಧಾನ ಮೂರ್ತಿಯ ಕುರಿತಾದ ಪ್ರಕರಣದ ವಿಚಾರಣೆ ವೇಳೆ ಈ ನಿರ್ದೇಶನ ನೀಡಿತ್ತು.
ಕೋವಿಡ್ ನಿರ್ಬಂಧ ಸಂವಿಧಾನ ವಿರೋಧಿ ಎಂದ ಅರ್ಜಿದಾರನಿಗೆ 1.50 ಲಕ್ಷ ರೂ ದಂಡ!
ವಿಗ್ರಹವು ಭಕ್ತರ ಪಾಲಿಗೆ ದೇವರು. ಹೀಗಾಗಿ ಆ ದೇವರ ವಿಗ್ರಹ ಅಲ್ಲಿಂದ ತೆಗೆದುಕೊಂಡು ಬಂದು ಕೋರ್ಟ್‌ನಲ್ಲಿ ಹಾಜರುಪಡಿಸಬಾರದು ಎಂದು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಆರ್ ಸುರೇಶ್ ಕುಮಾರ್ ಆದೇಶದಲ್ಲಿ ಹೇಳಿದ್ದಾರೆ. ದೇವರನ್ನು ತಪಾಸಣೆ ಅಥವಾ ಋಜುವಾತಿಗಾಗಿ ಕೋರ್ಟ್‌ನಿಂದ ಸಮನ್‌ ಮಾಡಲು ಸಾಧ್ಯವಿಲ್ಲ. ಅದು ಕ್ರಿಮಿನಲ್ ಪ್ರಕರಣದ ಸಾಕ್ಷಿ ವಸ್ತುವಲ್ಲ ಎಂದು ಹೈಕೋರ್ಟ್ ಹೇಳಿದೆ.

ಅದರ ಬದಲು, ಭಕ್ತರ ಭಾವನೆಗಳಿಗೆ ಧಕ್ಕೆ ತರದಂತೆ ಮೂರ್ತಿಯನ್ನು ಅಲ್ಲಿಂದ ತೆರವುಗೊಳಿಸದೆ ಪರಿಶೀಲಿಸಲು ಅಡ್ವೊಕೇಟ್ ಕಮಿಷನರ್ ಅವರನ್ನು ನಿಯೋಜನೆ ಮಾಡಬಹುದು. ಅಡ್ವೋಕೇಟ್ ಕಮಿಷನರ್ ವಿಸ್ತೃತವಾದ ವರದಿಯನ್ನು ಸಿದ್ಧಪಡಿಸಿ, ಅದನ್ನು ಸಂಬಂಧಿತ ಕೋರ್ಟ್‌ಗೆ ಸಲ್ಲಿಕೆ ಮಾಡಬೇಕು ಎಂದು ಕೋರ್ಟ್ ಆದೇಶಿಸಿದೆ.

ಪ್ರಕರಣದ ಪರಿಶೀಲನೆಗಾಗಿ ದೇವಸ್ಥಾನದಲ್ಲಿನ ವಿಗ್ರಹವನ್ನು ಅದರ ಪೀಠದಿಂದ ತೆರವುಗೊಳಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂಬ ಅಧೀನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಲಾಗಿತ್ತು.
ಧಾರ್ಮಿಕ ಮತಾಂತರ ವ್ಯಕ್ತಿಯ ಜಾತಿಯನ್ನು ಬದಲಿಸುವುದಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಅರ್ಜಿದಾರರ ಪ್ರಕಾರ, ಪುರಾತನ ದೇವಸ್ಥಾನದ ವಿಗ್ರಹವನ್ನು ಕಳ್ಳತನ ಮಾಡಲಾಗಿತ್ತು. ಪೊಲೀಸರು ಅದನ್ನು ಪತ್ತೆ ಹಚ್ಚಿದ್ದರು ಮತ್ತು ಸಂಬಂಧಿಸಿದ ಕೋರ್ಟ್‌ಗೆ ಹಾಜರುಪಡಿಸಿದ್ದರು. ಬಳಿಕ ಅದನ್ನು ದೇವಸ್ಥಾನದ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿತ್ತು. ನಂತರ ಅದನ್ನು ಗರ್ಭಗುಡಿಯಲ್ಲಿ ವಿಧಿ ವಿಧಾನಗಳಿಗೆ ಅನುಗುಣವಾಗಿ ಮರು ಪ್ರತಿಷ್ಠಾಪನೆ ಮಾಡಲಾಗಿತ್ತು.

ಇದೇ ಪ್ರಕರಣದ ವಿಚಾರಣೆಗಾಗಿ ದೇವರ ವಿಗ್ರಹವನ್ನು ಕೋರ್ಟ್ ಮುಂದೆ ಹಾಜರುಪಡಿಸಬೇಕು ಎಂದು ಅಧೀನ ನ್ಯಾಯಾಲಯ ಆದೇಶಿಸಿತ್ತು. ಆದೇಶಕ್ಕೆ ಅನುಗುಣವಾಗಿ ಜನವರಿ 6ರಂದು ವಿಗ್ರಹವನ್ನು ತೆರವುಗೊಳಿಸುವ ಪ್ರಯತ್ನ ನಡೆದಿತ್ತು. ಆದರೆ ಇದಕ್ಕೆ ಭಕ್ತರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಅವರಲ್ಲಿ ಒಬ್ಬರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ ಹೈಕೋರ್ಟ್, ‘ನ್ಯಾಯಾಲಯ ಹೇಳಿರುವ ಉದ್ದೇಶಕ್ಕಾಗಿ ವಿಗ್ರಹವನ್ನು ತೆರವುಗೊಳಿಸುವ ಅಗತ್ಯವಿಲ್ಲ’ ಎಂದು ನಿರ್ದೇಶನ ನೀಡಿದೆ.

madras high court



Read more

[wpas_products keywords=”deal of the day sale today offer all”]