ಅರ್ಜಿದಾರರ ಪರ ಹಿರಿಯ ವಕೀಲ ಕಿರಣ್ ಎಸ್. ಜವಳಿ, ‘ಪಿಎಂಎಲ್ ಕಾಯಿದೆಯ ಶೆಡ್ಯೂಲ್ ಅಪರಾಧ ಪ್ರಕರಣಗಳ ವ್ಯಾಪ್ತಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಯಿರುವ ರಣಬೀರ್ ದಂಡ ಸಂಹಿತೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿಯ ಅಪರಾಧ ಪ್ರಕರಣಗಳು ಬರುವುದಿಲ್ಲ. ಅಲ್ಲಿ ದಾಖಲಾದ ಪ್ರಕರಣಕ್ಕೆ ಕೇಂದ್ರ ಸರಕಾರ ಜಾರಿಗೆ ತಂದ ಕಾನೂನುಗಳು ಅನ್ವಯಿಸುವುದಿಲ್ಲ. ಹೀಗಾಗಿ, ತನಿಖೆ, ಕಂಪನಿಯ ಆಸ್ತಿ ಜಪ್ತಿಗೆ ಹೊರಡಿಸಿರುವ ಆದೇಶ ರದ್ದುಪಡಿಸಬೇಕು’ ಎಂದು ಕೋರಿದರು.
‘ಸದ್ಯ ಕಾಶ್ಮೀರ ವಿಶೇಷ ಸ್ಥಾನಮಾನ ನಿಯಮಕ್ಕೆ ಕೇಂದ್ರ ತಿದ್ದುಪಡಿ ಮಾಡಿದೆ. ಹಿರಿಯ ವಕೀಲ ಜವಳಿ ಅವರ ವಾದ ಒಪ್ಪಿಕೊಂಡರೆ, ರಾಜ್ಯವೊಂದರಲ್ಲಿ ಅಪರಾಧ ಕೃತ್ಯ ನಡೆಸಿದವರು ಶಿಕ್ಷೆಯಿಂದ ಪಾರಾಗುವ ಸಾಧ್ಯತೆಯಿದೆ. ಜತೆಗೆ ಇಡೀ ದೇಶದ ಮೇಲೆ ಆಗುವ ಪ್ರಭಾವ ಗಮನಿಸಬೇಕಾಗುತ್ತದೆ’ ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣದ ಹಿನ್ನೆಲೆ: ಮೆರ್ಸಸ್ ಎಸ್.ಎ. ರಾಥರ್ ಸ್ಪೈಸಿಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ 2002ರಿಂದ 2017ರ ನಡುವೆ ಜಮ್ಮು ಮತ್ತು ಕಾಶ್ಮೀರ ಬ್ಯಾಂಕಿನ ಬೆಂಗಳೂರು ಶಾಖೆಯಿಂದ 308.13 ಕೋಟಿ ರೂ. ಸಾಲ ಪಡೆದಿತ್ತು. ಆದರೆ, 2017ರಲ್ಲಿ ನಷ್ಟ ತೋರಿಸಿ ಸಾಲದ ಮೊತ್ತ ಹಿಂದಿರುಗಿಸಿರಲಿಲ್ಲ. ಇದೇ ಬ್ಯಾಂಕಿಗೆ ಭದ್ರತೆಯಾಗಿ ನೀಡಿದ್ದ ಕಂಪನಿಯ ಆಸ್ತಿಯನ್ನು ಇತರೆ ಖಾಸಗಿ ಬ್ಯಾಂಕಿಗಳಿಗೂ ನೀಡಿ ದೊಡ್ಡ ಮೊತ್ತದ ಸಾಲ ಪಡೆದಿತ್ತು ಹಾಗೂ ಬೇರೆ ಬೇರೆ ಕಂಪನಿಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದೆ ಎಂಬ ಆರೋಪ ಕಂಪನಿ ಮೇಲಿದೆ.
Read more
[wpas_products keywords=”deal of the day sale today offer all”]