Karnataka news paper

ಗೋಲ್ಡ್‌ಪ್ರಿಯರಿಗೆ ಗುಡ್‌ನ್ಯೂಸ್‌! ಶನಿವಾರ ಚಿನ್ನದ ಬೆಲೆಯಲ್ಲಿ ಇಳಿಕೆ; ನಿಮ್ಮ ಇಷ್ಟಮಿತ್ರರಿಗೆ ಇಂದೇ ಬಂಗಾರ ಖರೀದಿಸಿ


ಬೆಂಗಳೂರು : ಕಳೆದ ಕೆಲ ಸಮಯಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಲೇ ಬಂದಿದ್ದ ಚಿನ್ನದ ದರ, ಆಭರಣ ಪ್ರಿಯರಿಗೆ ನಿರಾಸೆ ಮೂಡಿಸಿತ್ತು. ಹೀಗಾಗಿ ಸಹಜವಾಗಿಯೇ ಬಂಗಾರ ಪ್ರಿಯರು 2022ರ ಹೊಸವರ್ಷದಲ್ಲಿ ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದರು.

ಇಂದು ಜನವರಿ 8 ಶನಿವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ ₹4,851 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರಕ್ಕೆ ₹4,865 ರೂ ನಿಗದಿಯಾಗಿದೆ.

ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ₹44,600 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹48,650 ರೂಪಾಯಿ ದಾಖಲಾಗಿದೆ.
ನಿಮ್ಮ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದೈನಂದಿನ ಬೆಲೆಯಲ್ಲಿ ವ್ಯತ್ಯಯವಾಗಿದೆಯೇ? ಇಲ್ಲಿ ಗಮನಿಸಿ
ಬೆಳ್ಳಿ ದರ
ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ ₹60,400 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹60,400 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ ₹64,500 ರೂ. ನಿಗದಿಯಾಗಿದೆ.

ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ,
ಬೆಂಗಳೂರು: ₹44,600 (22 ಕ್ಯಾರಟ್‌) – ₹48,650 (24 ಕ್ಯಾರಟ್‌)
ಚೆನ್ನೈ: ₹44,860 (22 ಕ್ಯಾರಟ್‌) – ₹48,940 (24 ಕ್ಯಾರಟ್‌)
ದಿಲ್ಲಿ: ₹46,750 (22 ಕ್ಯಾರಟ್‌) – ₹51,000 (24 ಕ್ಯಾರಟ್‌)
ಹೈದರಾಬಾದ್‌: ₹44,600 (22 ಕ್ಯಾರಟ್‌) – ₹48,650 (24 ಕ್ಯಾರಟ್‌)

ಕೋಲ್ಕತಾ: ₹46,750 (22 ಕ್ಯಾರಟ್‌) – ₹49,450 (24 ಕ್ಯಾರಟ್‌)
ಮಂಗಳೂರು: ₹44,600 (22 ಕ್ಯಾರಟ್‌) – ₹48,650 (24 ಕ್ಯಾರಟ್‌)
ಮುಂಬಯಿ: ₹46,510 (22 ಕ್ಯಾರಟ್‌) – ₹48,510 (24 ಕ್ಯಾರಟ್‌)
ಮೈಸೂರು: ₹44,600 (22 ಕ್ಯಾರಟ್‌) – ₹48,650 (24 ಕ್ಯಾರಟ್‌)

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಕೆಲವು ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದರೆ ಬೆಳ್ಳಿ ಬೆಲೆಯಲ್ಲಿಯೂ ಕೆಲವು ಕಡೆಗಳಲ್ಲಿ ಇಳಿಕೆ ಕಂಡು ಬಂದು ಉಳಿದೆಡೆ ಏಕರೂಪವಿದೆ.

ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ನಿಮ್ಮ ನಗರಗಳಲ್ಲಿ ಇಂದಿನ ದಿನ ಚಿನ್ನ ಮತ್ತು ಬೆಳಿಗೆ ಎಷ್ಟು ದರ ಇವೆ ಅನ್ನೋದನ್ನು ಇಲ್ಲಿ ನೀವು ಪ್ರತಿ ದಿನ ತಿಳಿದುಕೊಳ್ಳಬಹುದು.



Read more…

[wpas_products keywords=”deal of the day”]