ಹೈಲೈಟ್ಸ್:
- ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಲಾಗಿದ್ದು, ಒಟ್ಟು 1509 ಮನೆ ವಾಸಿಗಳಿಗೆ 3,42,36,550ರೂ. ಬಿಡುಗಡೆ ಮಾಡಲಾಗಿದೆ
- ರ್‌ಜಿಆರ್‌ಎಚ್‌ಸಿಎಲ್ ಪೋರ್ಟಲ್‌ನಲ್ಲಿ ಒಟ್ಟು 1363 ಅರ್ಜಿಗಳು ಅಲ್‌ಲೋಡ್ ಆಗಿದ್ದು, ಜಿಲ್ಲಾಧಿಕಾರಿಗಳ ಕಚೇರಿಗೆ 1081 ಅರ್ಜಿಗಳು ಸಲ್ಲಿಕೆಯಾಗಿದ್ದವು
- ಜಿಲ್ಲೆಯಲ್ಲಿ ಸಲ್ಲಿಕೆಯಾದ ಅರ್ಜಿಗಳಲ್ಲಿ ಕೆಲವು ಅರ್ಜಿಗಳನ್ನು ಹೊರತುಪಡಿಸಿ, ಬಹುತೇಕ ಎಲ್ಲರಿಗೂ ಪರಿಹಾರ ಲಭ್ಯವಾಗುತ್ತಿದೆ
ಬೆಂಗಳೂರು ಗ್ರಾಮಾಂತರ: ಜಿಲ್ಲೆಯಾದ್ಯಂತ ಕಳೆದ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಲಾಗಿದ್ದು, ಒಟ್ಟು 1509 ಮನೆ ವಾಸಿಗಳಿಗೆ 3,42,36,550ರೂ. ಬಿಡುಗಡೆ ಮಾಡಲಾಗಿದೆ. ಸ್ಲೈಕ್ಲೋನ್ ಹೊಡೆತಕ್ಕೆ ಸಿಲುಕಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯ 4 ತಾಲೂಕುಗಳಲ್ಲಿ ಕೆಲ ಮನೆಗಳಲ್ಲಿ ಗೋಡೆ ಕುಸಿತ ಪ್ರಕರಣಗಳು ವರದಿಯಾಗಿದ್ದರೆ, ಹಲವೆಡೆ ಪೂರ್ಣ ಪ್ರಮಾಣದಲ್ಲಿ ಮನೆ ಕುಸಿತವುಂಟಾಗಿತ್ತು. ಈ ಪೈಕಿ ಸರಕಾರದಿಂದ ಪರಿಹಾರ ನೀಡಲಾಗಿದ್ದು, ಸಂತ್ರಸ್ತರಿಗೆ ಅನುದಾನದ ನೆರವು ತಲುಪಿದೆ.
ಜಿಲ್ಲೆಯಲ್ಲಿ ಪರಿಹಾರಕ್ಕೆಂದು ಆರ್‌ಜಿಆರ್‌ಎಚ್‌ಸಿಎಲ್ ಪೋರ್ಟಲ್‌ನಲ್ಲಿ ಒಟ್ಟು 1363 ಅರ್ಜಿಗಳು ಅಲ್‌ಲೋಡ್ ಆಗಿದ್ದು, ಜಿಲ್ಲಾಧಿಕಾರಿಗಳ ಕಚೇರಿಗೆ 1081 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 1029 ಅರ್ಜಿಗಳು ಅನುಮೋದನೆಗೊಂಡಿದ್ದು, 52ನ್ನು ಮರುಪರಿಶೀಲನೆಗೆ ಹಿಂತಿರುಗಿಸಲಾಗಿದೆ. ಜಿಲ್ಲಾಡಳಿತದಿಂದ ಪರಿಹಾರದ ಹಣವನ್ನು ಫಲಾನುಭವಿಗಳಿಗೆ ತಲುಪಿಸಲಾಗಿದೆ. ಉಳಿದ ಅರ್ಜಿಗಳನ್ನು ಶೀಘ್ರದಲ್ಲೇ ಇತ್ಯರ್ಥಗೊಳಿಸಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಜಿಲ್ಲೆಯ ಗ್ರಾಮಾಂತರ ಪ್ರದೇಶ ಮಾತ್ರವಲ್ಲದೆ ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ನಗರಸಭೆಗಳು, ದೇವನಹಳ್ಳಿ, ವಿಜಯಪುರ ಪುರಸಭೆಗಳೊಂದಿಗೆ ಬಾಶೆಟ್ಟಿಹಳ್ಳಿ ಪಟ್ಟಣಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 204 ಅಲ್ಪ ಹಾನಿಗೊಳಗಾದ ಮನೆಗಳು, 22 ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾದ ಮನೆಗಳಿದ್ದು 226ಕ್ಕೆ ಪರಿಹಾರಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಈ ಪೈಕಿ 220ನ್ನು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಪರಿಹಾರ ಬಿಡುಗಡೆಯಾಗಿದೆ.
ಎಲ್ಲೆಲ್ಲಿ ಎಷ್ಟೆಷ್ಟು?
ತಾಲೂಕು ಹಾನಿಗೊಳಗಾದ ಮನೆ ಬಿಡುಗಡೆಯಾದ ಪರಿಹಾರ
ದೊಡ್ಡಬಳ್ಳಾಪುರ 521 95.97ಲಕ್ಷ
ದೇವನಹಳ್ಳಿ 278 86.68ಲಕ್ಷ
ಹೊಸಕೋಟೆ 426 1.29ಕೋಟಿ
ನೆಲಮಂಗಲ 215 30.45ಲಕ್ಷ
ಒಟ್ಟು 1509 3.42ಕೋಟಿ
ಮಳೆಯಿಂದಾದ ಇತರೆ ನಷ್ಟ
ಜಿಲ್ಲೆಯಾದ್ಯಂತ ಕಂದಾಯ ಇಲಾಖೆಯಡಿ ಮಳೆಯಿಂದಾದ ನಷ್ಟಕ್ಕೆಂದು ಪ್ರತ್ಯೇಕ ಸಮಿತಿಯಿಂದ ವರದಿ ಸಿದ್ಧಪಡಿಸಲಾಗಿದ್ದು, ಈ ಪೈಕಿ ಅಲ್ಪಪ್ರಮಾಣದ ಹಾನಿಗೊಳಗಾದ ಮನೆಗಳು, ಪೂರ್ಣಪ್ರಮಾಣದ ಹಾನಿಗೊಳಗಾದ ಮನೆಗಳು, ರಸ್ತೆ, ಸೇತುವೆಗಳ ವಿವರ, ಪರಿಹಾರದ ಅಂದಾಜು ಮೊತ್ತವನ್ನು ನೀಡಲಾಗಿತ್ತು. ಜತೆಗೆ, ನಿವಾಸಿಗಳಿಂದ ಮನೆ ಕುಸಿತಕ್ಕೆ ಸಂಬಂಧಿಸಿದಂತೆ ಪರಿಹಾರಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಜಿಲ್ಲೆಯಲ್ಲಿ ಸಲ್ಲಿಕೆಯಾದ ಅರ್ಜಿಗಳಲ್ಲಿ ಕೆಲವು ಅರ್ಜಿಗಳನ್ನು ಹೊರತುಪಡಿಸಿ, ಬಹುತೇಕ ಎಲ್ಲರಿಗೂ ಪರಿಹಾರ ಲಭ್ಯವಾಗುತ್ತಿದೆ. ಜಿಲ್ಲೆಯಾದ್ಯಂತ ಸುರಿದ ಮಳೆಯಿಂದಾಗಿ ಕೇವಲ ಮನೆಗಳು ಮಾತ್ರವಲ್ಲದೆ 141.36ಕಿಮೀ ರಸ್ತೆ ಹಾಳಾಗಿದ್ದು, 668.90ಲಕ್ಷ ರೂ. ನಷ್ಟವಾಗಿದೆ ಎಂದು ಜಂಟಿ ಸಮಿತಿ ವರದಿ ನೀಡಿತ್ತು. ಜತೆಗೆ, ಜಿಲ್ಲೆಯಾದ್ಯಂತ 10 ಸೇತುವೆಗಳು ಹಾನಿಗೊಳಗಾಗಿದ್ದು, 104.5ಲಕ್ಷ ರೂ. ನಷ್ಟವಾಗಿತ್ತೆಂದು ವರದಿಯಲ್ಲಿ ತಿಳಿಸಿದೆ.
ಪ್ರಮುಖಾಂಶಗಳು
ಜಿಲ್ಲೆಯಲ್ಲಿ ಒಟ್ಟು ಹಾನಿಗೊಳಗಾದ ಮನೆಗಳು 1509
ಪರಿಹಾರಕ್ಕೆ ಸಲ್ಲಿಕೆಯಾದ ಅರ್ಜಿ 1081
ಅನುಮೋದಿತ ಅರ್ಜಿ ಸಂಖ್ಯೆ 1029
ಪರಿಶೀಲನೆಯಲ್ಲಿರುವ ಅರ್ಜಿ 52
ಬಿಡುಗಡೆಯಾದ ಒಟ್ಟು ಮೊತ್ತ 3,42,36,550ರೂ.
ಜಿಲ್ಲೆಯಾದ್ಯಂತ ಮಳೆ ಹಾನಿಗೊಳಗಾಗಿದ್ದ ಮನೆಗಳ ವಾಸಿಗಳಿಗೆ ಪರಿಹಾರವನ್ನು ಬಿಡುಗಡೆ ಮಾಡಲಾಗಿದ್ದು, ಒಟ್ಟು 3.42ಕೋಟಿ ಹಣವನ್ನು ನೀಡಲಾಗಿದೆ.
ಕೆ. ಶ್ರೀನಿವಾಸ್, ಜಿಲ್ಲಾಧಿಕಾರಿ
Read more
[wpas_products keywords=”deal of the day sale today offer all”]