Karnataka news paper

ಸಿರಿಗೆರೆಯಲ್ಲಿ ಮದುವೆ ವಾರ್ಷಿಕೋತ್ಸವದಂದೇ ಪತ್ನಿಯ ಕಗ್ಗೊಲೆ : ಮಂಚದ ಕೆಳಗೆ ಹೆಣ ಹೂತಿಟ್ಟ ಗಂಡ


ಹೈಲೈಟ್ಸ್‌:

  • ಮದುವೆ ವಾರ್ಷಿಕೋತ್ಸವ ದಿನವೇ ಪತ್ನಿ ಮರ್ಡರ್‌
  • ಮಂಚದ ಕೆಳಗೆ ಹೆಣ ಹೂತಿಟ್ಟು ಹೈಡ್ರಾಮ
  • ಮಗ ಕೊಟ್ಟ ಸುಳಿವಿನಿಂದ ಸಿಕ್ಕಿಬಿದ್ದ ಕೊಲೆಗಾರ ಗಂಡ

ಸುನೀಲ್‌ಕುಮಾರ್‌ ಸಿರಿಗೆರೆ
ಚಿತ್ರದುರ್ಗ :
ಕುಡಿತ, ಜೂಜಿನ ಚಟ ಅಂಟಿಸಿಕೊಂಡಿದ್ದ ವ್ಯಕ್ತಿಯೊಬ್ಬ ವಿವಾಹ ವಾರ್ಷಿಕೋತ್ಸವ ದಿನದಂದೆ ಹೆಂಡತಿಯನ್ನು ಕೊಂದು ಮಂಚದ ಕೆಳಗೆ ಹೂತುಹಾಕಿದ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಚಿತ್ರದುರ್ಗ ಜಿಲ್ಲೆ ಸಿರಿಗೆರೆ ಹೋಬಳಿಯ ಕೋಣನೂರು ಗ್ರಾಮದಲ್ಲಿ ನಡೆದ ಘಟನೆ ಇದು.

ಕೋಣನೂರು ಗ್ರಾಮದ ನಾರಪ್ಪ(40) ಎಂಬಾತ ವಿಜಯ ನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಬೆಣ್ಣೆಹಳ್ಳಿ ಗ್ರಾಮದ ಸುಮಾ(26)ರನ್ನು ಆರು ವರ್ಷದ ಹಿಂದೆ ಮದುವೆಯಾಗಿದ್ದ. ಮದ್ಯ ವ್ಯಸನಿಯಾಗಿದ್ದ ನಾರಪ್ಪ ನಿತ್ಯವೂ ತನ್ನ ಹೆಂಡತಿಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸಿಸುವುದು, ತವರು ಮನೆಯಿಂದ ವರದಕ್ಷಿಣೆ ತರಲು ಒತ್ತಾಯ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ಡಿಸೆಂಬರ್‌ 25ರ ರಾತ್ರಿ ಸುಮಾ ಮತ್ತು ನಾರಪ್ಪ ನಡುವೆ ಗಲಾಟೆ ನಡೆಯುತ್ತದೆ. ಈ ಸಂದರ್ಭದಲ್ಲಿ ನಾರಪ್ಪ ಹೆಂಡತಿ ಮೇಲೆ ಹಲ್ಲೆ ಮಾಡಿರುವುದರಿಂದ ಸ್ಥಳದಲ್ಲಿಯೇ ಮೃತರಾಗುತ್ತಾರೆ. ಆ ರಾತ್ರಿಯೇ ಮಂಚದ ಕೆಳಗೆ ಇದ್ದ ಕಡಪದ ಕಲ್ಲಿನ ನೆಲವನ್ನು ಅಗೆದು ಗುಂಡಿಯಲ್ಲಿ ಹೆಂಡತಿ ಶವ ಇಟ್ಟು ಸಮಾಧಿ ಮಾಡಿದ್ದಾನೆ.

ಬೆಂಗಳೂರಿನ ಅರ್ಚನಾ ರೆಡ್ಡಿ ಕೊಲೆ ಕೇಸ್‌ಗೆ ರೋಚಕ ಟ್ವಿಸ್ಟ್..! ಅಮ್ಮನ ಹತ್ಯೆಗೆ ಮಗಳಿಂದಲೇ ಸುಪಾರಿ..!

ಹೆಂಡತಿ ನಾಪತ್ತೆ ದೂರು!
ಹೆಂಡತಿಯನ್ನು ತಾನೇ ಕೊಲೆ ಮಾಡಿದ್ದ ನಾರಪ್ಪ ಡಿ. 28ರಂದು ಪತ್ನಿ ತವರು ಮನೆಗೆ ಕರೆ ಮಾಡಿ ಹೆಂಡತಿ ಕಾಣೆಯಾಗಿದ್ದಾಳೆ ಎಂದು ತಿಳಿಸುತ್ತಾನೆ. ಈ ಮಧ್ಯೆ ಎರಡು ಬಾರಿ ಬೆಣ್ಣೆಹಳ್ಳಿಗೆ ಆರೋಪಿ ಹೋಗಿಬಂದಿದ್ದರೂ ಪತ್ನಿ ಕಾಣೆಯಾಗಿರುವ ವಿಷಯವನ್ನು ಬಹಿರಂಗಪಡಿಸದೇ ಮುಚ್ಚಿಹಾಕಿರುತ್ತಾನೆ.

ಬಳಿಕ ತನ್ನ ಮಾವನ ಜತೆ ಹೋಗಿ ಸುಮಾ ನಾಪತ್ತೆಯಾಗಿದ್ದಾಳೆ ಎಂದು ಹೇಳಿ ಭರಮಸಾಗರ ಠಾಣೆಗೆ ಮಾವನ ಜತೆಗೆ ಬಂದು ದೂರು ದಾಖಲಿಸುತ್ತಾನೆ. ತವರು ದಂಪತಿಯ ಐದು ವರ್ಷದ ಮಗುವನ್ನು ತಮ್ಮ ಬಳಿ ಇಟ್ಟುಕೊಂಡು ಒಂದೆರಡು ಸಮೀಪದ ಕೆರೆ ಬಾವಿಗಳನ್ನು ಸುತ್ತಿ ಮಗಳಿಗಾಗಿ ಹುಡುಕಾಟ ನಡೆಸುತ್ತಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮನೆ ಪರಿಶೀಲನೆಗೆ ಬಂದಾಗ ಕಡಪಗಳು ಮೇಲೆದ್ದಿರುವುದು, ಮಹಿಳೆಯ ಚಪ್ಪಲ್ಲು, ಸಿಮೆಂಟ್‌ ಒರೆಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಕಡಪಗಳನ್ನು ಹೊರ ತೆಗೆದಾಗ ವಾಸನೆ ಬರುವುದನ್ನು ಪರಿಶೀಲಿಸಿದ ಪೊಲೀಸರು ಮೇಲಧಿಕಾರಿಗಳ ಗಮನಕ್ಕೆ ತರುತ್ತಾರೆ.

ಶುಕ್ರವಾರ ಕಂದಾಯ ಅಧಿಕಾರಿಗಳು ಮತ್ತು ಪೊಲೀಸರ ತಂಡ ಮನೆ ಒಳಗೆ ಸೀಮೆಂಟ್‌ ಹಾಕಿ ಮುಚ್ಚಿದ್ದ ಶವವನ್ನು ಹೊರಗೆ ತೆಗೆದಿದ್ದಾರೆ. ಪೊಲೀಸರು ತಪಾಸಣೆಗೆ ಮನೆಗೆ ಬರುವಷ್ಟರಲ್ಲಿ ನಾರಪ್ಪ ತಲೆ ಮರೆಸಿಕೊಳ್ಳುತ್ತಾನೆ. ಪೋನ್‌ ಕೂಡ ಸ್ವಿಚ್ಛ ಆಫ್‌ ಮಾಡಿದ್ದು, ಆರೋಪಿ ತಲಾಶೆಯಲ್ಲಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಸ್ಥಳಕ್ಕೆ ಎಎಸ್ಪಿ ಮಹಾನಿಂಗ ನಂದಗಾವಿ, ಡಿವೈಎಸ್ಪಿ ಪಾಂಡುರಂಗ, ಪಿಎಸ್‌ಐ ಮಧು ಭೇಟಿ ನೀಡಿ ಪರಿಶೀಲಿಸಿದರು.

ಬೆಂಗಳೂರಿನಲ್ಲಿರುವ ಕೇಂದ್ರ ಸಚಿವರ ಮನೆಯ ಮುಂದೆಯೇ ರಿಯಲ್‌ ಎಸ್ಟೇಟ್‌ ಉದ್ಯಮಿಯ ಬರ್ಬರ ಕೊಲೆ

ಊರ ನಡುವಿನ ಮನೆ!
ಐದು ವರ್ಷ ಹಿಂದೆ ಮಠದಲ್ಲಿ ಸರಳವಾಗಿ ಮದುವೆ ಆದ ನಾರಪ್ಪ ವಾರ್ಷಿಕೋತ್ಸವದ ದಿನವೇ ಪತ್ನಿಯನ್ನು ಕೊಲೆ ಮಾಡಿದ್ದಾನೆ. ನಾರಪ್ಪನ ಕುಟುಂಬಕ್ಕೆ 5 ಎಕರೆ ಬೆದ್ದಲು ಭೂಮಿ ಇದ್ದು, ಟೀಚರ್‌ ಆಗಿರುವ ಈತನ ಸಹೋದರಿಯೊಂದಿಗೆ ತಂದೆ ತಾಯಿ ಇರುತ್ತಾರೆ. ಹಲವಾರು ವರ್ಷ ಬೆಂಗಳೂರಿನಲ್ಲಿ ಕೂಲಿ ನಾಲಿ ಮಾಡುತ್ತಿದ್ದ ನಾರಪ್ಪ ಆರೆಂಟು ವರ್ಷದ ಹಿಂದೆ ಊರಿಗೆ ಮರಳಿದ್ದ.

ಐದು ವರ್ಷದ ಹಿಂದೆ ಸಾಮೂಹಿಕ ವಿವಾಹದಲ್ಲಿ ಸುಮಾ ಅವರನ್ನು ಸರಳವಾಗಿ ವಿವಾಹವಾಗಿದ್ದ. ನಾಲ್ಕಾರು ವರ್ಷದ ಹಿಂದ ಬರಗಾಲದ ಕಾರಣ, ಸಾಲ ಮಾಡಿಕೊಂಡಿದ್ದು ಚಿತ್ರದುರ್ಗದ ದಿನಸಿ ಅಂಗಡಿಯಲ್ಲಿ ಸಾಮಾನು ಕಟ್ಟಲು ಹೋಗುತ್ತಿದ್ದು, ರಾತ್ರಿ ಮನೆಗೆ ಕುಡಿದು ಬರುತ್ತಿದ್ದ. ಊರ ನಡುವೆಯೆ ಇವರ ಮನೆ ಇದ್ದು, ತಂದೆಯ ಸಹೋದರ ಸಂಬಂಧಿಗಳು ಅಕ್ಕ ಪಕ್ಕದಲ್ಲಿಇದ್ದು, ಕೊಲೆ ಮಾಡಿ ಮನೆಯಲ್ಲಿ ಹೆಣವನ್ನು ಹೂತು ಹಾಕಿರುವುದು ಅವರಿಗೂ ಗೊತ್ತಿರಲಿಲ್ಲ.

ಸುಳಿವು ಕೊಟ್ಟ ಮಗ

ಪರಾರಿಯಾದ ನಾರಪ್ಪನ ಮಗನನ್ನು ಅಜ್ಜ ವಿಚಾರಿಸಿದಾಗ ಅಂದು ರಾತ್ರಿ ಅಪ್ಪಾಜಿ ರಾತ್ರಿ ರೂಮಿನಲ್ಲಿ ಸಿಮೆಂಟ್‌ ಕೆಲಸ ಮಾಡುತ್ತಿತ್ತು ಎಂದು ತಿಳಿಸಿದ್ದಾನೆ. ನಂತರ ಮನೆಯ ಒಳಗಿದ್ದ ಕಡಪದ ಕಲ್ಲು ಸಿಮೆಂಟ್‌ ಮರಳು ನೋಡಿದ ಪೊಲೀಸರಿಗೆ ಅನುಮಾನ ಹೆಚ್ಚಾಗಿದೆ. ಜೊತೆಗೆ ಹೆಂಡತಿ ಚಪ್ಪಲಿಗಳು ಮನೆಯಲ್ಲಿ ಇರುವುದನ್ನು ಗಮನಿಸಿದ ಪೊಲೀಸರು ಗಂಡನ ಮೇಲೆ ಸಂಶಯ ಪಟ್ಟಿದ್ದಾರೆ. ಹೂತಿಟ್ಟ ಹೆಣವನ್ನು ಹೊರಗೆ ತೆಗೆದ ಪೊಲೀಸರು ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೋಸ್ಟ್‌ ಮಾಟಮ್‌ ಮಾಡಿ ನಂತರ ಶವ ಸುಡಲು ವಹಿಸಿಕೊಟ್ಟಿದ್ದಾರೆ.



Read more

[wpas_products keywords=”deal of the day sale today offer all”]