ಹೈಲೈಟ್ಸ್:
- ಮೈಸೂರಲ್ಲಿ ಹೇಗಿದೆ ವೀಕೆಂಡ್ ಕರ್ಫ್ಯೂ ಬಿಸಿ
- ಖಾಕಿ ನಾಕಾಬಂದಿ , ಫೀಲ್ಡ್ ಗಿಳಿದ ಡಿಸಿಪಿ ಗೀತಾ ಪ್ರಸನ್ನ
- ಶುಕ್ರವಾರ ರಾತ್ರಿ 10ಕ್ಕೆ ಮೈಸೂರು ಸಂಪೂರ್ಣ ಸ್ತಬ್ಧ
ರಾತ್ರಿ 8 ಕ್ಕೆ ಸೈರನ್..!
ಇನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ವಾಹನಗಳಲ್ಲಿ ತೆರಳಿ ಅಂಗಡಿಗಳನ್ನ ಮುಚ್ಚಿಸಿದ್ರು. ಕೆಆರ್ ವೃತ್ತ , ಸಯ್ಯಾಜಿರಾವ್ ರಸ್ತೆ , ಇರ್ವಿನ್ ರಸ್ತೆ , ದೇವರಾಜ ಅರಸು ರಸ್ತೆ ಯಲ್ಲಿ ಸೆಕ್ಯೂರಿಟಿ ಟೈಟ್ ಆಗಿತ್ತು.ತರಕಾರಿ ಖರೀದಿಗೆ ಹಾಗೂ ಹೂವು ಹಣ್ಣು ಖರೀದಿಗೆ ಜನರು ಮುಗಿಬಿದ್ದಿದ್ದರು. ದೇವರಾಜ ಅರಸು ರಸ್ತೆಯಲ್ಲಿ ರಾತ್ರಿ 9.30 ರ ನಂತರವೂ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಬಾರ್ ಗಳ ಮುಂದೆಯೂ ಜನರ ಕ್ಯೂ ಇತ್ತು. ಪೊಲೀಸ್ ವಾಹನ ನೋಡ್ತಿದ್ದ ಹಾಗೆ ಅಂಗಡಿಗಳ ಶಟರ್ ಎಳೆಯಲಾಯ್ತು.
ಪೊಲೀಸರ ನಾಕಾಬಂದಿ..!
ಪ್ರಮುಖ ವೃತ್ತಗಳಿಗೆ ಬ್ಯಾರಿಕೇಡ್ ಅಳವಡಿಸಿ ನಾಕಾಬಂದಿ ಹಾಕಲಾಗಿತ್ತು. ಮೈಸೂರಿನ ಕೆ.ಆರ್. ಸರ್ಕಲ್, ಹಾರ್ಡಿಂಗ್ ಸರ್ಕಲ್, ಫೌಂಟೆನ್ ಸರ್ಕಲ್ ಹಾಗೂ ಇತರೆ ಸರ್ಕಲ್ ಗಳಿಗೆ ಕಟ್ಟುನಿಟ್ಟಾಗಿ ತಪಾಸಣೆ ನಡೆಸಲಾಯ್ತು. ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಯ್ತು. ಅನಗತ್ಯ ರಸ್ತೆಗಿಳಿದಿದ್ದ ಜನರಿಗೆ ಪೊಲೀಸರು ಎಚ್ಚರಿಕೆ ನೀಡಿದ್ರು. ಸೂಕ್ತ ಕಾರಣ ನೀಡದ ಸವಾರರ ಮೇಲೆ ವಿರುದ್ಧ ಕೇಸ್ ದಾಖಲಿಸಲಾಯ್ತು.
ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಶುರು: ಏನಿರುತ್ತೆ..? ಏನಿರಲ್ಲ..? ಅನಗತ್ಯವಾಗಿ ಓಡಾಡಿದರೆ ಕ್ರಿಮಿನಲ್ ಕೇಸ್..!
ಫೀಲ್ಡ್ ಗಿಳಿದ ಡಿಸಿಪಿ ಗೀತಾ ಪ್ರಸನ್ನ..!
ಇನ್ನು ನೈಟ್ ಕರ್ಫ್ಯೂ ವೇಳೆ ಖುದ್ದು ಹಿರಿಯ ಅಧಿಕಾರಿ ಡಿಸಿಪಿ ಗೀತಾ ಪ್ರಸನ್ನ ಫೀಲ್ಡ್ ಗಿಳಿದು ವಾಹನ ತಪಾಸಣೆ ನಡೆಸಿದ್ರು. ರಾತ್ರಿ 10ರ ನಂತರವೂ ರಸ್ತೆಯಲ್ಲಿ ಓಡಾಟ ನಡೆಸ್ತಿದ್ದ ಸವಾರರಿಗೆ ಕ್ಲಾಸ್ ತಗೊಂಡ್ರು. ಅನೇಕ ಮಂದಿ ಹೊರ ಊರುಗಳಿಂದ ಬರುತ್ತಿರುವ ಕಾರಣವೊಡ್ಡಿದ್ರು. ಬಂದೋಬಸ್ತ್ ಬಗ್ಗೆ ಸಿಬ್ಬಂದಿಗೆ ಸೂಚನೆ ಕೂಡ ಕೊಟ್ರು . ಹಾಗೆಯೇ ನಗರದೆಲ್ಲೆಡೆ ಭದ್ರತೆ, ಬಂದೋಬಸ್ತ್ ಬಗ್ಗೆ ರೌಂಡ್ ಹಾಕಿ ಪರಿಶೀಲನೆ ನಡೆಸಿದ್ರು.
ಸಾರ್ವಜನಿಕರ ಕುಂಟು ನೆಪ..!
ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ವೀಕೆಂಡ್ ಕರ್ಫ್ಯೂ ಜಾರಿಗೆ ತಂದಿದ್ರೂ ಸಾರ್ವಜನಿಕರು ಮಾತ್ರ ಗಂಭೀರವಾಗಿ ತೆಗೆದುಕೊಳ್ತಿಲ್ಲ. ಶುಕ್ರವಾರ ವೀಕೆಂಡ್ ಕರ್ಫ್ಯೂ ಇದ್ರೂ ರಾತ್ರಿ ಪೊಲೀಸರ ತಪಾಸಣೆ ವೇಳೆ ಅನೇಕ ಸವಾರರು ಸುಳ್ಳು ಹೇಳಿದ್ರು.ಮೆಡಿಕಲ್ ಸ್ಟೋರ್ , ಆಸ್ಪತ್ರೆ , ಸಂಬಂಧಿಕರ ಸಾವಾಗಿದೆ , ಬಸ್ ಸ್ಟ್ಯಾಂಡ್ ನಿಂದ ಮನೆಗೆ ಹೋಗ್ತಿದ್ದೇನೆ ಅನ್ನೋ ಕಾರಣಗಳನ್ನೇ ಪೊಲೀಸರೆದುರು ಹೆಚ್ಚಾಗಿ ಕೊಟ್ರು.
Read more
[wpas_products keywords=”deal of the day sale today offer all”]